More

    ಜೀವನದಲ್ಲಿ ಯುವಕರು ಕಾಯಕ ನಿಷ್ಠೆ ಅಳವಡಿಸಿಕೊಳ್ಳಲಿ

    ಕಂಪ್ಲಿ: ಯುವಕರು ಜೀವನದಲ್ಲಿ ಕಾಯಕ ನಿಷ್ಠೆ , ಶ್ರದ್ಧೆ, ಆತ್ಮವಿಶ್ವಾಸವನ್ನು ಅಳವಡಿಸಿಕೊಂಡರೆ ಮಾತ್ರ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದು ಇಟಗಿಯ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಹೇಳಿದರು.

    ಪಟ್ಟಣದ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಬುಧವಾರ ಹಮ್ಮಿಕೊಂಡಿದ್ದ 152ನೇ ಮಹಾಮನೆ ಕಾರ್ಯಕ್ರದಲ್ಲಿ ಕಾಯಕ ಮಹತ್ವ ಕುರಿತು ಮಾತನಾಡಿದರು.

    ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಬಹುದು. ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಪುರುಷರನ್ನು ಭ್ರಷ್ಟಾಚಾರದಿಂದ ವಿಮುಕ್ತರಾಗುವಂತೆ ಪ್ರೇರೇಪಿಸುವ ಅಗತ್ಯವಿದೆ ಎಂದರು.

    ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿದರು. ಸಾಹಿತ್ಯ ಸಿರಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ವೀರಶೈವ ಸಮಾಜದ ಮುಖಂಡ ಬುರೆಡ್ಡಿ ವಿರುಪಾಕ್ಷಿ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ್, ಮಡಿವಾಳರ ಹುಲುಗಪ್ಪ, ಅಂಬಿಗರ ಮಂಜುನಾಥ, ಎಸ್.ಶ್ಯಾಮಸುಂದರರಾವ್, ಕೆ.ಚಂದ್ರಶೇಖರ್, ಎಚ್.ನಾಗರಾಜ್, ಅಶೋಕ ಕುಕನೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts