More

    ಕರೊನಾ ಸ್ಪ್ರೆಡರ್ಸ್​ ಎಂದು ಚುಡಾಯಿಸಿದ, ಪೊಲೀಸರಿಂದ ಅಂದರ್​ ಆದ!

    ಕೊಯಿಮತ್ತೂರು: ಈಶಾನ್ಯ ರಾಜ್ಯದ ಇಬ್ಬರು ಯುವತಿಯರಿಗೆ ಕರೊನಾ ಸ್ಪ್ರೆಡರ್ಸ್​ ಎಂದು ಟೀಕಿಸಿ, ಹಲ್ಲೆಗೂ ಯತ್ನಿಸಿದ್ದ ವ್ಯಕ್ತಿಯನ್ನು ಕೊಯಿಮತ್ತೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಥೇಣಿ ಜಿಲ್ಲೆಯ ಮೂಲದ ಆಂಬುಲೆನ್ಸ್​ ಚಾಲಕ ಎಂ. ವಿಘ್ನೇಶ್​ (27) ಬಂಧಿತ. ಈತ ಈಶಾನ್ಯ ರಾಜ್ಯದ ಇಬ್ಬರು ಯುವತಿಯರಿಗೆ ಕರೊನಾ ಸ್ಪ್ರೆಡರ್ಸ್​ ಎಂದು ಚುಡಾಯಿಸಿದ್ದಲ್ಲದೆ, ಚೀನಾಕ್ಕೆ ಮರಳುವಂತೆ ಎಚ್ಚರಿಕೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಮಣಿಪುರ ಮೂಲದ ಜೆನ್ನಿ (21) ಮತ್ತು ಮರಿಯಾ (23) ಕೊಯಿಮತ್ತೂರಿನಲ್ಲಿ ಬ್ಯೂಟಿಷಿಯನ್ಸ್​ ಆಗಿ ಕೆಲಸ ಮಾಡುತ್ತಿದ್ದರು. ಅಳಗೇಶನ್​ ರಸ್ತೆಯ ಸಾಯಿಬಾಬಾ ಕಾಲನಿಯಲ್ಲಿ ಮನೆ ಮಾಡಿಕೊಂಡಿದ್ದರು. ಭಾನುವಾರ ಸಂಜೆ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗೆ ಮರಳುತ್ತಿದ್ದರು. ಆ ಸಂದರ್ಭದಲ್ಲಿ ಎದುರಾದ ವಿಘ್ನೇಶ್​, ಆರಂಭದಲ್ಲಿ ಜೆನ್ನಿ ಮತ್ತು ಮರಿಯಾ ಬಳಿ ಅತ್ಯಂತ ಗೌರವದಿಂದ ನಡೆದುಕೊಂಡಿದ್ದ.

    ಇದನ್ನೂ ಓದಿ: ‘ಮಾಸ್ಕ್ ಹಾಕ್ಕೊಳ್ರಯ್ಯ’ ಎಂದಿದ್ದಕ್ಕೆ ಪೊಲೀಸಪ್ಪನ ಬಟ್ಟೆ ಹರಿದು ಹಲ್ಲೆ!

    ಆನಂತರ ಹಠಾತ್ತನೆ ಆಕ್ರೋಶಗೊಂಡ ಆತ ಇವರಿಬ್ಬರನ್ನೂ ಕರೊನಾ ಸ್ಪ್ರೆಡರ್ಸ್​ ಎಂದು ಟೀಕಿಸಿದ್ದಲ್ಲದೆ, ಚೀನಾಕ್ಕೆ ಹಿಂದಿರುಗುವ ಬದಲು ಇಲ್ಲೇಕೆ ಇದ್ದೀರಿ ಎಂದು ಪ್ರಶ್ನಿಸಿದ್ದ. ಇದಕ್ಕೆ ತಾವು ಮಣಿಪುರದ ಚುರಚಂದಾಪುರದವರಾಗಿದ್ದು, ಅದು ಭಾರತದ ಭಾಗವಾಗಿದೆ ಎಂದು ಮರಿಯಾ ಉತ್ತರಿಸಿದ್ದರು.

    ಆದರೆ ಇದರಿಂದ ಕುಪಿತನಾದ ಆತ ಮರಿಯಾ ಮೇಲೆ ಹಲ್ಲೆ ಮಾಡಿ, ಆಕೆಯನ್ನು ಕೆಳಗೆ ಬೀಳಿಸಲು ಯತ್ನಿಸಿದ್ದ. ಜೆನ್ನಿ ಇದೆಲ್ಲವನ್ನೂ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಈ ತುಣಕನ್ನು ತೋರಿಸಿ, ಕ್ಷಮೆಯಾಚಿಸುವಂತೆ ವಿಘ್ನೇಶ್​ನಿಗೆ ಎಚ್ಚರಿಕೆ ನೀಡಿದರೂ, ಆತ ಕ್ಷಮೆಯಾಚಿಸಲು ನಿರಾಕರಿಸಿದ್ದ.

    ಈ ಹಿನ್ನೆಲೆಯಲ್ಲಿ ಮರಿಯಾ ಮತ್ತು ಜೆನ್ನಿ ಈ ವಿಡಿಯೋವನ್ನು ಕುಕಿ ಸ್ಟುಡೆಂಟ್ಸ್​ ಯೂನಿಯನ್​ನ ಕೊಯಿಮತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಗ್ರೇಸಿ ಖೋಮ್ಗಸಾಯಿ ಅವರಿಗೆ ಫಾರ್ವರ್ಡ್​ ಮಾಡಿದ್ದರು. ಇದನ್ನು ಆಧರಿಸಿ ಪೊಲೀಸರಿಗೆ ದೂರು ಸಲ್ಲಿಸುವಂತೆ ಅವರು ಕೊಟ್ಟ ಸಲಹೆ ಮೇರೆಗೆ ಮರಿಯಾ ಮತ್ತು ಜೆನ್ನಿ ದೂರು ದಾಖಲಿಸಿದ್ದರು.

    ಗೃಹ ಸಚಿವಾಲಯ, ಎನ್​ಡಿಎಂಎ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts