More

    ಸರ್ಕಾರಿ / ಖಾಸಗಿ ಅನುದಾನಿತ ಐಟಿಐಗಳಿಗೆ ಪ್ರವೇಶಾವಕಾಶ

    ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ 270 ಸರ್ಕಾರಿ ಹಾಗೂ 196 ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ಸಂಯೋಜನೆ ಹೊಂದಿರುವ ವೃತ್ತಿಗಳಿಗೆ ಆನ್​ಲೈನ್ ಮೂಲಕ ಇಲಾಖೆ ವೆಬ್​ಸೈಟ್​ www/emptrg.kar.nic.in ನಲ್ಲಿ ಪ್ರಕಟಿಸಿರುವಂತೆ ಅರ್ಹತೆಯೊಂದಿಗೆ ಮೀಸಲಾತಿ ಆಧಾರದ ಮೇಲೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
    ಅಭ್ಯರ್ಥಿಗಳು ಇಲಾಖೆ ವೆಬ್​ಸೈಟ್ ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

    ಇದನ್ನೂ ಓದಿ:  ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

    NCVT ಯಿಂದ ಸಂಯೋಜನೆ ಹೊಂದಿ ಅನುಷ್ಠಾನಗೊಳಿಸಿರುವ 40 ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡಲಾಗುವುದು.
    ಎಸ್​ಎಸ್​ಎಲ್​​ಸಿ ಮಂಡಳಿ ಅಥವಾ ಸಿಒಬಿಎಸ್​ಇ (Council of Boards of School Education, New Delhi) ಯಿಂದ ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಗಳಿಂದ 10 ನೇ ತರಗತಿ ಪ್ರಮಾಣ ಪತ್ರ ಹೊಂದಿರುವಂತಹ ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.
    ಆಗಸ್ಟ್ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಇದನ್ನೂ ಓದಿ:   ತಾಯಿ, ಅಜ್ಜಿಯ ಗಂಟಲು ಸೀಳಿದ್ದೇನೆ, ನೋಡಿ ಬನ್ನಿ ಎಂದು ಕರೆದ ಷಾಟ್‌ಪುಟ್‌ ಚಾಂಪಿಯನ್‌!

    ರಾಜ್ಯದಲ್ಲಿ ಪಿಪಿಪಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸೋಲಾರ್ ಟೆಕ್ನಾಲಜಿ, ಬೇಕರಿ ಆ್ಯಂಡ್ ಕಾನ್​ಫೆಕ್ಷನರಿ, ಬೇಸಿಕ್ ಕಾಸ್ಮೆಟಾಲಜಿ, ಫುಡ್ ಪ್ರೊಡಕ್ಷನ್ (ಜನರಲ್) ಇತ್ಯಾದಿ ವಿಶೇಷ ವೃತ್ತಿಗಳನ್ನು ಹೊಸದಾಗಿ ಆರಂಭಿಸಲಾಗಿದೆ.
    ಅರ್ಜಿದಾರರು ಭಾರತದ ಸರ್ಕಾರದ ಡಿಜಿಟಿ ನವದೆಹಲಿ ಯಿಂದ ಸಂಯೋಜನೆಗೊಂಡಿರುವ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ವೃತ್ತಿಗಳ ಬಗ್ಗೆ ಖಚಿತಪಡಿಸಿಕೊಂಡು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

    ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಆರೋಗ್ಯ ಇನ್ನಷ್ಟು ಕ್ಷೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts