More

    ದೆವ್ವ ಎಂಬುದು ಭ್ರಮೆ: ಡಾ.ಸಿ.ಆರ್.ಚಂದ್ರಶೇಖರ್ ಪ್ರತಿಪಾದನೆ

    ಶಿವಮೊಗ್ಗ: ಮೂಢನಂಬಿಕೆ, ಅಂಧವಿಶ್ವಾಸ ಹಾನಿಕರವಾಗಬಲ್ಲದು. ಕುರುಡು ನಂಬಿಕೆಯನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು. ಸಮಾಜದಲ್ಲಿ ಉತ್ತಮ ಮನುಷ್ಯರಾಗುವತ್ತ ತಮ್ಮ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಬೆಂಗಳೂರು ನಿಮ್ಹಾನ್ಸ್‌ನ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ್ ಹೇಳಿದರು.
    ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಮತ್ತು ಮೂಢನಂಬಿಕೆಗಳು ಕುರಿತು ಉಪನ್ಯಾಸ ನೀಡಿದ ಅವರು, ಮಗು, ಕೋಣ ಬಲಿಯಿಂದ ಯಾವುದೂ ಫಲಿಸುವುದಿಲ್ಲ. ಕೆಲವರು ಹಣ ಮಾಡುವುದಕ್ಕಾಗಿ ಜನರ ದಾರಿ ತಪ್ಪಿಸುತ್ತಾರೆ. ದೇವರು, ದೆವ್ವದ ಹೆಸರಲ್ಲಿ ಜನರಿಗೆ ಮಂಕುಬೂದಿ ಎರಚುತ್ತಾರೆ ಎಂದರು.
    ಮಂತ್ರವಾದಿ, ತಂತ್ರವಾದಿಯಿಂದ ಸಾಧ್ಯವಾಗದ ಕೆಲಸವನ್ನು ಮನೋವೈದ್ಯರು ಮಾಡುತ್ತಾರೆ. ಸಮಾಜದಲ್ಲಿ ದೆವ್ವಭೂತಗಳಿಲ್ಲ. ಮೈಮೇಲೆ ದೇವರು, ದೆವ್ವ ಬರುವುದಿಲ್ಲ. ಅದೊಂದು ಮಾನಸಿಕ ವಿಶೇಷ ಅಷ್ಟೆ. ದೆವ್ವ ನೋಡುತ್ತೇವೆ ಎಂಬುದು ಭ್ರಮೆ. ದೆವ್ವವೂ ಇಲ್ಲ, ದೇವರೂ ಇಲ್ಲ. ಭ್ರಮಾಲೋಕದಿಂದ ಮೊದಲು ಹೊರಬೇಕಿದೆ ಎಂದು ತಿಳಿಸಿದರು.
    ವಾಸ್ತುಗಾಗಿ ವಿಧಾನಸೌಧವನ್ನೇ ಒಡೆದು ಹಾಕುವ ಮೂರ್ಖರು ನಮ್ಮಲಿದ್ದಾರೆ. ಮನುಷ್ಯನಲ್ಲಿ ದೇಹ, ಮನಸ್ಸು ಮತ್ತು ಆತ್ಮ ಮುಖ್ಯ. ಆದರೆ ಸಾವಿನ ನಂತರ ಅನೇಕ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಸ್ವರ್ಗ-ನರಕ, ಪ್ರೇತಲೋಕ-ಪರಲೋಕ, ದೆವ್ವ-ಭೂತ, ಪುನರ್ಜನ್ಮ, ಮುಕ್ತಿ-ಮೋಕ್ಷ, ಆತ್ಮ-ಪರಮಾತ್ಮ ಎಂಬುದು ನಮ್ಮ ಕಲ್ಪನೆಯಷ್ಟೆ ಎಂದು ಹೇಳಿದರು.
    ————

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts