More

    Heart Attacks: ಮಕ್ಕಳಲ್ಲಿ ಹೃದಯ ವೈಫಲ್ಯಕ್ಕೆ ಕಾರಣವೇನು? ಹೃದಯಾಘಾತವಾದಾಗ ಏನು ಮಾಡಬೇಕು?

    ಪ್ರಸ್ತುತ ದಿನಗಳಲ್ಲಿ ಹೃದಯಾಘಾತವು ಕೂಡ ಒಂದು ಟ್ರೆಂಡಿಂಗ್ ವಿಷಯವಾಗಿದೆ. ಈ ಹೃದಯಾಘಾತ ಯಾವಾಗ? ಯಾರಿಗೆ? ಹೇಗೆ? ಬರುತ್ತದೋ ಗೊತ್ತಿಲ್ಲ. ಆಟವಾಡುತ್ತಿರುವಾಗಲೇ ಕುಸಿದು ಬೀದ್ದು, ಆಸ್ಪತ್ರೆಗೆ ಬರುವಷ್ಟರಲ್ಲಿ ಹೃದಯಾಘಾತದಿಂದ ಸಾಯುವವರೂ ಇದ್ದಾರೆ. ನಿದ್ದೆ ಮಾಡುವಾಗ, ಟಿವಿ ನೋಡುವಾಗ ಹೃದಯಾಘಾತಗಳು ಸಂಭವಿಸುತ್ತಿವೆ. ದಿನಕ್ಕೆ ನಾಲ್ಕೈದು ಹೃದಯಾಘಾತದ ಸುದ್ದಿಗಳನ್ನು ಕೇಳುತ್ತಿದ್ದೇವೆ. ಅದರಲ್ಲೂ ಕರೊನಾ ನಂತರ ಹೃದಯಾಘಾತಗಳ ಸಂಖ್ಯೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಘಾತಕಾರಿ ಸಂಗತಿ ಏನೆಂದರೆ, ಚಿಕ್ಕಮಕ್ಕಳು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ.

    ಅಂದಹಾಗೆ ದೇಹದ ಅಂಗಗಳಿಗೆ ರಕ್ತವನ್ನು ಸರಿಯಾಗಿ ಪಂಪ್ ಮಾಡದಿದ್ದಾಗ ಹೃದಯ ಸ್ತಂಭನ ಸಂಭವಿಸುತ್ತದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಕ್ಕಳನ್ನು ಉಳಿಸಬಹುದು.

    ಹೃದಯಾಘಾತ ವಯಸ್ಸಾದವರು ಕಾಯಿಲೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಏಕೆಂದರೆ, 60 ವರ್ಷಗಳ ನಂತರ ಇದು ಸಂಭವಿಸುತ್ತಿತ್ತು. ಆದರೆ, ಈಗ 9 ವರ್ಷದ ಮಕ್ಕಳನ್ನೂ ಹೃದಯಾಘಾತ ಬಿಟ್ಟಿಲ್ಲ. ಒಂದೇ ತಿಂಗಳಲ್ಲಿ ನಾಲ್ಕೈದು ಮಕ್ಕಳು ಹೃದಯಾಘಾತಕ್ಕೆ ಮೃತಪಟ್ಟ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ವಯಸ್ಕರಂತೆ ಮಕ್ಕಳು ಸಹ ಹೃದಯಾಘಾತಕ್ಕೆ ಒಳಗಾಗಬಹುದು. ದೇಹದ ಅಂಗಗಳಿಗೆ ರಕ್ತವನ್ನು ಸರಿಯಾಗಿ ಪಂಪ್ ಮಾಡದಿದ್ದಾಗ ಹೃದಯ ಸ್ತಂಭನ ಸಂಭವಿಸುತ್ತದೆ.

    ಇದನ್ನೂ ಓದಿ: ದಸರಾ ಹಬ್ಬಕ್ಕೆ KSRTCಯಿಂದ ಹೆಚ್ಚುವರಿ ಬಸ್​ ಸೇವೆ: ಟಿಕೆಟ್​ ಮೇಲೆ ರಿಯಾಯಿತಿ, ಇಲ್ಲಿದೆ ಸಂಪೂರ್ಣ ಮಾಹಿತಿ…​

    ಮಕ್ಕಳಲ್ಲಿ ಹೃದಯ ವೈಫಲ್ಯಕ್ಕೆ ಕಾರಣವೇನು?
    ಕೆಲವು ಮಕ್ಕಳು ಹುಟ್ಟುವಾಗಲೇ ಹೃದಯ ದೋಷಗಳೊಂದಿಗೆ ಜನಿಸುತ್ತಾರೆ. ಅಂದರೆ, ಗರ್ಭದಲ್ಲಿರುವಾಗ ಹೃದಯ ರಚನೆಯಲ್ಲಿ ಅಸಹಜತೆಗಳಿರುತ್ತವೆ. ಅಂಥವರಲ್ಲಿ ರಕ್ತ ಪರಿಚಲನೆ ಕ್ರಮಬದ್ಧವಾಗಿರುವುದಿಲ್ಲ. ಅಂತಹ ಮಕ್ಕಳು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳು ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ಕಾಯಿಲೆಗಳನ್ನು ಹೊಂದಿರುತ್ತಾರೆ. ಇಂತಹ ಸೋಂಕುಗಳು ತೀವ್ರವಾದಾಗ, ಹೃದಯದ ಮೇಲಿನ ಒತ್ತಡವು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

    ಕೆಲವು ಮಕ್ಕಳಲ್ಲಿ ಸಣ್ಣ ಹೃದಯ ಸಮಸ್ಯೆಗಳು ಪತ್ತೆಯಾಗುವುದಿಲ್ಲ. ಆದರೆ, ಹೃದಯ ಸಂಬಂಧಿ ಸಮಸ್ಯೆಗಳು ತೀವ್ರಗೊಂಡಾಗ ಮಾತ್ರ ಪತ್ತೆ ಹಚ್ಚಬಹುದು. ಇದಲ್ಲದೆ ಕೆಲವೊಮ್ಮೆ ಹೆಚ್ಚಿನ ಪ್ರಮಾಣದ ಮಾತ್ರೆಗಳು ಮಕ್ಕಳಲ್ಲಿ ಹೃದಯ ಸ್ತಂಭನವನ್ನು ಉಂಟುಮಾಡಬಹುದು.

    ಮಕ್ಕಳಿಗೆ ಹೃದಯಾಘಾತವಾದಾಗ ಏನು ಮಾಡಬೇಕು?
    ಮಕ್ಕಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿದ್ದಾಗ ಮೊದಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿ. ಹತ್ತಿರದಲ್ಲಿ ಆಸ್ಪತ್ರೆ ಇದ್ದರೆ, ಅವನನ್ನು/ಅವಳನ್ನು ತಕ್ಷಣ ಅಲ್ಲಿಗೆ ಕರೆದೊಯ್ಯಿರಿ. ಜೋರಾಗಿ ಕೂಗಿ. ಮಗು ನಿಮಗೆ ಪ್ರತಿಕ್ರಿಯಿಸುತ್ತದೆಯೇ ಎಂದು ನೋಡಿ. ಮಗು ಉಸಿರಾಡುತ್ತಿದೆಯೇ ಎಂದು ಪರಿಶೀಲಿಸಿ. ಮಗು ಉಸಿರಾಡದಿದ್ದರೆ ನೀವು ಸಿಪಿಆರ್ ಅನ್ನು ಸಹ ನೀಡಬಹುದು. (ಏಜೆನ್ಸೀಸ್​)

    ಇತಿಹಾಸ ಮರುಕಳಿಸಲಿದೆ ಎಂದ ಶೋಯೆಬ್​ ಅಖ್ತರ್​: ಭಾರತೀಯರ ಟ್ರೋಲ್​ಗೆ ಬೆದರಿ ಪೋಸ್ಟ್​ ಡಿಲೀಟ್​

    ಪಿತೃಋಣ ತೀರಿಸಲು ಇರುವ ಪರ್ವ ಕಾಲ

    ಗಾಜಾ ಒಳಗೆ ನುಗ್ಗಿ ಕಾರ್ಯಾಚರಣೆ ಶುರು: ಇಸ್ರೇಲ್​ನಿಂದ ವಿನಾಶಕಾರಿ ಆಕ್ರಮಣದ ಸುಳಿವು,​ ಜೀವ ಭಯದಲ್ಲೇ ನಾಗರಿಕರ ಪಲಾಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts