More

    ರಾಸುಗಳ ಆರೋಗ್ಯ ತಪಾಸಣೆ ಅಗತ್ಯ

    ಕೋಲಾರ: ಹೈನೋದ್ಯಮವು ರೈತರ ಜೀವನಾಡಿಯಾಗಿದೆ, ಜಿಲ್ಲೆಯಲ್ಲಿ ಲಕ್ಷಾಂತರ ಕುಟುಂಬಗಳು ಹೈನೋದ್ಯಮದ ಮೇಲೆ ಅವಲಂಭನೆಯಾಗಿದ್ದು, ರಾಸುಗಳ ಆರೋಗ್ಯದ ಬಗ್ಗೆ ಎಚ್ಚವಹಿಸಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ವಿಟ್ಟಪನಹಳ್ಳಿ ವೆಂಕಟೇಶ್ ಹೇಳಿದರು.

    ತಾಲೂಕಿನ ವಿಟ್ಟಪನಹಳ್ಳಿಯಲ್ಲಿ ಸೋಮವಾರ ಪಶುವೈದ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾಲು-ಬಾಯಿ ಜ್ವರದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
    ಹಾಲು ಉತ್ಪಾದಕರು ಹಾಗೂ ರೈತರು ಯಾವುದೇ ಕಾರಣಕ್ಕೂ ನಿರ್ಲಕ್ಷ ವಹಿಸದೇ ಕಡ್ಡಾಯವಾಗಿ ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣದ ಲಸಿಕೆ ಹಾಕಿಸಬೇಕು. ರಾಸುಗಳು ಆರೋಗ್ಯಕರವಾಗಿದ್ದರೆ ಮಾತ್ರ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಲು ಸಾಧ್ಯ ಎಂದರು.
    ವಿಟ್ಟಪನಹಳ್ಳಿಯಲ್ಲಿ ೧೫೦ ರಾಸುಗಳಿಗೆ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಲಾಯಿತು.
    ಮುಖ್ಯ ಪಶುವೈದ್ಯಾಽಕಾರಿ ಡಾ.ಎಲ್ ನಾಗಪ್ಪ, ಪಶು ಪರೀಕ್ಷಕ ಕಾಂತರಾಜ್, ಸಹಾಯಕ ಡಿ.ನಾರಾಯಣಸ್ವಾಮಿ, ರೂಪಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts