More

    ಹೃದ್ರೋಗಿಯನ್ನು ದಾರಿ ಮಧ್ಯೆಯೇ ಬಸ್ಸಿನಿಂದ ಇಳಿಸಿದ ಜನ!

    ಮಂಗಳೂರು: ಕೈಯಲ್ಲಿದ್ದ ಆಸ್ಪತ್ರೆ ಬ್ಯಾಡ್ಜ್ ಕಂಡು ಹೃದ್ರೋಗಿಯೊಬ್ಬರನ್ನು ಸಹಪ್ರಯಾಣಿಕರು ದಾರಿ ನಡುವೆ ಕೆಎಸ್‌ಆರ್‌ಟಿಸಿ ಬಸ್‌ನಿಂದ ಕೆಳಗಿಳಿಸಿದ ಘಟನೆ ಹಾಸನ ಸಮೀಪ ಸೋಮವಾರ ನಡೆದಿದೆ.

    ತೊಂದರೆಗೆ ಒಳಗಾದ ವ್ಯಕ್ತಿಯ ಹೆಸರು ಮಹಾದೇವ. ವೃತ್ತಿಯಲ್ಲಿ ಇವರು ಕೆಎಸ್‌ಆರ್‌ಟಿಸಿ ಬಸ್ ಚಾಲಕ. ಘಟನೆ ಸಂದರ್ಭದಲ್ಲಿ ಅವರು ಪ್ರಯಾಣಿಕರಾಗಿದ್ದರು. ಮೂರು ತಿಂಗಳ ಹಿಂದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿದ್ದ ಮೈಸೂರಿನ 36 ವರ್ಷ ವಯಸ್ಸಿನ ಇವರು, ವೈದ್ಯಕೀಯ ಮರು ತಪಾಸಣೆಗಾಗಿ ಸೋಮವಾರ ಮಂಗಳೂರಿಗೆ ಬಂದು, ಔಷಧಿ ಖರೀದಿಸಿ ಹಗಲು ಬಸ್‌ನಲ್ಲಿ ಮೈಸೂರಿಗೆ ವಾಪಸಾಗುತ್ತಿದ್ದರು. ಇದನ್ನೂ ಓದಿ: ಪ್ರಿಯಾಂಕಾ ನಾಯಕತ್ವ, ದೇವೇಗೌಡರ ರಾಜಕೀಯ ಭವಿಷ್ಯ ಕುರಿತು ವಿಶ್ವನಾಥ್ ಚಿಂತೆ!

    ಆಸ್ಪತ್ರೆ ಒಳಗೆ ನಿರ್ದಿಷ್ಟ ರೋಗಿಯನ್ನು ಗುರುತಿಸಲು ಅವರ ಕೈಗೆ ಕಟ್ಟುವ ಬ್ಯಾಡ್ಜನ್ನು ಆಸ್ಪತ್ರೆ ಹೊರಗೆ ಬರುವಾಗ ಅವರು ತೆಗೆದಿರಲಿಲ್ಲ. ಬಸ್ ಹಾಸನ ತಲುಪುತ್ತಿದ್ದ ಸಂದರ್ಭ ಸಮೀಪ ಕುಳಿತಿದ್ದ ಪ್ರಯಾಣಿಕ ಮಹಾದೇವ ಅವರ ಕೈಯಲ್ಲಿದ್ದ ಆಸ್ಪತ್ರೆಯ ಬ್ಯಾಡ್ಜ್ ಗಮನಿಸಿದರು. ಅದು ಕರೊನಾ ಕ್ವಾರಂಟೈನ್ ಬ್ಯಾಡ್ಜ್ ಎಂದು ತಪ್ಪಾಗಿ ತಿಳಿದು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಭಯಗೊಂಡ ಎಲ್ಲ ಪ್ರಯಾಣಿಕರು ಒತ್ತಾಯಪಡಿಸಿ ಮಹಾದೇವ ಅವರನ್ನು ಬಸ್‌ನಿಂದ ಕೆಳಗೆ ಇಳಿಸಿದ್ದು, ಮಾತ್ರವಲ್ಲ ಮಹಾದೇವ ಅವರನ್ನು ಪೊಲೀಸರಿಗೆ ಒಪ್ಪಿಸಲು ತೀರ್ಮಾನಿಸಿದರು.

    ವಾಸ್ತವ ತಿಳಿಸಲು ಮಹಾದೇವ ಎಷ್ಟು ಪ್ರಯತ್ನಿಸಿದರೂ ಉಳಿದವರು ಕೇಳಲಿಲ್ಲ. ಮಹಾದೇವ ಅವರು ಕೊನೆಯ ಪ್ರಯತ್ನವಾಗಿ ಮಂಗಳೂರಿನಲ್ಲಿ ತಮಗೆ ಚಿಕಿತ್ಸೆ ನೀಡುತ್ತಿರುವ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಮೊಬೈಲ್ ಮೂಲಕ ಡಾ. ಕಾಮತ್ ವಸ್ತುಸ್ಥಿತಿಯನ್ನು ಪ್ರಯಾಣಿಕರಿಗೆ ಮನದಟ್ಟು ಮಾಡಿದರು. ಮೊಬೈಲ್ ಫೋನ್ ಲೌಡ್‌ಸ್ಪೀಕರ್ ಮೂಲಕ ಡಾಕ್ಟರ್ ಧ್ವನಿ ಆಲಿಸಿದ ಪ್ರಯಾಣಿಕರು ವಿಷಯ ತಿಳಿದು ನಂತರ ಸುಮ್ಮನಾದರು. ಇದನ್ನೂ ಓದಿ: ಕ್ವಾರಂಟೈನ್ ವ್ಯಕ್ತಿ ಕರೆಸಿಕೊಳ್ಳಲು ಅಂಬುಲೆನ್ಸ್ ಕಳಿಸಿದ ಕೇರಳ ಸರ್ಕಾರ!

    ಈ ಕುರಿತು ಮಾತನಾಡಿದ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್, ‘‘ಕೋವಿಡ್-19 ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳು ಇಂತಹ ಪ್ರಮಾದಗಳಿಗೆ ಕಾರಣ. ಬಸ್ಸಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಈ ಪರಿಸ್ಥಿತಿಯಾದರೆ ಸಾಮಾನ್ಯ ಜನರ ಪಾಡೇನು? ಈ ಬಗ್ಗೆ ಇನ್ನಷ್ಟು ಜಾಗೃತಿಯಾಗಬೇಕು. ಇಲ್ಲದಿದ್ದರೆ ಜನರು ತೊಂದರೆಗೆ ಒಳಗಾಗುವುದು ತಪ್ಪುವುದಿಲ್ಲ’’ ಎಂದು ಅಭಿಪ್ರಾಯಪಟ್ಟರು.

    ಡಿ.ಕೆ.ಶಿ. ಪದಗ್ರಹಣ ಸಮಾರಂಭ ಮಾಡೇ ಮಾಡ್ತೀವಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸೆಡ್ಡು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts