More

    ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಕರೊನಾ ಪಾಸಿಟಿವ್, ಓವಲ್ ಟೆಸ್ಟ್‌ಗೆ ಅಡ್ಡಿ ಇಲ್ಲ

    ಲಂಡನ್: ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಇದರಿಂದಾಗಿ 59 ವರ್ಷದ ರವಿಶಾಸ್ತ್ರಿ ಜತೆಗೆ ಅವರ ನಿಕಟ ಸಂಪರ್ಕದಲ್ಲಿದ್ದ ತಂಡದ ಇತರ ಮೂವರು ತರಬೇತಿ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಮತ್ತು ಫಿಸಿಯೋ ನಿತಿನ್ ಪಟೇಲ್ ಅವರನ್ನು ಐಸೋಲೇಷನ್‌ನಲ್ಲಿಡಲಾಗಿದೆ. ಈ ಕರೊನಾ ಪ್ರಕರಣದ ನಡುವೆಯೂ ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯ ಯಾವುದೇ ಅಡ್ಡಿ ಇಲ್ಲದೆ ಮುಂದುವರಿದಿದೆ.

    ರ‌್ಯಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ರವಿಶಾಸ್ತ್ರಿ ವರದಿ ಪಾಸಿಟಿವ್ ಬಂದಿದೆ. ಇದರಿಂದಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ನಾಲ್ವರನ್ನು ಐಸೋಲೇಷನ್‌ನಲ್ಲಿಡಲಾಗಿದೆ. ಆರ್‌ಟಿ-ಪಿಸಿಆರ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದರೆ ನಾಲ್ವರೂ ಐಸೋಲೇಷನ್‌ನಿಂದ ಹೊರಬರಲಿದ್ದಾರೆ ಎಂದು ಬಿಸಿಸಿಐ ಭಾನುವಾರ ಮಾಹಿತಿ ಹಂಚಿಕೊಂಡಿದೆ.

    ಶನಿವಾರ ಸಂಜೆ ಮತ್ತು ಭಾನುವಾರ ಬೆಳಗ್ಗೆ ನಡೆಸಲಾದ ರ‌್ಯಾಪಿಡ್ ಟೆಸ್ಟ್‌ನಲ್ಲಿ ಭಾರತ ತಂಡದ ಎಲ್ಲ ಆಟಗಾರರ ವರದಿ ನೆಗೆಟಿವ್ ಬಂದಿದೆ. ಇದರಿಂದಾಗಿ ಓವಲ್ ಟೆಸ್ಟ್‌ನ 4ನೇ ದಿನದಾಟ ಆರಂಭಿಸಲು ಅನುಮತಿ ನೀಡಲಾಯಿತು ಎಂದು ಬಿಸಿಸಿಐ ತಿಳಿಸಿದೆ. ಎಲ್ಲ ಆಟಗಾರರು ಮತ್ತು ಸಿಬ್ಬಂದಿ ಈಗಾಗಲೆ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡಿದ್ದಾರೆ.

    ಓವಲ್ ಟೆಸ್ಟ್‌ಗೆ ಮುನ್ನಾದಿನ ಟೀಮ್ ಹೋಟೆಲ್‌ನಲ್ಲಿ ರವಿಶಾಸ್ತ್ರಿ ಅವರ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಇದರಲ್ಲಿ ಬಯೋಬಬಲ್ ಹೊರಗಿನ ಅತಿಥಿಗಳೂ ಪಾಲ್ಗೊಂಡಿದ್ದರು. ಈ ಸಮಾರಂಭದ ಬಳಿಕ ರವಿಶಾಸ್ತ್ರಿ ಅವರಲ್ಲಿ ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ.

    ಓವಲ್ ಟೆಸ್ಟ್ ಸೋಮವಾರ ಮುಕ್ತಾಯಗೊಂಡ ಬಳಿಕ ಭಾರತ ತಂಡ ಅಂತಿಮ ಟೆಸ್ಟ್‌ಗಾಗಿ ಮಂಗಳವಾರ ಮ್ಯಾಂಚೆಸ್ಟರ್‌ಗೆ ಪ್ರಯಾಣಿಸಲಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಐಸೋಲೇಷನ್‌ನಲ್ಲಿರುವ ನಾಲ್ವರೂ ತಂಡದ ಜತೆಗೆ ಪ್ರಯಾಣಿಸಲಿದ್ದಾರೆ. ರ‌್ಯಾಪಿಡ್ ಟೆಸ್ಟ್‌ನಲ್ಲಿ ಅರ್ಧಗಂಟೆಯಲ್ಲೇ ವರದಿ ಬಂದರೂ ಅದು ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿರುವುದಿಲ್ಲ. ಆರ್‌ಟಿ-ಪಿಸಿಆರ್ ಟೆಸ್ಟ್ ವರದಿ ನಿಖರವಾಗಿರುತ್ತದೆ. ಟೆಸ್ಟ್ ಸರಣಿಗೆ ಮುನ್ನ ರಿಷಭ್ ಪಂತ್ ಪಾಸಿಟಿವ್ ಆದ ಬಳಿಕ ಭಾರತ ತಂಡದ ಎಲ್ಲ ಸದಸ್ಯರು ಪ್ರತಿದಿನ ರ‌್ಯಾಪಿಡ್ ಟೆಸ್ಟ್‌ಗೆ ಒಳಾಗುತ್ತ ಬಂದಿದ್ದಾರೆ.

    ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ 5 ತಿಂಗಳ ಗರ್ಭಿಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts