More

    ಆರು ಕ್ರೇತ್ರಗಳಿಗೆ ಈವರೆಗೆ 106 ನಾಮಪತ್ರ ಸಲ್ಲಿಕೆ

    ಹಾವೇರಿ: ಜಿಲ್ಲೆಯ ಆರು ಕ್ಷೇತ್ರಗಳಿಂದ ಏ.19ರಂದು ಬರೋಬ್ಬರಿ 24 ಅಭ್ಯರ್ಥಿಗಳಿಂದ 30 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈವರೆಗೆ 66 ಅಭ್ಯರ್ಥಿಗಳಿಂದ 106 ನಾಮಪತ್ರಗಳು ಸಲ್ಲಿಕೆಯಾಗಿವೆ. ಏಪ್ರಿಲ್ 19ರಂದು ಹಾವೇರಿ ಕ್ಷೇತ್ರದಿಂದ ಎಂಟು ಅಭ್ಯರ್ಥಿಗಳಿಂದ ಎಂಟು ನಾಮಪತ್ರ, ಬ್ಯಾಡಗಿ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ಐದು ನಾಮಪತ್ರ, ಶಿಗ್ಗಾಂವಿ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರ, ರಾಣೆಬೆನ್ನೂರ ಕ್ಷೇತ್ರದಿಂದ ಐದು ಅಭ್ಯರ್ಥಿಗಳಿಂದ ಆರು ನಾಮಪತ್ರ, ಹಾನಗಲ್ಲ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಹಾಗೂ ಹಿರೇಕೆರೂರ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳಿಂದ ಎರಡು ನಾಮಪತ್ರ ಸಲ್ಲಿಕೆಯಾಗಿವೆ. ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ (ಎರಡು ನಾಮಪತ್ರ), ಪಕ್ಷೇತರರಾಗಿ ಶಶಿಧರ ಯಲಿಗಾರ, ಶಂಕ್ರಪ್ಪ ಹುಲಸೋಗಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಹಾನಗಲ್ಲ ಕ್ಷೇತ್ರದಿಂದ ಬಿಜೆಪಿಯಿಂದ ಶಿವರಾಜ ಸಜ್ಜನರ (ಮೂರು ನಾಮಪತ್ರ), ಪಕ್ಷೇತರರಾಗಿ ಶ್ರೀನಿವಾಸ ಸಂಕಪಾಳೆ ಹಾಗೂ ಸುಬ್ರಹ್ಮಣ್ಯ ಹೆಬ್ಬಾರ ನಾಮಪತ್ರ ಸಲ್ಲಿಸಿದ್ದಾರೆ. ಹಾವೇರಿ ಕ್ಷೇತ್ರದಿಂದ ಬಿಜೆಪಿಯಿಂದ ಗವಿಸಿದ್ದಪ್ಪ ದ್ಯಾಮಣ್ಣನವರ, ಆಮ್ ಆದ್ಮಿ ಪಕ್ಷದಿಂದ ಸುಜಾತಾ ಚವ್ಹಾಣ, ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ ಪ್ರೇಮಾ ಕಲಕೇರಿ, ಪಕ್ಷೇತರರಾಗಿ ಮಲ್ಲಿಕಾರ್ಜುನ ಕಟ್ಟಿಮನಿ, ಪ್ರದೀಪ ಮಳಗಾವಿ, ಈರಪ್ಪ ಲಮಾಣಿ, ರಾಮು ಮಾಳಗಿ ಹಾಗೂ ಶಿವಕುಮಾರ ತಾವರಗಿ, ಕೆ.ಬಿ.ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಸಿದ್ದಾರೆ. ಬ್ಯಾಡಗಿ ಕ್ಷೇತ್ರದಿಂದ ಬಿಜೆಪಿಯಿಂದ ವಿರುಪಾಕ್ಷಪ್ಪ ಬಳ್ಳಾರಿ (ಎರಡು ನಾಮಪತ್ರ), ಕಾಂಗ್ರೆಸ್‌ನಿಂದ ಬಸವರಾಜ ಶಿವಣ್ಣನವರ (ಎರಡು ನಾಮಪತ್ರ), ಪಕ್ಷೇತರರಾಗಿ ರಾಘವೇಂದ್ರ ದಾಮೋದರ ನಾಮಪತ್ರ ಸಲ್ಲಿಸಿದ್ದಾರೆ.
    ಹಿರೇಕೆರೂರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಉಜಣೇಶ್ವರ ಬಸವಣ್ಣೆಪ್ಪ ಬಣಕಾರ, ಕೆ.ಆರ್.ಎಸ್.ಪಾರ್ಟಿಯಿಂದ ಕೊಡೆಪ್ಪ ಸಂಗಣ್ಣನವರ ನಾಮಪತ್ರ ಸಲ್ಲಿಸಿದ್ದಾರೆ. ರಾಣೇಬೆನ್ನೂರ ಕ್ಷೇತ್ರದಿಂದ ಬಿಜೆಪಿಯಿಂದ ಅರುಣಕುಮಾರ ಗುತ್ತೂರ, ಕಾಂಗ್ರೆಸ್‌ನಿಂದ ಪ್ರಕಾಶ ಕೋಳಿವಾಡ ( ಎರಡು ನಾಮಪತ್ರ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ ಆರ್.ಶಂಕರ್, ಪಕ್ಷೇತರರಾಗಿ ಸಂತೋಷಕುಮಾರ ಪಾಟೀಲ, ರುದ್ರಮುನಿ ರಾಮಕ್ಕನವರ ನಾಮಪತ್ರ ಸಲ್ಲಿಸಿದ್ದಾರೆ.
    ಇಂದು ಕೊನೆಯ ದಿನ :
    ಏ.20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.24ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts