More

    ಇನ್​​ಫ್ಲುಯೆಂಜಾ ಜ್ವರದ ಬಗ್ಗೆ ಎಚ್ಚರಿಕೆವಹಿಸಲು ಆರೋಗ್ಯ ಇಲಾಖೆ ಸೂಚನೆ; ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳು ಇಂತಿವೆ…

    ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಇನ್​​ಫ್ಲುಯೆಂಜಾ ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಗಳನ್ನು ನೀಡಿದೆ.

    ಇನ್​​ಫ್ಲುಯೆಂಜಾ ಚಿಕಿತ್ಸೆಗೆ ಉತ್ತಮ ಆಯ್ಕೆಯಾಗಿರುವ ಒಸಲ್ಟಾಮಿವಿರ್ ಆ್ಯಂಟಿ-ವೈರಲ್ ಔಷಧಿಯನ್ನು ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇದು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವುದಾಗಿ ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ಕೊಡವ ಶೈಲಿಯ ಉಡುಗೆ ಧರಿಸಿ ಫೋಸ್ ಕೊಟ್ಟ ಸಿಎಂ ಬೊಮ್ಮಾಯಿ; ಫೋಟೋ ವೈರಲ್

    ಕೆಲದಿನಗಳಿಂದ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇನ್​​ಫ್ಲುಯೆಂಜಾ ಜ್ವರ ಪ್ರಕರಣ ವರದಿಯಾಗುತ್ತಿದ್ದು, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಐಸಿಎಂಆರ್ ಲ್ಯಾಬ್ ಡೇಟಾ ವಿಶ್ಲೇಷಣೆಯಿಂದ ಕರ್ನಾಟಕದಲ್ಲೂ ಈ ಸೋಂಕು ಪ್ರಕರಣಗಳು ಹೆಚ್ಚಳವಾಗಿರುವುದು ತಿಳಿದು ಬಂದಿದೆ.

    ಋತುಮಾನದ ಪ್ಲೂ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಜ್ವರ ಇರುವ ವ್ಯಕ್ತಿಯ ಕೆಮ್ಮಿದಾಗ ಹಾಗೂ ಸೀನಿದಾಗ ಹೊರಹೊಮ್ಮುವ ತುಂತುರು ಹನಿಗಳ ಸಂಪರ್ಕದಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತದೆ. ಸ್ವಯಂ ನಿಯಂತ್ರಣಕ್ಕೆ ಬರುವ ಈ ಸಾಂಕ್ರಾಮಿಕ ರೋಗವು 5-7 ದಿನಗಳ ವರೆಗೆ ಕಾಡಲಿದೆ. ಕಡಿಮೆ ರೋಗಸ್ಥಿತಿ ಹಾಗೂ ಮರಣ ಉಂಟುಮಾಡುವಂಥದ್ದಾಗಿದೆ. ಕೆಲವರಿಗೆ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಬರಬಹುದು. ಹಾಗಾಗಿ ಶಿಶುಗಳು, ವಯಸ್ಸಾದವರು, ಹಿರಿಯರು, ಗರ್ಭಿಣಿಯರು, ರೋಗ ನಿರೋಧಕ ಶಕ್ತಿ ಕುಂಠಿತಗೊಂಡವರು, ದೀರ್ಘಕಾಲದವರೆಗೆ ನಿರ್ದಿಷ್ಟವಾಗಿ ಸ್ಟಿರಾಯಿಡ್ ಸೇರಿ ಇತರೆ ಔಷಧ ತೆಗೆದುಕೊಳ್ಳುತ್ತಿರುವವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.

    ಇದನ್ನೂ ಓದಿ: ಶಿವಮೊಗ್ಗ | ಅನಾಮಿಕ ಕರೆ ಆಧರಿಸಿ 10 ಕೋಟಿ ರೂ. ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ಕಿದ್ದು ಬಟ್ಟೆ ಬಂಡಲ್!

    ಜ್ವರ, ಚಳಿ, ದೇಹಾಲಸ್ಯ, ಹಸಿವಾಗದಿರುವಿಕೆ, ಮೈ-ಕೈನೋವು, ವಾಕರಿಕೆ, ಸೀನುವಿಕೆ, ಬಹುದಿನಗಳ ಒಣಕೆಮ್ಮು ಹಾಗೂ ಹಠಾತ್ ಅಸ್ವಸ್ಥತೆಗೊಳಗಾಗುವುದು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಹೆಚ್ಚಿನ ಔಷಧಿ ತೆಗೆದುಕೊಳ್ಳುತ್ತಿರುವವರಿಗೆ ಈ ಲಕ್ಷಣಗಳು 3 ವಾರಗಳವರೆಗೂ ಕಾಣಿಸಿಕೊಳ್ಳಬಹುದು ಎಂದು ಇಲಾಖೆ ಹೇಳಿದೆ.

    ಎಚ್ಚರಿಕೆ ಕ್ರಮಗಳು:

    • ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಅಥವಾ ಟಿಶೂ ಕಾಗದದಿಂದ ಮುಚ್ಚಿಕೊಳ್ಳುವುದು ಉತ್ತಮ.
    • ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುವುದು.
    • ಪದೇ ಪದೇ ಕಣ್ಣು, ಮೂಗು ಮತ್ತು ಬಾಯಿಯನ್ನು ಕೈತೊಳೆಯದೆ ಮುಟ್ಟಬಾರದು.
    • ಅತಿಯಾದ ಜನಸಂದಣಿ ಇರುವ ಸ್ಥಳಗಳಿಗೆ ಹೋವುದನ್ನು ನಿಯಂತ್ರಿಸಬೇಕು. ಅಗತ್ಯವಿದ್ದಲ್ಲಿ ಮಾಸ್ಕ್ ಧರಿಸಬೇಕು.
    • ಇನ್​​ಫ್ಲುಯೆಂಜಾ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಕನಿಷ್ಠ ಅಂತರ ಕಾಯ್ದುಕೊಳ್ಳಬೇಕು.
    • ಚೆನ್ನಾಗಿ ನಿದ್ದೆ ಮಾಡುವುದು, ದೈಹಿಕ ಚಟುವಟಿಕೆಯಿಂದ ಇರುವುದು ಹಾಗೂ ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ.
    • ಸಾಕಷ್ಟು ನೀರನ್ನು ಕುಡಿಯುವುದು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಉತ್ತಮ.

    ಇದನ್ನೂ ಓದಿ: ಹಾಸನ | ಕರ್ಕಶ ಧ್ವನಿ ಮಾಡುತ್ತಾ ಬೈಕ್ ಚಾಲನೆ ಮಾಡಿದ್ದಕ್ಕೆ ಆರಂಭವಾದ ಜಗಳ ಓರ್ವನ ಹತ್ಯೆಯಲ್ಲಿ ಅಂತ್ಯ!

    ಇವುಗಳ ಬಗ್ಗೆ ಗಮನವಿರಲಿ
    • ಹಸ್ತಲಾಘವ, ಆಲಿಂಗನ ಹಾಗೂ ಚುಂಬನದ ಮೂಲಕ ಶುಭ ಕೋರುವುದು ಮಾಡಬೇಡಿ.
    • ರಸ್ತೆಯಲ್ಲಿ/ಜನರಿರುವ ಪ್ರದೇಶದಲ್ಲಿ ಉಗುಳುವುದು ಮಾಡಬೇಡಿ.
    • ವೈದ್ಯರ ಸಲಹ ಇಲ್ಲದೆ ಔಷಧಿಗಳನ್ನು/ಆಂಟಿಬಯಾಟಿಕ್ ಗಳನ್ನು ತೆಗೆದುಕೊಳ್ಳಬಾರದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts