More

    ‘ಹಾಸ್ಟೆಲ್‌ನಲ್ಲಿ ಹೊಟ್ಟೆ ತುಂಬ ಊಟ ಕೊಡಲ್ಲ ಸಾರ್’; ಮಕ್ಕಳ ಆಯೋಗದ ಸದಸ್ಯ ರಾಮತ್ನಾಳ ಎದುರು ವಸತಿ ಶಾಲೆ ಮಕ್ಕಳ ನೋವಿನ ನುಡಿ

    ಹಾವೇರಿ/ ಶಿಗ್ಗಾಂವಿ: ‘ಹೊಟ್ಟೆ ತುಂಬ ಊಟ ಕೊಡುವುದಿಲ್ಲ. ಅರೆಬರೆ ಹೊಟ್ಟೆಯಲ್ಲೇ ಶಾಲೆಗೆ ಹೋಗಬೇಕು. ರಾತ್ರಿ ಮಿಕ್ಕಿ ಉಳಿದ ಆಹಾರವನ್ನು ಬೆಳಗ್ಗೆ, ಮಧ್ಯಾಹ್ನ ಉಳಿದದ್ದನ್ನು ರಾತ್ರಿ ಕೊಡುತ್ತಾರೆ ಸಾರ್’ ಎಂದು ವಸತಿ ಶಾಲೆಯ ಮಕ್ಕಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರ ಎದುರು ನೋವು ತೋಡಿಕೊಂಡಿದ್ದಾರೆ.
    ಶುಕ್ರವಾರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ರಾಮತ್ನಾಳ ಅವರು ರಾತ್ರಿ ಶಿಗ್ಗಾಂವಿ ತಾಲೂಕು ಗಂಜೀಗಟ್ಟಿ ಮೊರಾರ್ಜಿ ವಸತಿ ಶಾಲೆ ಹಾಗೂ ತಾಲೂಕಿನ ಕರಜಗಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದಾಗ ಹಲವು ಅವ್ಯವಸ್ಥೆಯ ಪ್ರದರ್ಶನವಾಗಿದೆ.
    ಬೆಳಗ್ಗೆ ಉಪಾಹಾರಕ್ಕೆಂದು ತಯಾರಿಸಿದ್ದ ಪಲಾವ್ ಅನ್ನು ಮತ್ತೆ ಮಧ್ಯಾಹ್ನದ ಊಟಕ್ಕೆ ಬಡಿಸಿದ್ದು ಕಂಡ ರಾಮತ್ನಾಳ ಅವರು ಸಿಬ್ಬಂದಿ ಹಾಗೂ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಾಮಾಣಿಕೃತ ಆಹಾರ ಪಟ್ಟಿ ಇಲ್ಲದಿರುವ ಕುರಿತು ಚಾರ್ಜ್ ಮಾಡಿದ್ದಾರೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಪೆನ್ ನೀಡಿಲ್ಲ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
    ಸಮನ್ಸ್ ಜಾರಿ :
    ವಸತಿ ಶಾಲೆ ಮಕ್ಕಳ ಸಮಸ್ಯೆ ಗಂಭೀರವಾಗಿ ಪರಿಗಣಿಸಿರುವ ರಾಮತ್ನಾಳ ಅವರು, ಆಯೋಗದಲ್ಲಿ ಸ್ವಯಂ ದೂರು ದಾಖಲಿಸಿಕೊಂಡು ಎರಡೂ ವಸತಿ ಶಾಲೆ ಪ್ರಾಚಾರ್ಯರು ಹಾಗೂ ವಾರ್ಡನ್‌ಗಳಿಗೆ ಸಮನ್ಸ್ ಜಾರಿ ಮಾಡುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts