More

    ಪತಿಯಿಂದ ಸರಪಳಿಯಲ್ಲಿ ಬಂಧಿಯಾಗಿ ತನ್ನದೇ ಮಲಮೂತ್ರದಲ್ಲಿ ಹೊರಳಾಡುತ್ತ ಬಿದ್ದ ಪತ್ನಿ…

    ನವದೆಹಲಿ: ಹನ್ನೊಂದು ವರ್ಷಗಳ ಹಿಂದೆ ವಿವಾಹವಾದ ಮಹಿಳೆಗೆ ಆತನ ಪತಿಯೇ ಆರು ತಿಂಗಳಿಂದ ಸರಪಳಿ ಬಿಗಿದು, ಸೆರೆಮನೆಯಲ್ಲಿಟ್ಟು, ನಿತ್ಯ ಚಿತ್ರಹಿಂಸೆ ನೀಡುತ್ತಿದ್ದಾನೆ.
    32 ವರ್ಷದ ಆ ಮಹಿಳೆಯನ್ನು ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ) ಪೂರ್ವ ದೆಹಲಿಯ ತ್ರಿಲೋಕ್‌ಪುರಿಯಿಂದ ರಕ್ಷಿಸಿದೆ.
    ಕಳೆದ 11 ವರ್ಷಗಳಿಂದ ಮದುವೆಯಾಗಿರುವ ಮಹಿಳೆಯನ್ನು ಕಬ್ಬಿಣದ ಸರಪಳಿಯಲ್ಲಿ ಆಕೆಯ ಪತಿಯೇ ಬಂಧಿಸಿ, ಸೆರೆಯಾಳಾಗಿಟ್ಟಿದ್ದಾನೆ ಎಂದು ಡಿಸಿಡಬ್ಲ್ಯೂ ತಿಳಿಸಿದೆ.
    ಅವಳಿದ್ದ ಕೋಣೆಗೆ ಫ್ಯಾನ್ ಇರಲಿಲ್ಲ ಮತ್ತು ಅವಳು ಮಲ ಮೂತ್ರದಲ್ಲಿಯೇ ಮಲಗಿದ್ದರಿಂದ ದುರ್ವಾಸನೆ ಬರುತ್ತಿತ್ತು. ಆಕೆಯನ್ನು ಅಮಾನುಷವಾಗಿ ಥಳಿಸಿ ಹಿಂಸಿಸಲಾಗಿದ್ದು, ಅದು ಅವಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಿದೆ.

    ಇದನ್ನೂ ಓದಿ: ಸರ್ಕಾರಿ / ಖಾಸಗಿ ಅನುದಾನಿತ ಐಟಿಐಗಳಿಗೆ ಪ್ರವೇಶಾವಕಾಶ

    ಮಹಿಳೆಯ ಈ ಸ್ಥಿತಿಗತಿ ಕುರಿತು ಆಯೋಗದ ಮಹಿಳಾ ಪಂಚಾಯತ್ ತಂಡದಿಂದ ಮಾಹಿತಿ ಸಿಕ್ಕ ನಂತರ, ಡಿಸಿಡಬ್ಲ್ಯೂ ತಂಡ ಆಕೆಯ ಮನೆಗೆ ಹೋಗಿ ವಿಚಾರಣೆ ನಡೆಸಿತ್ತು.
    ಕಬ್ಬಿಣದ ಸರಪಳಿಯಲ್ಲಿ ಕಾಲುಗಳನ್ನು ಬಂಧಿಸಲಾಗಿದ್ದು, ಆಕೆ ನೆಲದ ಮೇಲೆ ಮಲಗಿದ್ದ ಸ್ಥಿತಿಯಲ್ಲಿದ್ದಳು. ಹರಿದ ಬಟ್ಟೆಯಲ್ಲಿದ್ದ ಆಕೆ ಶೋಚನೀಯ ಸ್ಥಿತಿಯಲ್ಲಿದ್ದಳು ಎಂದು ಡಿಸಿಡಬ್ಲ್ಯೂ ಹೇಳಿದೆ.
    ಕಳೆದ 11 ವರ್ಷಗಳಿಂದ ಮದುವೆಯಾಗಿದ್ದು, ಆಕೆಗೆ ಮೂರು ಮಕ್ಕಳಿದ್ದಾರೆ. ಆಕೆಯ ಪತಿ ಹಿಟ್ಟಿನ ಗಿರಣಿ ಮಾಲೀಕ, ತನ್ನನ್ನು ಕ್ರೂರವಾಗಿ ಹಿಂಸಿಸಿ, ಹೊಡೆಯುತ್ತಿದ್ದು, ಕಳೆದ ಆರು ತಿಂಗಳಿನಿಂದ ಅವಳನ್ನು ಸರಪಳಿಯಲ್ಲಿ ಬಂಧಿಸಲಾಗಿದೆ ಎಂದು ಆಕೆ ತಿಳಿಸಿದ್ದಾಳೆ.
    ಈ ಶಿಕ್ಷೆ ಅನುಭವಿಸುವುದಕ್ಕೂ ಮುನ್ನ ಚೆನ್ನಾಗಿದ್ದಳೆಂದು ತನಿಖೆಯಿಂದ ಕಂಡುಬಂದಿದೆ. ಮಕ್ಕಳಿಗೂ ಮತ್ತು ಹೆಂಡತಿಗೂ ಆತ ಹಿಂಸೆ ನೀಡುತ್ತಿದ್ದ.

    ಇದನ್ನೂ ಓದಿ:  ಅಂತ್ಯಕ್ರಿಯೆ ವೇಳೆ ಪೆಟ್ಟಿಗೆಯಲ್ಲಿದ್ದ ಯುವತಿಯ ‘ಶವ’ ಅಲುಗಾಡಿ ಮೇಲೆದ್ದು ಬಂತು!

    ತಂಡ ಆಕೆಯನ್ನು ಬಂಧಮುಕ್ತಗೊಳಿಸಿದ ನಂತರ ಆಕೆಯ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿದೆ.
    “ಅವಳಿಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ. ಅವಳು ಈಗ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಕೂಡ ಬಳಲುತ್ತಿದ್ದಾಳೆ. ನಾವು ಅವಳನ್ನು ರಕ್ಷಿಸಿದ್ದೇವೆ ಮತ್ತು ಅವಳ ಪುನರ್ವಸತಿಗಾಗಿ ಕಾರ್ಯ ಪ್ರಾರಂಭಿಸಿದ್ದೇವೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮವನ್ನು ಖಚಿತಪಡಿಸುತ್ತೇವೆ” ಎಂದು ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ತಿಳಿಸಿದ್ದಾರೆ.
    ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಲ್ಯಾಣ್ ಪುರಿಯ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ಅವರ ಹೇಳಿಕೆಯ ಆಧಾರದ ಮೇಲೆ ಎಫ್ಐಆರ್ ದಾಖಲಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಕ್ತರಿಲ್ಲದ ಶಬರಿಮಲೆ ದೇಗುಲದಲ್ಲಿ ಆಭರಣಗಳ ಲೆಕ್ಕಾಚಾರ; ಸಾವಿರ ಕೆಜಿ ಚಿನ್ನ ಯಾರ ಪಾಲಾಗುತ್ತೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts