More

    ರೋಟರಿ ಕ್ಲಬ್‌ನಿಂದ ಸಮಾಜಮುಖಿ ಕಾರ್ಯ; ಅನಿಲ ಜೈನ

    ಹಾವೇರಿ: ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಸಮಾಜ ಸೇವೆಯಲ್ಲಿ ನಿರತವಾಗಿದ್ದು, ಪೋಲಿಯೋ ನಿರ್ಮೂಲನೆಯಲ್ಲಿ ಗಣನೀಯ ಪಾತ್ರ ವಹಿಸುವ ಮೂಲಕ ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಮಾಜಮುಖಿ ಸೇವೆಗೆ ಹೆಸರಾಗಿದೆ ಎಂದು ರೋಟರಿ ಅನುಸ್ಥಾಪನಾ ಅಧಿಕಾರಿ ರೋಟರಿಯನ್ ಅನಿಲ ಜೈನ ಹೇಳಿದರು.
    ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೋಟರಿ ಸಂಸ್ಥೆ ಹಾವೇರಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯ ಸದಸ್ಯರು ನೀಡುವ ದೇಣಿಗೆಯನ್ನು ಪೋಲಿಯೋದ ನಿರ್ಮೂಲನೆಗೆ, ಅನಕ್ಷರತೆ ಹೋಗಲಾಡಿಸಲು, ಪರಿಸರ ಮಾಲಿನ್ಯ ತಡೆಗಟ್ಟುವುದು ಸೇರಿದಂತೆ ಮತ್ತಿತರ ಸಮಾಜಮುಖಿ ಕಾರ್ಯಕ್ರಮಗಳಿಗೆ ಉಪಯೋಗಿಸಲಾಗುತ್ತದೆ ಎಂದರು.
    ನಿರ್ಗಮಿತ ಅಧ್ಯಕ್ಷ ಸುರೇಶ ಕಡಕೋಳ ಅವರು ನೂತನ ಅಧ್ಯಕ್ಷ ಸುಜೀತಕುಮಾರ ಜೈನ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸದ ಸುಜೀತಕುಮಾರ ಮಾತನಾಡಿ, ತಮ್ಮ ಅವಧಿಯಲ್ಲಿ ಅನೇಕ ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
    ಕಾರ್ಯದರ್ಶಿ ಗಣೇಶ ಮುಷ್ಠಿ 2022-23ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಇನ್ನರ್‌ವ್ಹೀಲ್ ಸಂಸ್ಥೆಯ ನೂತನ ಅಧ್ಯಕ್ಷೆ ಮಮತಾ ಬಾಲೆಹೊಸುರ, ಕಾರ್ಯದರ್ಶಿ ಪ್ರತಿಭಾ ಹಾವನೂರ ಮತ್ತು ಇತರ ಪದಾಧಿಕಾರಿಗಳಿಗೆ ವಿರಾಜ ಕೋಟಕ ಪ್ರತಿಜ್ಞಾವಿಧಿ ಬೋಧಿಸಿದರು. ರೋಟರ‌್ಯಾಕ್ಟ ಘಟಕದ ನೂತನ ಅಧ್ಯಕ್ಷ ಗುರುರಾಜ ಮೊಕ್ತಾಲಿ, ಕಾರ್ಯದರ್ಶಿ ಯಶ್ ಮಲ್ಲಗೌಡರ ಹಾಗೂ ಸದಸ್ಯರಿಗೆ ರೋಟರಿ ಸಂಸ್ಥೆಯ ಅಸಿಸ್ಟಂಟ್ ಗವರ್ನರ್ ಮಾಲತೇಶ ಅರಳಿಮಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.
    ಸಮಾರಂಭದಲ್ಲಿ ರೋ.ಅಜೀತ ಮಾಗಾವಿ ಹಾಗೂ ರೋ.ದಯಾನಂದ ಯಡ್ರಾಮಿ ನಿರೂಪಿಸಿದರು. ನೂತನ ಕಾರ್ಯದರ್ಶಿ ರೋ.ಎಸ್.ಸಿ.ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts