More

    ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡುತ್ತಿರುವಾಗ ಮಹಾ ಘಟಬಂಧನ ಮಾಡುತ್ತಿದ್ದಾರೆ: ಎಚ್‍ಡಿಕೆ ವಾಗ್ದಾಳಿ

    ಬೆಂಗಳೂರು: “ಕಳೆದ ಎರಡು ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿದ್ದು ಅತ್ತ ಗಮನ ಹರಿಸುವುದು ಬಿಟ್ಟು ಕಾಂಗ್ರೆಸ್ ಮಹಾ ಘಟಬಂಧನ್ ಮಾಡುತ್ತಿದೆ” ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‍ಡಿ ಕುಮಾರಸ್ವಾಮಿ, “ಈ ಸಭೆಗೆ ಕೋಟ್ಯಾಂತರ ರೂ ಖರ್ಚು ಮಾಡುತ್ತಿದ್ದಾರೆ. ಬ್ಯಾನರ್ ಹಾಕಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹೊರಟ್ಟಿದ್ದಾರೆ. 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಇವರಿಗೆ ಗಮನವಿಲ್ಲ. ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಈ ಸರ್ಕಾರ ಹೇಳುವ ಕೆಲಸ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.

    ಎಚ್‍ಡಿಕೆ ಪ್ರಕಾರ ವಿಪಕ್ಷಗಳ ಸಭೆಗೆ ಜೆಡಿಎಸ್‍ಗೆ ಆಹ್ವಾನ ಯಾಕಿಲ್ಲ?

    ಇದೇ ವೇಳೆ ಅವರು, ಬೆಂಗಳೂರಿನಲ್ಲಿ ಇಂದು ಸಂಜೆ ನಡೆಯಲಿರುವ ವಿಪಕ್ಷ ನಾಯಕರ ಸಭೆಯ ತಮಗೆ ಯಾಕೆ ಆಹ್ವಾನ ನೀಡಲಾಗಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದು “ಅವರು ಜೆಡಿಎಸ್‌ಅನ್ನು ಲೆಕ್ಕಕ್ಕೆ ಇಟ್ಟಿಲ್ಲ. ಮಹಾಘಟಬಂಧನ್ ಆಯೋಜಕರು ಜೆಡಿಎಸ್‌ ಕಥೆ ಮುಗಿದೇ ಹೋಗಿದೆ ಎಂದುಕೊಂಡಿದ್ದಾರೆ. ಅವರು ಆಹ್ವಾನ ಕೊಟ್ರೋ ಇಲ್ಲವೊ ಎಂಬ ವಿಚಾರ ಈಗ ಅವಶ್ಯ ಅಲ್ಲ” ಎಂದಿದ್ದಾರೆ.

    ಇನ್ನು NDA ಮೈತ್ರಿಕೂಟದ ಸಭೆ ವಿಚಾರದ ಕುರಿತಾಗಿಯೂ ಮಾತನಾಡಿದ ಮಾಜಿ ಸಿಎಂ ಎಚ್‍ಡಿಕೆ, “ಇನ್ನು ಸಮಯವಿದೆ, ನೋಡೋಣ. ಲೋಕಸಭೆಗೆ ಇನ್ನು 8, 9 ತಿಂಗಳು ಸಮಯವಿದೆ. ಏನೇನಾಗುತ್ತೋ ನೋಡೋಣ” ಎಂದಿದ್ದಾರೆ. ರಾಜ್ಯದ ಜನ ಒಂದೊಂದು ಬಾರಿ ಒಂದೊಂದು ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ಏನೇ ಹೇಳಿದರೂ ಅದು ಪ್ರಿಮೆಚುರ್ ಆಗುತ್ತದೆ. ಏನೇನಾಗುತ್ತೋ ಕಾದು ನೋಡೋಣ“ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಜೆಡಿಎಸ್‍ ಕಾಂಗ್ರೆಸ್‍ನಿಂದ ಸ್ವಲ್ಪ ದೂರವಾಗಿದ್ದು NDA ಮೈತ್ರಿ ಕೂಟದತ್ತ ಇನ್ನೂ ಸಂಪೂರ್ಣವಾಗಿ ವಾಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts