More

    10 ಸಾವಿರ ರೂ.ಕೊಟ್ರೆ ಮಾತ್ರ ನಿನ್ನ ಖಾಸಗಿ ಫೋಟೊ ಡಿಲೀಟ್ ಮಾಡ್ತೇನೆ ಎಂದ ಆಕೆಯ ಸೋಷಿಯಲ್ ಮೀಡಿಯಾ​ ಮಿತ್ರ

    ಹೈದರಾಬಾದ್: ಆಕೆಗೆ ಕಾಲ್ ಮಾಡಿ, ’10 ಸಾವಿರ ರೂ.ಕೊಟ್ಟರೆ ಮಾತ್ರ ನಿನ್ನ ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡುತ್ತೇನೆ’ ಎಂದು ಬ್ಲ್ಯಾಕ್​ಮೇಲ್ ಮಾಡಿದ ಆಕೆಯ ನೆಟ್ ಮಿತ್ರನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
    ಆರೋಪಿಯನ್ನು ಆಂಧ್ರದ ಕರ್ನೂಲು ನಿವಾಸಿ, ಖಾಸಗಿ ಕಂಪನಿಯೊಂದರ ಉದ್ಯೋಗಿ ಮೊಹ್ಮದ್ ಅಹ್ಮದ್ ಎಂದು ಗುರುತಿಸಲಾಗಿದೆ.
    ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ಸೈಬರ್ ಅಪರಾಧ ಪೊಲೀಸರನ್ನು ಸಂಪರ್ಕಿಸಿ ಕಳೆದೆರಡು ತಿಂಗಳುಗಳಿಂದ ಎರಡು ನಂಬರ್​​ಗಳಿಂದ ತನಗೆ ಈ ಕುರಿತು ಕರೆ ಬರುತ್ತಿರುವುದಾಗಿ ಆರೋಪಿಸಿದ್ದಾಳೆ.

    ಇದನ್ನೂ ಓದಿ: ಆತ ಪತ್ನಿಯನ್ನು ಕೊಲೆಮಾಡಿ ನಾಲೆಗೆ ಎಸೆದ.. ಕಾರಣವೇನು?

    ಇನ್​​ಸ್ಟಾಗ್ರಾಮ್ ನಿಂದ ಆಕೆಯ ಫೋಟೋಗಳನ್ನು ತೆಗೆದುಕೊಂಡ ಆರೋಪಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್ ಮಾಡಿ, ಅವುಗಳನ್ನು ಡಿಲಿಟ್ ಮಾಡಲು ಆಕೆಯಿಂದ 10 ಸಾವಿರ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಇಷ್ಟೇ ಅಲ್ಲದೆ ಆತ ಆಕೆಯ ಫೋಟೋವನ್ನು ತನ್ನ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನಾಗಿ ಇಟ್ಟುಕೊಂಡಿದ್ದಾನೆ.
    ಪ್ರಕರಣದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ, ಆರೋಪಿ ಮಹಿಳೆಯಂತೆಯೇ ನಟಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ ಎಂದು ತಿಳಿದುಬಂದಿದೆ.

    ಇದನ್ನು ಓದಿ: ಕಾಯುವವನೇ ಕಳ್ಳನಾದಾಗ ಇನ್ನಾರನ್ನು ನಂಬೋದು ಶಿವಾ…!!

    ಆರೋಪಿ ಹುಡುಗಿಯೊಬ್ಬಳ ಫೋಟೊವನ್ನು ತನ್ನ ಪ್ರೊಫೈಲ್ ಚಿತ್ರವಾಗಿ ಅಪ್‌ಲೋಡ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ಫೋಟೋ ಸಂಗ್ರಹಿಸುತ್ತಿದ್ದ ಎಂದು ಸೈಬರ್ ಕ್ರೈಮ್ ಎಸಿಪಿ ಕೆವಿಎಂ ಪ್ರಸಾದ್ ತಿಳಿಸಿದ್ದಾರೆ. ಫೋಟೋಗಳನ್ನು ಸಂಗ್ರಹಿಸಿದ ನಂತರ, ಆತ ಸೋಷಿಯಲ್ ಮೀಡಿಯಾದಲ್ಲಿ ಅವುಗಳನ್ನು ಅಪ್​ಲೋಡ್ ಮಾಡಿ, ನಂತರ ಅವುಗಳನ್ನು ಅಳಿಸಲು ಆ ಮಹಿಳೆಯರಿಂದ ಹಣದ ಬೇಡಿಕೆಯಿಡುತ್ತಿದ್ದನಷ್ಟೇ ಅಲ್ಲದೇ ತನ್ನೊಂದಿಗೆ ಸಂಬಂಧಹೊಂದಲು ಮಹಿಳೆಯರಿಗೆ ಕಿರುಕುಳ ನೀಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
    ಆರೋಪಿಯನ್ನು ಪತ್ತೆ ಹಚ್ಚಿದ ನಂತರ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ, ಎರಡು ಮೊಬೈಲ್ ಫೋನ್​​ಗಳನ್ನು ವಶಪಡಿಸಿಕೊಂಡಿದ್ದಾರೆ.

    ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಚಹಾ ಮಾರಾಟಗಾರನಿಗೆ ಕಾದಿತ್ತು 50 ಕೋಟಿ ರೂ. ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts