More

    ಶೈಕ್ಷಣಿಕ ಮೇಳದಲ್ಲಿ ಆರೋಗ್ಯ ಕಾಳಜಿ – ಆರ್‌ಕೆಎಂ ಆಸ್ಪತ್ರೆಯಿಂದ ಆಯೋಜನೆ

    ವಿಜಯಪುರ: ನಗರದ ಲಿಂಗದಗುಡಿ ರಸ್ತೆಯಲ್ಲಿರುವ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ 3 ದಿನದ ಎಜುಕೇಷನ್ ಎಕ್ಸಪೋದಲ್ಲಿ ಆರೋಗ್ಯ ತಪಾಸಣೆ ಶಿಬಿರ ಈಗಾಗಲೇ ಜ.29 ರಂದು ಆರಂಭವಾಗಿದ್ದು ಜ.31 ರಂದು ಕೂಡ ಇರಲಿದೆ.

    ಕನ್ನಡದ ನಂ.1 ಕನ್ನಡ ದಿನಪತ್ರಿಕೆ `ವಿಜಯವಾಣಿ’ ಹಾಗೂ ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಕ್ಸಲೆಂಟ್ ಸಮೂಹ ಸಂಸ್ಥೆಯ ಪ್ರಮುಖ ಪ್ರಾಯೋಜಕತ್ವದಲ್ಲಿ ಶಿಬಿರ ಆಯೋಜಿಸಲಾಗಿದೆ.

    ವಿಜಯಪುರದ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ರಾಜೇಶ್ವರಿ ಕರ್ಪೂರಮಠ ಮೆಮೋರಿಯಲ್ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆ- ಸಂಶೋಧನೆ ಸಂಸ್ಥೆಯಿಂದ ಪ್ರಾರಂಭವಾದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಸೋಮವಾರ ಅಂದಾಜು 50 ಹಾಗೂ ಮಂಗಳವಾರ ಅಂದಾಜು 55 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡಿಸಿದ್ದಾರೆ.

    ತಪಾಸಣೆಗೆ ಒಳಗಾದ ಜನರಿಗೆ ಅಗತ್ಯ ಔಷಧ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾಹಿತಿ ಒದಗಿಸಲಾಯಿತು.

    ಆರೋಗ್ಯ ಶಿಬಿರದ ಸಂಯೋಜಕಿ ಪುಷ್ಪಾ ಕಳ್ಳಿಮಠ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜನರು ಆದ್ಯತೆ ನೀಡಬೇಕು. ಪ್ರತಿದಿನ ಜಂಜಾಟದ ಜೀವನ ಪದ್ಧತಿಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡರೆ ಮುಂಬರುವ ದೀರ್ಘ ಕಾಲದ ಕಾಯಿಲೆಗಳ ಬಗ್ಗೆ ತಿಳಿದು ಚಿಕಿತ್ಸೆ ಪಡೆಯಬಹುದು ಎಂದರು.

    ಶಿಬಿರದಲ್ಲಿ ಆಯುರ್ವೇದ ವೈದ್ಯರಾದ ಡಾ.ಹರೀಶ ದೇಶಪಾಂಡೆ, ಡಾ.ರುಕ್ಮೀಣಿ ಚವಾಣ, ಡಾ.ಗಣೇಶ ಜರಗ, ಡಾ.ಸ್ವಾತಿ ಟಿ.ಜಿ. ಹಾಗೂ ನರ್ಸಿಂಗ್ ಸಹಾಯಕ ಸಾಗರ ನಾಟಿಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts