More

    ವರ್ಷಧಾರೆಗೆ ಬೆಚ್ಚಿದ ಕರಾವಳಿ, ಉತ್ತರ ಕನ್ನಡದ ಶಿರಾಲಿಯಲ್ಲಿ ಬರೋಬ್ಬರಿ 200 ಮಿಮೀ ದಾಖಲೆಯ ಮಳೆ

    ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಬಿರುಸು ಪಡೆದಿದ್ದು, ಮುಂದಿನ 4 ದಿನ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ.

    ಗುರುವಾರ ಸುರಿದ ಮಳೆಗೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು ನಲುಗಿವೆ. ಉತ್ತರ ಕನ್ನಡದ ಶಿರಾಲಿಯಲ್ಲಿ ಬರೋಬ್ಬರಿ 200 ಮಿಮೀ ಮಳೆ ಬಿದ್ದಿದೆ. ಅಂಕೋಲಾ 120 ಮಿಮೀ, ಹೊನ್ನಾವರ ಮತ್ತು ಮಂಕಿ ತಲಾ 110 ಮಿಮೀ, ದಕ್ಷಿಣ ಕನ್ನಡದ ಪಣಂಬೂರು 180 ಮಿಮೀ, ಮಂಗಳೂರು 130 ಮಿಮೀ, ಮುಲ್ಕಿ 110 ಮಿಮೀ, ಉಡುಪಿಯ ಕುಂದಾಪುರ ಮತ್ತು ಕೋಟಾ ತಲಾ 120 ಮಿಮೀ, ಕೊಡಗು 100 ಮಿಮೀ ಮಳೆಯಾಗಿದೆ.

    ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜು 1ರಿಂದ ಜು.4ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಚಾಮರಾಜನಗರದಲ್ಲಿ ಜು 2ರಂದು, ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಜು 4ರಂದು ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 4 ದಿನ ಸಾಧಾರಣ ಮಳೆಯಾಗಲಿದೆ.

    VIDEO:ಫ್ಯಾಷನ್​ ಜಗತ್ತಿಗೆ ಸೆಡ್ಡು ಹೊಡೆದ ಈ ಯುವಕನ ರ‍್ಯಾಂಪ್​ ವಾಕ್ ವಿಡಿಯೋ ವೈರಲ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts