More

    ಮಂಡ್ಯದಲ್ಲಿ ಜೆಡಿಎಸ್​ ಬಗ್ಗೆ ತುಟಿಬಿಚ್ಚದ ಪ್ರಧಾನಿ ಮೋದಿ: ಮಾಜಿ ಸಿಎಂ ಎಚ್​ಡಿಕೆ ಹೇಳಿದ್ದಿಷ್ಟು….

    ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯವಲ್ಲ ರಾಜ್ಯದ ಯಾವುದೇ ಭಾಗಕ್ಕೆ ಬಂದರೂ ನಮಗೆ ಅದರ ಚಿಂತೆ ಇಲ್ಲ. ನಮಗೆ ಯಾವುದೇ ತಳಮಳವೂ ಇಲ್ಲ. ಅವರು ಬಂದಿದ್ದು ಗೊತ್ತಿಲ್ಲ ಹೋಗಿದ್ದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.

    ಹಾಸನದ ಹಿರಿಸಾವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ನರೇಂದ್ರ ಮೋದಿ ಅವರು ಮಂಡ್ಯಕ್ಕೆ ಬಂದ ತಕ್ಷಣ ದಳಪತಿಗಳಲ್ಲಿ ತಳಮಳ ಎಂಬ ಮಾತುಗಳನ್ನು ನಾನು ಕೇಳಿದ್ದೇನೆ. ಆದರೆ, ನಮಗೆ ಯಾವುದೇ ತಳಮಳವಿಲ್ಲ ಎಂದರು ಹೇಳಿದರು.

    ಇದನ್ನೂ ಓದಿ: ಚಾರ್ಜ್​ ಹಾಕಿದ್ದ ವೇಳೆ ಎಲೆಕ್ಟ್ರಿಕ್​ ಸ್ಕೂಟರ್​ ಸ್ಫೋಟ: ಸುಟ್ಟು ಕರಕಲಾದ ಗೃಹ ಉಪಯೋಗಿ ವಸ್ತುಗಳು

    ನರೇಂದ್ರ ಮೋದಿ ಅವರು ಜನರನ್ನು ತಾತ್ಕಾಲಿಕವಾಗಿ ಮಾತಿನಲ್ಲಿ ಖುಷಿಪಡಿಸಲು ಹೋದರು. ಅವರ ಮಾತಿಗೆ ಯಾರು ಮರುಳಾಗೋದಿಲ್ಲ. ಅದರಿಂದ ಜನತಾದಳಕ್ಕೆ ಯಾವುದೇ ತಳಮಳವೂ ಇಲ್ಲ ಮತ್ತು ಯಾವುದೇ ಭೀತಿಯು ಇಲ್ಲ. ನಾವು ಇವತ್ತು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುವ ನೈತಿಕತೆಯನ್ನು ಉಳಿಸಿಕೊಂಡಿದ್ದೇವೆ. ಜೆಡಿಎಸ್​ನವರ ಬಗ್ಗೆ ಮಾತನಾಡುವುದಕ್ಕೆ ಮೋದಿ ಅವರ ಹತ್ತಿರ ಯಾವುದೇ ವಿಷಯವಿಲ್ಲ. ಜೆಡಿಎಸ್ ಬಗ್ಗೆ ಮಾತನಾಡುವುದಕ್ಕೆ ಅವರ ಬಳಿ ಸರಕು ಇಲ್ಲದಿರುವುದರಿಂದ. ನಮ್ಮ ಬಗ್ಗೆ ಏನು ಮಾತನಾಡದೇ ಹಾಗೇ ಹೋಗಿದ್ದಾರೆ ಎಂದು ಹೇಳಿದರು.

    ನಾನು ಮುಖ್ಯಮಂತ್ರಿ ಆಗಿದ್ದಾಗ ಮತ್ತು ಎಚ್​.ಡಿ. ದೇವೇಗೌಡರು ಪ್ರಧಾನ ಮಂತ್ರಿ ಇದ್ದಾಗಿನಿಂದ ಜೆಡಿಎಸ್​ನವರ ಬಗ್ಗೆ ಮಾತನಾಡಲು ಆಗುವುದಿಲ್ಲ. ನಾವು ಭ್ರಷ್ಟಾಚಾರಕ್ಕೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. ನಾನು ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಮಂಡ್ಯಕ್ಕೆ ಹಲವಾರು ಯೋಜನೆ ಕೊಟ್ಟೆ. ಇದೇ ಬಿಜೆಪಿ ನಾಯಕರು ಮಂಡ್ಯ ಬಜೆಟ್ ಎಂದು ವ್ಯಂಗ್ಯವಾಡಿದರು. ಮೈತ್ರಿ ಸರ್ಕಾರದಲ್ಲಿ ಕೊಟ್ಟ ಹಣವನ್ನು ಬೇರೆ ಕಡೆಗೆ ತಿರುಗಿಸಿದರು ಎಂದು ಕಿಡಿಕಾರಿದರು.

    ನಿನ್ನೆ ದಿನ ಮೋದಿಯವರು ಕ್ರಿಕೆಟ್ ಬೆಟ್ಟಿಂಗ್ ನಡೆಸುವವನಿಗೆ ತಲೆಬಾಗಿದರು. ಕಾನೂನು ಬಾಹಿರ ಚಟುವಟಿಕೆ ನಡೆಸುವ ಅಂಡರ್​ವರ್ಲ್ಡ್​ ಡಾನ್​ಗಳಿಗೆ ತಲೆಬಾಗಿ ನಮಸ್ಕರಿಸುವ ದೃಶ್ಯ ನೋಡಿದಾಗ ಬಿಜೆಪಿಯ ವ್ಯವಸ್ಥೆ ಎಲ್ಲಿಗೆ ಬಂದಿದೆ ಅನಿಸಿತು ಎಂದರು. ಇದೇ ಸಮಯದಲ್ಲಿ ಸುಮಲತಾ ಅವರು ಮೋದಿಗೆ ಬೆಲ್ಲ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಮಂಡ್ಯ ಜಿಲ್ಲೆಗೆ ಯಾರೇ ಹೋದರೂ ಪ್ರೀತಿ ಅಭಿಮಾನದಿಂದ ಸ್ವಾಗತ ಕೊಡುತ್ತಾರೆ. ಮಂಡ್ಯ ಜಿಲ್ಲೆಯ ಬೆಲೆದ ಸವಿ ನೋಡಿ ಎಂಬ ಉದ್ದೇಶದಿಂದ ಕೊಟ್ಟಿರಬಹುದು. ಬೆಲ್ಲದ ಸವಿ ನೋಡಿ ಒಳ್ಳೆ ಕಾರ್ಯಕ್ರಮ ಕೊಡ್ತಾರ ನೋಡೋಣ ಎಂದು ಹೇಳಿದರು.

    ಇದನ್ನೂ ಓದಿ: ಭಾರತಕ್ಕೆ ಐತಿಹಾಸಿಕ ದಿನ: ದಿ ಎಲಿಫೆಂಟ್​ ವಿಸ್ಪರರ್ಸ್​, ನಾಟು ನಾಟುಗೆ ಒಲಿದ ಆಸ್ಕರ್, ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ…

    ಬಿಜೆಪಿಯವರು ಒಕ್ಕಲಿಗರನ್ನು ಟಾರ್ಗೆಟ್ ಮಾಡಿಕೊಂಡು ಉರಿಗೌಡ ಮತ್ತು ದೊಡ್ಡ ನಂಜೇಗೌಡ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನೋಡಿ ಈ ಸಮಾಜದ ಗೌರವವನ್ನು ಹಾಳು ಮಾಡುವಂತದ್ದು ಅದು. ಆ ವ್ಯಕ್ತಿಗಳು ಟಿಪ್ಪುವನ್ನು ಕೊಂದಿರುವ ಇತಿಹಾಸವಿಲ್ಲ. ಆ ಇತಿಹಾಸವನ್ನು ಸೃಷ್ಟಿ ಮಾಡಿರುವವರು ಬಿಜೆಪಿಯವರು. ಇತಿಹಾಸ ಸೃಷ್ಟಿ ಮಾಡಿ ನಮ್ಮ ಸಮಾಜದ ಹೆಸರನ್ನು ಹಾಳು ಮಾಡಿ ಸಮಾಜಕ್ಕೆ ಅಗೌರವ ಸಲ್ಲಿಸುತ್ತಿದ್ದಾರೆ. ಒಕ್ಕಲಿಗರು ಅದನ್ನ ಪ್ರತಿಭಟಿಸಬೇಕು ಮತ್ತು ಧಿಕ್ಕರಿಸಬೇಕು ಎಂದರು. (ಏಜೆನ್ಸೀಸ್​)

    ಚಿನ್ನಾಭರಣ ದೋಚಲೆಂದೇ ಮದ್ವೆಯಾಗ್ತಿದ್ದ ಮಹಾವಂಚಕ ಅರೆಸ್ಟ್​! 10 ಮಹಿಳೆಯರಿಗೆ ವಂಚನೆ

    ಬಿಟ್ಟು ಹೋದ ಪತ್ನಿ ಮೇಲಿನ ಸಿಟ್ಟಿಗೆ ಅತ್ತೆಯ ಮೂಗು ಕಚ್ಚಿದ ಅಳಿಯ

    ಆಜಾನ್‌ ಬಗ್ಗೆ ವಿವಾದದ ಕಿಡಿ ಹೊತ್ತಿಸಿದ ಕೆ.ಎಸ್.ಈಶ್ವರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts