More

    ಆರೋಗ್ಯವೇ ಭಾಗ್ಯ ಎಂದು ಕ್ರಿಕೆಟಿಗ ಅಜಿಂಕ್ಯ ರಹಾನೆ ಹೇಳಿದ್ಯಾಕೆ..!

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಸೆ.19 ರಿಂದ ನ.10ರವರೆಗೆ ಯುಎಇಯಲ್ಲಿ ಟೂರ್ನಿ ದಿನಾಂಕ ಗೊತ್ತುಪಡಿಸಿದೆ. ಇದೀಗ ಆಟಗಾರರ ಪತ್ನಿ, ಗೆಳತಿಯರು ಯುಎಇಗೆ ಕರೆದೊಯ್ಯುವ ಕುರಿತು ಚರ್ಚೆ ನಡೆಯುತ್ತಿದೆ. ಐಪಿಎಲ್ ಬಳಿಕ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗೆ ಎಲ್ಲವೂ ಅಂದುಕೊಂಡಂತೆ ಸಾಗಿದರೆ, ರಾಷ್ಟ್ರೀಯ ತಂಡದ ಆಟಗಾರರು 150 ದಿನಗಳ ಕಾಲ ಕುಟುಂಬ ಸದಸ್ಯರಿಂದ ದೂರ ಉಳಿಯಬೇಕಾಗುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ಟೆಸ್ಟ್ ತಂಡದ ಉಪ-ನಾಯಕ ಅಜಿಂಕ್ಯ ರಹಾನೆ, ಮೊದಲು ಆರೋಗ್ಯ ಮುಖ್ಯ. ಐಪಿಎಲ್ ವೇಳೆ ಕುಟುಂಬ ಸದಸ್ಯರು ಹಾಜರಿರುವುದು ಮುಖ್ಯವಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ವೃತ್ತಿಪರ ಟೆನಿಸ್​ ಪುನರಾರಂಭಕ್ಕೆ ವೇದಿಕೆ ಸಜ್ಜು

    ಪ್ರತಿಯೊಬ್ಬರಿಗೂ ಆರೋಗ್ಯವೇ ಮುಖ್ಯ. ಐಪಿಎಲ್ ವೇಳೆ ಪ್ರತಿಯೊಬ್ಬರಿಗೂ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸಬೇಕು ಎಂಬ ಆಸೆ ಇರುತ್ತದೆ. ಆದರೆ, ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಸಾಧ್ಯವಿಲ್ಲ ಎಂದು ರಹಾನೆ ಹೇಳಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದಿಂದ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಹಾನೆ ವರ್ಗವಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಆರೋಗ್ಯ ಮುಖ್ಯ. ಕಳೆದ 4-5 ತಿಂಗಳಿಂದ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದಿದ್ದೇವೆ. ಈ ಕುರಿತು ಬಿಸಿಸಿಐ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು. ಕುಟುಂಬ ಸದಸ್ಯರಿಂದ ದೂರ ಉಳಿದರೆ ಎಲ್ಲರಿಗೂ ಕ್ಷೇಮ ಎಂದಿದ್ದಾರೆ.

    ಮದುವೆಯ ಬಳಿಕ ಎಲ್ಲರೂ ಕಾಣೆಯಾಗುತ್ತಾರೆ ಎಂದಿದ್ದೇಕೆ ಶಿಖರ್​ ಧವನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts