More

    ನೂರಾರು ಮನೆಗಳ ಸಂಪರ್ಕ ಕಡಿತ

    ಬೆಳ್ತಂಗಡಿ/ಪುತ್ತೂರು: ಪಶ್ಚಿಮಘಟ್ಟದ ಬೆಟ್ಟ, ಚಿಕ್ಕಮಗಳೂರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಚಾರ್ಮಾಡಿಯ ತಪ್ಪಲಿನ ಗ್ರಾಮಗಳಲ್ಲಿ ನೆರೆ ಭೀತಿ ಆವರಿಸಿದೆ.
    ಚಾರ್ಮಾಡಿಯ ಅಂತರ, ಕೊಳಂಬೆ, ಅರಣೆಪಾದೆ, ಪರ್ಲಾಣಿ, ಹೊಸಮನೆ, ಕುಕ್ಕಾವು, ಕಕ್ಕೆನಾಜೆಯಲ್ಲಿ ಮೃತ್ಯುಂಜಯ ಹೊಳೆ ಗುರುವಾರ ರಾತ್ರಿಯಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸೇತುವೆಗಳು ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ಬೃಹತ್ ಮರದ ದಿಮ್ಮಿಗಳು, ಕಸ ಬಂದು ಸಿಲುಕುತ್ತಿದೆ. ಇದರಿಂದಾಗಿ ಸೇತುವೆಯ ಅಂಚಿನ ಮಣ್ಣು ರಸ್ತೆ ಸಮೇತ ಕೊಚ್ಚಿಕೊಂಡು ಹೋಗಿದೆ. ಕೆಲವೆಡೆ ಸೇತುವೆ ಸಂಪರ್ಕ ಕಳೆದುಕೊಂಡಿದ್ದು, ತೋಟಗಳಲ್ಲಿ ನೀರು ಹರಿಯುತ್ತಿದೆ.

    ಕೊಳಂಬೆ ಸಮೀಪ ಮನೆಯೊಂದು ಮುಳುಗಡೆಯಾಗಿದೆ. ಅಂತರ ಅರಣೆಪಾದೆ ಬಳಿ ತಡೆಗೋಡೆ ಬಿರುಕು ಬಿಟ್ಟಿದ್ದು, ಕಿರು ಸೇತುವೆ ಇಕ್ಕೆಲಗಳ ಮಣ್ಣು ಕೊಚ್ಚಿ ಹೋಗಿ ಸುಮಾರು 100 ಮನೆಗಳ ಸಂಪರ್ಕ ಕಡಿತಗೊಂಡಿದೆ. ಈ ಪ್ರದೇಶಕ್ಕೆ ಸಂಚರಿಸಬೇಕಾದರೆ ಪರ್ಲಾಣಿ ಪ್ರದೇಶವಾಗಿ ಏಳು ಕಿ.ಮೀ. ಸುತ್ತು ಬಳಸಿ ಹೋಗಬೇಕಾಗಿದೆ. ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಮರಮಟ್ಟುಗಳನ್ನು ಶುಕ್ರವಾರವೂ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ತಹಸೀಲ್ದಾರ್ ಮಹೇಶ್ ಜಿ, ಅಧಿಕಾರಿಗಳ ತಂಡ ಮತ್ತು ಶ್ರೀ ಧ.ಗ್ರಾ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಹಕರಿಸಿದರು.

    ಊಟ ಮಾಡಿ ಮನೆಗೆ ತೆರಳಿದರು
    ಗುಡ್ಡಕುಸಿತದ ಅಪಾಯ ಹಿನ್ನೆಲೆಯಲ್ಲಿ ಮಿತ್ತಬಾಗಿಲು ಗ್ರಾಮದ ಗಣೇಶ್ ನಗರದ 32 ಕುಟುಂಬಗಳನ್ನು ಮಿತ್ತಬಾಗಿಲು ಪ್ರಾಥಮಿಕ ಶಾಲೆಗೆ ಗುರುವಾರ ಸ್ಥಳಾಂತರಿಸಲಾಗಿತ್ತು. ಆದರೆ ರಾತ್ರಿ ಊಟ ಮಾಡಿದ ನಂತರ 8 ಕುಟುಂಬಗಳು ಮನೆಗೆ ಮರಳಿವೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts