More

    ಸತ್ವಯುತ ಆಹಾರ ಸೇವನೆಯಿಂದ ಆರೋಗ್ಯ

    ಬಂಕಾಪುರ: ಸತ್ವರಹಿತ ಆಹಾರ ಸೇವನೆಯಿಂದ ಜನರಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಆರೋಗ್ಯ ಹದಗೆಡುವ ಮೊದಲು ಒಳ್ಳೆಯ ಆಹಾರ ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಬೇಕು ಎಂದು ತಾಪಂ ಇಒ ಜೆ.ವಿಶ್ವನಾಥ ಹೇಳಿದರು.

    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಆಯೋಜಿಸಿದ್ದ ಆಯುಷ್ಮಾನ್ ಭವ ಸಾಪ್ತಾಹಿಕ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಜನರು ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆಗಳಲ್ಲಿ ನಡೆಯುವ ಆರೋಗ್ಯ ಮೇಳ ಮತ್ತು ಶಿಬಿರಗಳಲ್ಲಿ ಭಾಗವಹಿಸಿ ಉಚಿತವಾಗಿ ತಮ್ಮ ಆರೋಗ್ಯ ತಪಾಸಣೆಗೊಳಪಡಿಸಬೇಕು ಎಂದರು.

    ದಂತ ವೈದ್ಯ ಡಾ. ಸಲೀಂ ಇಳಕಲ್ ಮಾತನಾಡಿ, ಪ್ರತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭಾರತ ಯೋಜನೆಯ ವಿಭಾಗ ಇರುತ್ತದೆ. ಅಲ್ಲಿರುವ ಆರೋಗ್ಯ ಮಿತ್ರನ ಸಹಾಯ ಪಡೆದರೆ ಮಾರ್ಗದರ್ಶನ ಮಾಡುತ್ತಾರೆ. ರೋಗಿ ಬಯಸಿದ್ದಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭವ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

    ಆಯುಷ್ಮಾನ್ ಭಾರತ ಯೋಜನೆ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆರೋಗ್ಯ ಮಂಥನ ಕಾರ್ಯಕ್ರಮ ನಡೆಸಲಾಯಿತು. ಆರೋಗ್ಯ ಮೇಳದಲ್ಲಿ ಕ್ಯಾನ್ಸರ್, ಜನರಲ್ ಮೆಡಿಸನ್, ಜನರಲ್ ಸರ್ಜನ್, ಮಕ್ಕಳ ತಜ್ಞ, ನೇತ್ರ ತಜ್ಞ, ಸ್ತ್ರೀರೋಗ ತಜ್ಞ ವೈದ್ಯರು ಪಾಲ್ಗೊಂಡಿದ್ದರು. ಒಟ್ಟು 1102 ಜನರು ಚಿಕಿತ್ಸೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 618 ಜನ ರೋಗಿಗಳು ತಜ್ಞ ವೈದ್ಯರ ಕಡೆ ಸೂಕ್ತ ಚಿಕಿತ್ಸೆ ಮತ್ತು ಸಲಹೆ ಪಡೆದುಕೊಂಡರು.

    ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮನೋಜ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವೈದ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ತಹಸೀಲ್ದಾರ್ ಸಂತೋಷ ಹಿರೇಮಠ, ಟಿಎಚ್‌ಒ ಡಾ. ಸತೀಶ.ಎನ್, ಮುಖ್ಯಾಧಿಕಾರಿ ಎ. ಶಿವಪ್ಪ, ಡಾ.ಎಸ್.ವಿ. ವಸ್ತ್ರದ, ಮಹಮ್ಮದಗೌಸ್.ಕೆ, ಡಾ. ಸಂತೋಷ ಚಿಕ್ಕರೆಡ್ಡಿ, ಗೀತಾ ಪಾಟೀಲ, ವಿಜಯ ವೈ.ಬಿ., ನಿಂಗಪ್ಪ ಉಳ್ಳಾಗಡ್ಡಿ, ವಿಜಯ ರಾಣೋಜಿ, ಸುರೇಶ ಎಲ್.ಕೆ, ಆಸ್ಮಾ ಎನ್.ಕೆ. ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts