More

    ಗಾಳಿ, ಮಳೆಯಿಂದ ಅಡಕೆ ತೋಟಗಳಿಗೆ ಭಾರಿ ಹೊಡೆತ

    ಸಾಗರ: ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಗಾಳಿ, ಮಳೆಗೆ ಅಡಕೆ ಮರಗಳು ನೆಲಕ್ಕುರುಳಿವೆ. ಕೆಲವು ಕಡೆ ಕೆರೆ ದಂಡೆ ಒಡೆದಿದೆ, ಅಽಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತಿz್ದÁರೆ.

    ನಗರದಲ್ಲಿ ಸಾಕಷ್ಟು ಮನೆಗಳ ಮೇಲೆ ಮರಗಳು ಬಿದ್ದಿದ್ದು ಸಾಗರದ ಕಾರಾಗೃಹದ ಕಾಂಪೌAಡ್ ಗಾಳಿ, ಮಳೆಗೆ ಕುಸಿದುಬಿದ್ದಿದೆ, ನಗರದ ವಿವಿಧ ವೃತ್ತಗಳಲ್ಲಿ, ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಗುಂಡಿಬಿದ್ದು ಜನ ಮತ್ತು ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯುAಟಾಗಿದೆ. ತಾಲೂಕಿನ ಭೀಮನಕೋಣೆ ವ್ಯಾಪ್ತಿಯಲ್ಲಿ ಪರಶುರಾಮï ಎನ್ನುವವರ ಅಡಕೆ ತೋಟದಲ್ಲಿ ಬೇಲಿ ಸಾಲಿನಲ್ಲಿದ್ದ ನೇರಳೆಮರ ಬಿದ್ದು -Àಸಲು ಬರುತ್ತಿದ್ದ ಅಡಕೆ ಮರಗಳು ನೆಲಕ್ಕುರುಳಿವೆ. ಸಂಕಣ್ಣ ಶಾನುಭೋಗ್ ವ್ಯಾಪ್ತಿಯ ಮಳೂರು ಗ್ರಾಮದ ನೇರಿಗೆ ತಿಮ್ಮಪ್ಪ ಎನ್ನುವವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ. ಕೆಳದಿ ಪಂಚಾಯಿತಿಯ ಬಂದಗz್ದೆ ಕೆರೆ ಒಡೆದಿದೆ. ಇಡುವಾಣಿಯ ಕಮಲಮ್ಮ ಅವರ ಮನೆಯ ಮೇಲೆ ಅಡಕೆ ಮರ ಬಿದ್ದು ತೀವ್ರ ಹಾನಿಯುಂಟಾಗಿದೆ. ಮಾಸೂರು ಗ್ರಾಪಂ ವ್ಯಾಪ್ತಿಯ ಸಾವಿತ್ರಮ್ಮ ಅವರ ಕೊಟ್ಟಿಗೆಯ ಮೇಲೆ ತೆಂಗಿನಮರ ಬಿದ್ದು ಇಡೀ ಕೊಟ್ಟಿಗೆಮನೆ ನೆಲಕ್ಕುರುಳಿದೆ. ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts