More

    VIDEO| ಕರೊನಾ ತವರು ಚೀನಾದಲ್ಲಿ ಮನಕಲಕುವ ಘಟನೆ: ಒಂದೇ ಸ್ಥಳದಲ್ಲಿ ಸುತ್ತುತ್ತಿರುವ ಬೆಂಗಾಲ್​ ಟೈಗರ್​!

    ಬೀಜಿಂಗ್​: ಖಿನ್ನತೆಯು ಇಂದು ಜಾಗತಿಕವಾಗಿ ಹೆಚ್ಚು ಜನರನ್ನು ಕಾಡುತ್ತಿರುವ ಮಾನಸಿಕ ರೋಗ. ಜೀವನದ ಉತ್ಸಾಹವನ್ನೇ ಕಿತ್ತುಕೊಳ್ಳುವ ಖಿನ್ನತೆಗೆ ಪ್ರಾಣಿಗಳು ಸಹ ಹೊರತಾಗಿಲ್ಲ ಎಂಬುದಕ್ಕೆ ಮನಕಲಕುವ ಈ ಒಂದು ವಿಡಿಯೋ ಸಾಕ್ಷಿಯಾಗಿದೆ.

    ಚೀನಾದ ಬೀಜಿಂಗ್​ನಲ್ಲಿರುವ ಮೃಗಾಲಯದಲ್ಲಿ ಕಂಬನಿ ಮಿಡಿಯುವ ದೃಶ್ಯ ಕಂಡುಬಂದಿದೆ. ಬೆಂಗಾಲ್​ ಟೈಗರ್​ ತನ್ನ ಬೋನಿನ ಮುಂದೆ ವ್ಯಾಯಾಮ ಮಾಡಲು ಇರುವ ಚಿಕ್ಕ ಜಾಗದಲ್ಲಿ ತನ್ನಷ್ಟಕ್ಕೆ ತಾನೇ ರೌಂಡ್​ ಹೊಡೆಯುವುದನ್ನು ಪ್ರವಾಸಿಗರೊಬ್ಬರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಬೀಜಿಂಗ್​ ಜೂ ಅಧಿಕಾರಿಗಳು, ಹುಲಿಯ ಕಾವಲುಗಾರ ಅದರ ವಿಚಿತ್ರ ವರ್ತನೆಯನ್ನು ಗಮನಿಸಿದ ಬಳಿಕ, ಹುಲಿಗೆ ಮಾನಸಿಕ ಸಮಾಲೋಚನೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಇತ್ತ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋವನ್ನು ಈಗಾಗಲೇ 10 ಮಿಲಿಯನ್​ ಮಂದಿ ವೀಕ್ಷಣೆ ಮಾಡಿದ್ದಾರೆ. ಹುಲಿ ವೃತ್ತಾಕಾರದಲ್ಲಿ ಸುತ್ತಿ…ಸುತ್ತಿ ಕೊನೆಗೆ ಒಂದು ವೃತ್ತದ ಗುರುತನ್ನೇ ನೆಲದ ಮೇಲೆ ಮೂಡಿಸಿರುವುದು ಅದರ ಖಿನ್ನತೆಯ ಪ್ರಭಾವವನ್ನು ಬಿಂಬಿಸುವಂತಿದೆ. ವಿಡಿಯೋ ನೋಡಿರುವ ಚೀನಾದ ವೆಬ್​ ಬಳಕೆದಾರರು ಮತ್ತು ಪ್ರಾಣಿ ಪ್ರಿಯರು ಬೆಂಗಾಲ್​ ಟೈಗರ್​ನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

    ಹುಲಿಯ ಮಾನಸಿಕ ಸ್ಥಿತಿಯನ್ನು ನೆಟ್ಟಿಗರು ಸಹ ಗುರುತಿಸಿದ್ದು, ಹುಲಿಗೆ ಸಾಕಷ್ಟು ಸ್ಥಳಾವಕಾಶವಿದ್ದರೂ ಒಂದೇ ಕಡೆ ಸುತ್ತುವುದನ್ನು ನೋಡಿದರೆ ಅದಕ್ಕೆ ಮಾನಸಿಕ ರೋಗವಿದೆ ಎಂಬುದು ಗೊತ್ತಾಗುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಇನ್ನೊರ್ವ ಹುಲಿಯನ್ನು ನೋಡಲು ಖಿನ್ನತೆಗೆ ಜಾರಿರುವಂತಿದೆ ಎಂದಿದ್ದಾರೆ.

    ಜೂನಲ್ಲಿ ಪ್ರಾಣಿಗಳು ದೀರ್ಘವಾಗಿ ಉಳಿದುಕೊಂಡರೆ ಈ ರೀತಿಯ ವರ್ತನೆ ಪ್ರಾಣಿಗಳಲ್ಲಿ ಸಹಜ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ. ಅಲ್ಲದೆ, ಹುಲಿಯನ್ನು ಪ್ರಾಣಿ ವರ್ತನೆ ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅದಕ್ಕಾಗಿ ಹೆಚ್ಚಿನ ಆಹಾರ ಮತ್ತು ಆಟಿಕೆಗಳನ್ನು ತರಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಆಪ್ತ ಸಮಾಲೋಚನೆಯನ್ನು ಕೊಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ಕರೊನಾ ವೈರಸ್​ ಹರಡಿದ್ದು ಹೇಗೆ?: ಸ್ಪೋಟಕ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts