More

    ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ…ಅಧಿಕಾರ ಅನುವಿಸಬೇಕೆಂದು ರಾಜಕಾರಣ ಮಾಡುತ್ತಿಲ್ಲ; ಎಚ್​ಡಿಕೆ

    ಬೆಂಗಳೂರು: ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ. ಅಧಿಕಾರ ಅನುವಿಸಬೇಕೆಂದು ರಾಜಕಾರಣ ಮಾಡುತ್ತಿಲ್ಲ, ಜನರ ಸಮಸ್ಯೆಗೆ ಪರಿಹಾರ ನೀಡಲು ನಾನು ಹೋರಾಟ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    2006 ಮತ್ತು 2018 ರಲ್ಲಿ ಸಿಎಂ ಆಗುವ ಸನ್ನಿವೇಶ ಬಂದಾಗ, ಎರಡು ಬಾರಿಯೂ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಆದರೆ ನನ್ನ ಉತ್ತಮ ಕೆಲಸವನ್ನ ಮರೆಮಾಚಿ ಕೆಟ್ಟ ಹೆಸರು ತರುವ ಸಂಚು ರೂಪಿಸಿದರು. ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಇದ್ದೆ ಎಂದು ಪ್ರಚಾರ ನಡೆಸಿದರು. ಕಾವೇರಿ ನಿವಾಸವನ್ನು ಕೆ.ಜೆ.ಜಾರ್ಜ್ ಹೆಸರಿನಲ್ಲಿ ಸಿದ್ದರಾಮಯ್ಯ ಇಟ್ಟುಕೊಂಡಿದ್ರು. ನಾನು ಸ್ವಲ್ಪ ವಿಶ್ರಾಂತಿಗಾಗಿ, ಊಟಕ್ಕೆ ತಾಜ್ ವೆಸ್ಟ್ ಎಂಡ್​​ಗೆ ಹೋದರೆ ಅದನ್ನೇ ದೊಡ್ಡ ವಿಷಯ ಮಾಡಿದ್ರು ಎಂದು ಎಚ್​ಡಿಕೆ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಕೊಡುಗೆ ನೀಡಿದ ವಂಡರ್‌ಲಾ; ಮಹಿಳೆಯರಿಗೆ ಒಂದು ಟಿಕೆಟ್‌ ಖರೀದಿಗೆ ಮತ್ತೊಂದು ಟಿಕೆಟ್‌ ಉಚಿತ

    ನನಗೆ ಯಾವ ಮಂತ್ರಿ ಹಾಗೂ ಕಾಂಗ್ರೆಸ್​​ನವರಿಂದ ಸಹಕಾರ ಸಿಗಲಿಲ್ಲ. ಕಾಂಗ್ರೆಸ್‌ ಸಚಿವರಿಗೆ ಸಾಕಷ್ಟು ಅನುದಾನ ನೀಡಿದ್ದೆ. ರೈತರ ಸಾಲ ಮನ್ನಾ ಮಾಡಲು ಸಾಕಷ್ಟು ಶ್ರಮಪಟ್ಟೆ. ಆದರೆ ಕಾಂಗ್ರೆಸ್‌ನವರು ಸಾಲಮನ್ನಾ ಮಾಡಲು ಅಗತ್ಯ ಸಹಕಾರ ನೀಡಲಿಲ್ಲ. ಆದರೆ ನಾನು ಸಾಕಷ್ಟು ಕಷ್ಟ ಪಟ್ಟು ರೈತರ ಸಾಲಮನ್ನ ಮಾಡಿದೆ ಎಂದರು.

    ಕುಮಾರಸ್ವಾಮಿಯವರು ಸರ್ಕಾರ ಉಳಿಸಿಕೊಳ್ಳಲಿಲ್ಲ, ನಮಗೆ ಟೋಪಿ ಹಾಕಿ ಕೆಲವರು ಹೊದ್ರು ಎಂದು ಕಾಂಗ್ರೆಸ್‌ನವರು ಹೇಳ್ತಾರೆ. ಇನ್ನು 15 ದಿನ ಕಾಯಿರಿ. ಯಾರ್ಯಾರು ಟೋಪಿ ಹಾಕಿ ಹೋದ್ರು, ಅವರೆಲ್ಲ ಮತ್ತೆ ಯಾವ ಪಕ್ಷಕ್ಕೆ ಹೋಗ್ತಾರೆ ಎಂದು ನಿಮಗೆಲ್ಲ ಗೊತ್ತಾಗುತ್ತೆ ಎಂದು ಆಕ್ರೋಶ ಹೊರಹಾಕಿದರು.

    ನನಗೆ ಎರಡು ಬಾರಿ ಆಪರೇಷನ್ ಆಗಿದೆ. ನಾನು ಪಲಾಯನವಾದಿಯಲ್ಲ, ಹೋರಾಟದ ಕುಟುಂಬದಿಂದ ಬಂದವನು. ಈ ಹೋರಾಟ ಏಕಾಂಗಿಯಾಗಿ ಮಂಡ್ಯ ಜನತೆಗೆ ಸಂದೇಶ ಕೊಡಲು ಬಯಸುತ್ತೇನೆ. ಒಂದು ಕಡೆ ನಾನು ಒಬ್ಬ, ಆದರೆ ಕಾಂಗ್ರೆಸ್‌, ಬಿಜೆಪಿಯಲ್ಲಿ ಮಹಾಭಾರತದ ರೀತಿ ಅಕ್ಷೋಯಿಣಿ ಸೈನ್ಯಗಳು ಇವೆ. ಹೀಗಿದ್ದೂ ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ.

    ಇದನ್ನೂ ಓದಿ: ಸಾವಿನಲ್ಲೂ ಒಂದಾದ ತಾಯಿ-ಮಗ; ಬಾಗಲಕೋಟೆಯಲ್ಲಿ ನಡೆಯಿತು ಹೃದಯ ಹಿಂಡುವ ಘಟನೆ!

    ಕಾರ್ಯಕರ್ತರು ಬೆಳೆಸಿದ ಕುಟುಂಬದ ಮಕ್ಕಳ ಹೋರಾಟ 40, 50 ಸ್ಥಾನ ಗೆಲ್ಲಲು ಅಲ್ಲ. ಜೆಡಿಎಸ್‌ನ ಮುಗಿಸ್ತೀವಿ ಎಂದು ಹೊರಟವರಿಗೆ ಉತ್ತರ ನೀಡಲು 123 ಸ್ಥಾನ ಗೆಲ್ಲಲು ಹೊರಟಿದ್ದೇನೆ. ಕಾಂಗ್ರೆಸ್‌, ಬಿಜೆಪಿ ಇವೆರಡು ಬೇಡ ಪ್ರಾದೇಶಿಕ ಪಕ್ಷ ಜೆಡಿಎಸ್‌ ಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts