More

    ಆರೋಗ್ಯ ಕಳಕಳಿ, ಸಮುದಾಯಕ್ಕೆ ತಿಳಿಹೇಳಿ: ಸಿಎಂ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಸಭೆ | ಕರೊನಾ ತಡೆಯಲು ಸಹಕಾರ ನೀಡುವ ವಾಗ್ದಾನ

    ಬೆಂಗಳೂರು: ಕರೊನಾವೈರಾಸ್ ತಡೆಗೆ ತಬ್ಲಿಘಿ ಧಾರ್ವಿುಕ ಸಮಾವೇಶದಲ್ಲಿ ಭಾಗವಹಿಸಿದವರು ಸ್ವಯಂ ಪ್ರೇರಿತರಾಗಿ ಆರೋಗ್ಯ ತಪಾಸಣೆಗೆ ಒಳಪಡಬೇಕು, ಆರೋಗ್ಯ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯಬಾರದು, ಲಾಕ್​ಡೌನ್​ಗೆ ಸ್ಪಂದಿಸಲು ಸಮುದಾಯಕ್ಕೆ ತಿಳಿಹೇಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಸ್ಲಿಂ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮುಸ್ಲಿಂ ಸಮುದಾಯದ ಮುಖಂಡರ ಜತೆ ಸುದೀರ್ಘ ಚರ್ಚೆ ನಡೆಸುವ ಮೂಲಕ ಇಡೀ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ ಯಡಿಯೂರಪ್ಪ, ವೈರಾಣು ಸಮುದಾಯದಲ್ಲಿ ಹರಡುವುದನ್ನು ತಡೆಯಲು ಲಾಕ್​ಡೌನ್ ಅನಿವಾರ್ಯ. ಕೆಲವರು ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅನಗತ್ಯವಾಗಿ ಬೀದಿಗೆ ಇಳಿಯುತ್ತಿದ್ದಾರೆ. ಸಮುದಾಯಕ್ಕೆ ತಿಳಿಹೇಳಿ. ಸಮುದಾಯದಲ್ಲಿ ಹರಡಿದರೆ ಇಟಲಿ, ಅಮೆರಿಕದಂತೆ ನಿಯಂತ್ರಣಕ್ಕೆ ಬರುವುದು ಕಷ್ಟವಾಗುತ್ತದೆ. ಅದನ್ನು ಅರ್ಥ ಮಾಡಿಸಿ, ಎರಡು ವಾರ ನಾವೆಲ್ಲ ಅಗತ್ಯವಾಗಿ ಸಹಿಸಿಕೊಳ್ಳಲೇಬೇಕಾಗಿದೆ ಎಂದು ಎಚ್ಚರಿಸಿದರು.

    ಆರೋಗ್ಯ ತಪಾಸಣೆಗೆ ಬರುವ ಆಶಾ ಕಾರ್ಯಕರ್ತೆ ಮೇಲೆ ನಡೆದ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆರೋಗ್ಯ ಕಾರ್ಯಕರ್ತರು, ಪೊಲೀಸರು ಜನರ ಹಿತಕ್ಕಾಗಿ ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ ಎಂದು ಸಿಎಂ ಪ್ರಶ್ನಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಸಚಿವ ಜಮೀರ್ ಅಹಮದ್, ಎನ್​ಆರ್​ಸಿ ದಾಖಲೆ ಕೇಳಲು ಬಂದಿದ್ದಾರೆಂದು ತಪು್ಪ ತಿಳಿದು ಈ ರೀತಿಯಾಗಿದೆ. ನಾನೇ ಹೋಗಿ ಬುದ್ದಿ ಹೇಳಿ ಬಂದಿದ್ದೇನೆ ಎಂದು ಸಮಜಾಯಿಷಿ ನೀಡಿದರು. ಸೋಂಕು ಎಲ್ಲ ಕಡೆಯೂ ಹರಡದಂತೆ ತಡೆಯಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖಂಡರು, ನಿಜಾಮುದ್ದೀನ್ ತಬ್ಲೀಕ್ ಮರ್ಕಜ್​ಗೆ ಭೇಟಿ ನೀಡಿದವರ ಮಾಹಿತಿ ಒದಗಿಸಿ, ಅವರ ಮನವೊಲಿಸಲು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ದೆಹಲಿಗೆ ಹೋಗಿದ್ದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ, ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಕ್ವಾರಂಟೈನ್ ಮಾಡಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡುವುದಾಗಿ ತಿಳಿಸಿದರು. ಕರೊನಾವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ ಪರಿಹಾರ. ಲಾಕ್​ಡೌನ್ ಅವಧಿ ಮುಗಿಯುವ ತನಕ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ, ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಎಲ್ಲ ಮುಖಂಡರಿಂದಲೂ ಸರ್ವಾನುಮತದ ಅಭಿಪ್ರಾಯ ವ್ಯಕ್ತವಾಯಿತು. ಶಾಸಕರಾದ ಎನ್.ಎ.ಹ್ಯಾರಿಸ್, ನಸೀರ್ ಅಹಮದ್, ರಿಜ್ವಾನ್ ಅರ್ಷದ್, ಅಖಂಡ ಶ್ರೀನಿವಾಸಮೂರ್ತಿ, ಸಿ.ಎಂ.ಇಬ್ರಾಹಿಂ, ಸಲೀಮ್ ಅಹಮದ್ ಸಭೆಯಲ್ಲಿದ್ದರು.

    ಮುಸ್ಲಿಂರ ಬಗ್ಗೆ ತಪು್ಪ ಅಭಿಪ್ರಾಯ

    ಕರೊನಾ ಹರಡಲು ಒಂದು ಸಮುದಾಯ ಕಾರಣವಲ್ಲ. ನಿಜಾಮುದ್ದೀನ್ ಘಟನೆ ಬಳಿಕ ಮಾಧ್ಯಮದಲ್ಲಿಯೂ ಅಪಪ್ರಚಾರ ಆಗುತ್ತಿದ್ದು, ಸಮಾಜದಲ್ಲಿ ಮುಸ್ಲಿಂ ಸಮುದಾಯ ಬಗ್ಗೆ ತಪು್ಪ ಅಭಿಪ್ರಾಯ ಮೂಡಿದೆ. ದೆಹಲಿಯ ಧಾರ್ವಿುಕ ಸಭೆಗೆ ಅನುಮತಿ ನೀಡಿದವರು ಯಾರು? ಎಂಬ ವಿಷಯದಿಂದಲೂ ಚರ್ಚೆ ಮಾಡಬೇಕಾಗುತ್ತದೆ. ಆದ್ದರಿಂದ ಸಮುದಾಯದ ಬಗ್ಗೆ ಉಂಟಾಗಿರುವ ಕಳಂಕ ಹೋಗಲಾಡಿಸಲು ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಶಾಸಕ ಜಮೀರ್ ಅಹಮದ್ ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಎಂ ನೀಡಿದರು.

    ಮುಖ್ಯಮಂತ್ರಿ ಅಸಮಾಧಾನ

    ಗುರುವಾರ ಆಶಾ ಕಾರ್ಯಕರ್ತೆ ಮೇಲೆ ನಡೆದ ಹಲ್ಲೆ ಘಟನೆ ಬಗ್ಗೆ ಸಿಎಂ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ನನ್ನಲ್ಲಿ ಬಹಳ ನೋವು ತಂದಿದೆ. ನಿಮ್ಮ ಸಮುದಾಯದ ಧರ್ಮ ಗುರುಗಳಿಗೂ ಈ ಮಾತು ಹೇಳಿದ್ದೇನೆ. ನೀವೇ ಸಂದೇಶ ನೀಡಿ ಎಂದು ಕೋರಿದ್ದೇನೆ. ಒಬ್ಬರು ಮಾಡುವುದರಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಅದನ್ನು ಅರ್ಥ ಮಾಡಿಸುವಂತೆ ಕೋರಿದ್ದೇನೆ. ಪೊಲೀಸ್ ಬಳಕೆ ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯವೆಂದು ಸಿಎಂ ಸಭೆಯಲ್ಲಿ ಎಚ್ಚರಿಕೆಯ ದಾಟಿಯಲ್ಲಿಯೇ ಹೇಳಿದರೆನ್ನಲಾಗಿದೆ.

    ಯಡಿಯೂರಪ್ಪ ಮನವಿ

    ವಿಶೇಷ ಸಂಕಷ್ಟ ಸಂದರ್ಭದಲ್ಲಿ ನಾವಿದ್ದೇವೆ. ಎಲ್ಲ ಜಾತಿ, ಧರ್ಮ ಮೀರಿ ಒಟ್ಟಾಗಿ ಸ್ಪಂದಿಸಬೇಕಾಗಿದೆ. ಆದ್ದರಿಂದ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ನಾವೆಲ್ಲರೂ ಒಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕರೋನಾ ವಿರುದ್ಧದ ಸಮರ ಜಯಿಸೋಣ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದರು.

    ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕೆಂದೇ ಕರೊನಾ ಅಂಟಿಸಿಕೊಂಡು ಪರಿತಪಿಸಿದ ಜರ್ಮನಿಯ ಮೇಯರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts