More

    ವನ್ಯಜೀವಿಗಳ ಉಳಿವಿಗಾಗಿ ಕೆಲಸ : ಶಿವಕುಮಾರ್ ಭರವಸೆ

    ಮೈಸೂರು: ಬಿಜೆಪಿಯಲ್ಲಿ 40 ವರ್ಷಗಳಿಂದ ಮಾಡಿಕೊಂಡು ಬಂದಿರುವ ಸೇವೆ ಪರಿಗಣಿಸಿ ಬಿಜೆಪಿಯ ಹಿರಿಯರೆಲ್ಲರೂ ಸೇರಿ ವನ್ಯಜೀವಿಗಳ ಉಳಿವಿಗಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದು, ಅದಕ್ಕೆ ಸದಾ ಋಣಿಯಾಗಿ ಜವಾಬ್ದಾರಿ ನಿಭಾಯಿಸುವೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ನೂತನ ಅಧ್ಯಕ್ಷ ಶಿವಕುಮಾರ್ ಹೇಳಿದರು.


    ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಮಂಗಳವಾರ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅವರಿಂದ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.


    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಸಹಕಾರ ಪಡೆದು ಎಲ್ಲ ಶಾಸಕರು, ಸಂಸದರನ್ನು ಗಣನೆಗೆ ತೆಗೆದುಕೊಂಡು ವನ್ಯಜೀವಿಗಳ ಅಭಿವೃದ್ಧಿಗೆ ಚಿಂತನೆ ನಡೆಸುವೆ ಎಂದರು.
    ಈ ಹಿಂದಿನ ಅಧ್ಯಕ್ಷರು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಅನೇಕ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿರುವುದಾಗಿ ಮಾಹಿತಿ ಇದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳ ಸಭೆ ನಡೆಸಿ ರಾಜ್ಯದ 9 ಮೃಗಾಲಯಗಳ ಅಭಿವೃದ್ಧಿ ಹಾಗೂ ಸರ್ಕಾರದಿಂದ ಮತ್ತಷ್ಟು ಅನುದಾನ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಪಡೆದು ಮುಂದೆ ತಿಳಿಸುವುದಾಗಿ ಹೇಳಿದರು.


    ಶಾಸಕ ಎಲ್.ನಾಗೇಂದ್ರ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ, ನಗರಪಾಲಿಕೆ ನಾಮ ನಿರ್ದೇಶಕ ಸದಸ್ಯರಾದ ಕೆ.ಜೆ. ರಮೇಶ್, ವನಿತಾ ಪ್ರಸನ್ನ, ಗೆಜ್ಜಗಳ್ಳಿ ಮಹೇಶ್, ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜೋಗಿ ಮಂಜು, ಎನ್.ಆರ್.ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಅರಸ್, ಪಡುವಾರಹಳ್ಳಿ ಮುಖಂಡ ಸೋಮು, ಬಿಜೆಪಿ ಮಾಧ್ಯಮ ವಕ್ತಾರ ಮಹೇಶ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts