More

    ಜಿಲ್ಲೆಯಾದ್ಯಂತ ಮಳೆ ಬಿರುಸು! ಭದ್ರಾ ಡ್ಯಾಂನಲ್ಲಿ ನೀರಿನ ಸಂಗ್ರಹ ಎಷ್ಟಿದೆ ಗೊತ್ತೇ?

    ಭದ್ರಾವತಿ: ತಾಲೂಕಿನಲ್ಲಿ ಬುಧವಾರದಿಂದ ಉತ್ತಮ ಮಳೆಯಾಗುತ್ತಿದ್ದು ಮಳೆಯ ಕೊರತೆಯ ಪ್ರಮಾಣ ಕಡಿಮೆಯಾಗುತ್ತಿದೆ. ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಅಡಕೆ, ಭತ್ತ, ಕಬ್ಬು, ದ್ವಿದಳಧಾನ್ಯಗಳ ಬೆಳೆಗಳು ಸೇರಿ ಎಲ್ಲ ರೀತಿಯ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗಿದ್ದು ರೈತರ ಸಮಸ್ಯೆ ದೂರವಾಗುತ್ತಿದೆ.

    ಜುಲೈ ತಿಂಗಳ ಪ್ರಸ್ತುತ ದಿನದವರೆಗೂ 128 ಮಿಮೀ ಮಳೆಯಾಗಬೇಕಿತ್ತು. ಈಗ 100 ಮಿಮೀ ಮಳೆಯಾಗಿದ್ದು ಕಳೆದ ತಿಂಗಳಿನಲ್ಲಿದ್ದ ಸರಾಸರಿ ಪ್ರಮಾಣದ ಮಳೆಯ ಕೊರತೆ ಇದೀಗ ನಿವಾರಣೆಯಾಗುತ್ತಿದೆ. ಭದ್ರಾ ಜಲಾಶಯದ ನೀರಿನ ಮಟ್ಟ ಗುರುವಾರ 142.1 ಏರಿಕೆ ಕಂಡಿದೆ. 4,227 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಬೇಗನೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ರೈತರು ನಿಟ್ಟುಸಿರು ಬಿಟ್ಟಿದ್ದು ಜಮೀನು, ತೋಟದ ಕೆಲಸಗಳತ್ತ ಮುಖ ಮಾಡಿದ್ದಾರೆ. ನಿರಂತರ ಮಳೆಯಿಂದಾಗಿ ವ್ಯಾಪಾರಸ್ತರಿಗೆ ಅನಾನುಕೂಲವಾಗಿದೆ. ಸುರಿಯುತ್ತಿರುವ ಜಿಟಿಜಿಟಿ ಮಳೆ ನಾಗರಿಕರನ್ನು ಮನೆಯಿಂದ ಹೊರಹೋಗದಂತೆ ಮಾಡಿದೆ. ಬೀದಿ ಬದಿ ವ್ಯಾಪಾರಸ್ಥರು, ತರಕಾರಿ ಮಾರಾಟಗಾರರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸ್ವಲ್ಪ ಪ್ರಮಾಣದ ಸಮಸ್ಯೆ ಎದುರಿಸಬೇಕಾಗಿದೆ. ಮಳೆಯಿಂದಾಗಿ ಎಲ್ಲಿಯೂ ಹಾನಿಯಾಗಿರುವ ಘಟನೆ ವರದಿಯಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts