More

    ಮತದಾರರ ಜಾಗೃತಿಗಾಗಿ ಭಿತ್ತಿ ಪತ್ರ, ಪ್ರಬಂಧ ಸ್ಪರ್ಧೆ

    ಹಾವೇರಿ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರದ ಗುರು ಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ಬಗೆಯ ಭಿತ್ತಿ ಪತ್ರ, ಪ್ರಬಂಧ ಸ್ಪರ್ಧೆ, ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
    ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಪಾಲ್ಗೊಂಡಿದ್ದರು. ಕನ್ನಡ ಪ್ರಬಂಧ ಮತ್ತು ಇಂಗ್ಲಿಷ್ ಪ್ರಬಂಧದ ವಿಷಯದ ಕುರಿತು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.
    ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಡಯಟ್ ಪ್ರಾಂಶುಪಾಲ ಗಿರೀಶ ಪದಕಿ, ಶಿಕ್ಷಣಾಧಿಕಾರಿ ರಮೇಶ, ಝಡ್.ಎಂ. ಖಾಜಿ, ವಿಷಯ ಪರಿವೀಕ್ಷಕ ಮಂಜಪ್ಪ ಆರ್., ಚುನಾವಣಾ ಸಾಕ್ಷರತಾ ಸಂಘಗಳ ಜಿಲ್ಲಾ ನೋಡಲ್ ಅಧಿಕಾರಿ ಸಿಕಂದರ್ ಮುಲ್ಲಾ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ನಿರ್ಣಾಯಕರು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
    ಸ್ಪರ್ಧೆಯ ಫಲಿತಾಂಶ ::
    ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಶಿಗ್ಗಾಂವಿ ತಾಲೂಕು ನೀರಲಗಿ ಜಿಎಚ್‌ಎಸ್ ಶಾಲೆಯ ನಾಗರತ್ನ ಬಡ್ಡಿ ಪ್ರಥಮ, ಬ್ಯಾಡಗಿ ತಾಲೂಕು ಮಾಸಣಗಿಯ ಜಿಎಚ್‌ಎಸ್ ಶಾಲೆಯ ಚಂದನ ಕೆಪ್ಪಲಿಂಗಣ್ಣನವರ ದ್ವಿತೀಯ, ಸವಣೂರ ತಾಲೂಕು ಡಂಬರಮತ್ತೂರಿನ ಎಸ್‌ಎಸ್‌ಎಚ್ ಶಾಲೆಯ ವಾಡುದೇವ ವಡ್ಡೇರ ತೃತೀಯ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಯತ್ತನಹಳ್ಳಿ ಸಾಯಿಚಂದ ಗುರುಕುಲದ ಅನಿಕೇತ ಚಿಕ್ಕಮಠ ಪ್ರಥಮ, ಬ್ಯಾಡಗಿ ಅಂಬೇಡ್ಕರ್ ಪ್ರೌಢಶಾಲೆಯ ಸಾಗರ ರೊಟ್ಟೇರ ದ್ವಿತೀಯ, ಹಿರೇಕೆರೂರ ಕೌರವ ಆಂಗ್ಲಮಾಧ್ಯಮ ಶಾಲೆಯ ತಿಯಾ ಮಹಕ್ ಮುಲ್ಲಾ ತೃತೀಯ ಸ್ಥಾನ ಪಡೆದಿದ್ದಾರೆ.
    ಭಿತ್ತಿ ಪತ್ರ ಸ್ಪರ್ಧೆಯಲ್ಲಿ ಕನವಳ್ಳಿ ಜಿಯುಎಚ್‌ಎಸ್ ಶಾಲೆಯ ಸಬ್ರಿನ್ ಕಬ್ಬೂರ ಪ್ರಥಮ, ಬ್ಯಾಡಗಿ ಎಂಡಿಎಸ್‌ಎಚ್ ಪ್ರೌಢಶಾಲೆಯ ಶ್ರೀಕಾಂತ ಬಸಪ್ಪನವರ ದ್ವಿತೀಯ ಹಾಗೂ ನೀರಲಗಿ ಜಿಎಚ್ ಶಾಲೆಯ ವೀರನಗೌಡ ಕಲ್ಲಿನಗೌಡ್ರ ತೃತೀಯ ಸ್ಥಾನ ಪಡೆದಿದ್ದಾರೆ. ರಸ್ಪ್ರಶ್ನೆ ಸ್ಪರ್ಧೆಯಲ್ಲಿ ರಾಣೆಬೆನ್ನೂರ ಜಿಎಚ್ ಶಾಲೆಯ ಮೋಹನ ಜೋಗಾರ ಪ್ರಥಮ, ಬಿಸಲಹಳ್ಳಿ ಜಿಎಚ್ ಶಾಲೆ ಯಶೋಧಾ ಹಿತ್ತಲಮನಿ ಹಾಗೂ ರೇಖಾ ಹಡಪದ ದ್ವಿತೀಯ ಹಾಗೂ ಹಿರೇಹುಳ್ಳಾಳದ ಸುಧಾ ನೆಗಳೂರ ಹಾಗೂ ಲಕ್ಷ್ಮೀ ಕೋಟಿ ತೃತೀಯ ಸ್ಥಾನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts