More

    ಹಾಸನಾಂಬೆ ದರ್ಶನಕ್ಕೆ ಒಬ್ಬನೇ ಹೋಗಿ ಬರ್ತೀನಿ ಎಂದರು ಎಚ್.ಡಿ.ರೇವಣ್ಣ!

    ಹಾಸನ: ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ಜನರ ಮೇಲೆ ವಿಧಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ದೂರಿದರು.

    ರಾಜ್ಯದಲ್ಲಿರುವುದು ಬುಲ್ಡೋಜರ್ ಸರ್ಕಾರ. ತಮ್ಮ ಕೆಲಸವಾಗಬೇಕೆಂದರೆ ಅಧಿಕಾರಿಗಳನ್ನು ಬುಲ್ಡೋಜರ್‌ನಂತೆ ಬಳಸಿಕೊಳ್ಳುತ್ತಾರೆ. ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕ ಪ್ರವೇಶ ಇಲ್ಲ ಎನ್ನುತ್ತಾರೆ. ಬಡವರಿಗೆ ಪ್ರವೇಶ ಇಲ್ಲವಾದರೆ ಗಣ್ಯರಿಗೆ ಅವಕಾಶ ನೀಡಿದ್ದು ಯಾಕೆ?

    ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗಬೇಕು. ಜಿಲ್ಲೆಯಲ್ಲಿ ಆರು ಜೆಡಿಎಸ್ ಶಾಸಕರು, ಸಂಸದ ಇದ್ದರೂ ಪೂರ್ವಭಾವಿ ಸಭೆಗೆ ಕರೆಯಲಿಲ್ಲ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ನೋಡಲು ಜನರು ಬಯಸುತ್ತಾರೆ. ಆದರೆ ಅದಕ್ಕೆ ತಡೆ ನೀಡಿದ್ದು ಯಾರು ? ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಹಾಸನ ತಹಸೀಲ್ದಾರ್ ನನಗೂ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ನಾನೇನು ಕುಟುಂಬಸ್ಥರನ್ನ ಕರೆದುಕೊಂಡು ಹೋಗುವುದಿಲ್ಲ, ಒಬ್ಬನೇ ಹೋಗಿ ಬರ‌್ತಿನಿ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts