More

    ಜೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸೇರಿಸಿದರು!

    ಕಾರವಾರ: ಪಾರ್ಶ್ವ ವಾಯುವಿಗೆ ತುತ್ತಾದ ವ್ಯಕ್ತಿಯನ್ನು ಬೆತ್ತದ ಕುರ್ಚಿಯಲ್ಲಿ ಕೂರಿಸಿ 5 ಕಿಮೀ ಕಡಿದಾದ ರಸ್ತೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ಸೇರಿಸಿದ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.

    ಗ್ರಾಪಂನಿಂದ 11 ಕಿಮೀ ದೂರದಲ್ಲಿರುವ ಸಕಲಬೇಣ ಗ್ರಾಮ ವ್ಯಾಪ್ತಿಯ ವರಿಲಬೇಣ ಎಂಬ ಊರಿಗೆ ಸರಿಯಾದ ರಸ್ತೆಯಿಲ್ಲ. 5 ಕಿಮೀವರೆಗೆ ಬೈಕ್ ಹೋಗುತ್ತದೆ. ಇನ್ನು 6 ಕಿಮೀ ಕಡಿದಾರ ರಸ್ತೆಯಲ್ಲಿ ಗುಡ್ಡ ಹತ್ತಿ ನಡೆದೇ ಸಾಗಬೇಕು. ಗ್ರಾಮದ ನೂರಾ ಪೊಕ್ಕಾ ಗೌಡ ಎಂಬುವವರು ಬುಧವಾರ ಪಾರ್ಶ್ವ ವಾಯು ರೋಗಕ್ಕೆ ತುತ್ತಾದರು. ನಡೆಯಲು ಸಾಧ್ಯವಾಗದ ಅವರನ್ನು ಕುರ್ಚಿಯಲ್ಲಿ ಕೂರಿಸಿ ಅದಕ್ಕೆ ಒಂದು ಮರದ ಬಡಿಗೆ ಕಟ್ಟಿ ಇಬ್ಬರು ಹೊತ್ತು ಮುಖ್ಯ ರಸ್ತೆವರೆಗೆ ತಂದಿದ್ದಾರೆ. ನಂತರ ಅವರನ್ನು ಖಾಸಗಿ ವಾಹನದ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಸೇರಿಸಲಾಗಿದೆ.

    ಗ್ರಾಮದಲ್ಲಿ ಹಿಂದುಳಿದ ಹಾಲಕ್ಕಿ ಒಕ್ಕಲಿಗರ ಕುಟುಂಬಕ್ಕೆ ಸೇರಿದ 11 ಮನೆಗಳಿವೆ. ಗ್ರಾಮಸ್ಥರು ಒಂದು ಬೆಂಕಿ ಪೊಟ್ಟಣ ತರಬೇಕು ಎಂದರೂ ಕನಿಷ್ಠ 5 ಕಿಮೀ ನಡೆಯುವುದು ಅನಿವಾರ್ಯ. ಗ್ರಾಮದ ಮಕ್ಕಳು ಸಮೀಪದ ಸಕಲಬೇಣದ ಸಂಬಂಧಿಕರ ಮನೆಯಲ್ಲೇ ಉಳಿದು ಶಾಲೆಗೆ ತೆರಳುತ್ತಾರೆ. ಗ್ರಾಮದಲ್ಲಿ ಆಗಾಗ ಇಂಥ ಸಮಸ್ಯೆಗಳು ಆಗುತ್ತಿರುತ್ತವೆ. ಕನಿಷ್ಠ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.

    ಕಡಿದಾದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗ್ರಾಮಕ್ಕೆ ತೆರಳಬೇಕಿದೆ. ಇದರಿಂದ ಅರಣ್ಯ ಇಲಾಖೆ ಅನುಮತಿ ಇಲ್ಲದೇ ರಸ್ತೆ ಮಾಡಲು ಸಾಧ್ಯವಿಲ್ಲವಾಗಿದೆ.

    | ಲೀಲಾ ಆಗೇರ , ಹಟ್ಟಿಕೇರಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts