More

    ಮುಂದುವರೆದ ಆರ್‌ಎಫ್‌ಒಗಳ ಆಸ್ತಿ ಶೋಧ

    ಹಾವೇರಿ: ಹಾವೇರಿ ತಾಲೂಕು ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಮಹಾಂತೇಶ ನ್ಯಾಮತಿ ಹಾಗೂ ಜಲಾನಯನ ಅಭಿವೃದ್ಧಿ ಘಟಕದ ಆರ್‌ಎಫ್‌ಒ ಪರಮೇಶ ಪೇಲನವರ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ಸೋಮವಾರ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಮಂಗಳವಾರವೂ ಆಸ್ತಿ ದಾಖಲೆ ಪತ್ರಗಳ ಶೋಧ ಮುಂದುವರೆಸಿದ್ದರು.
    ಸೋಮವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಿದ್ದ ಲೋಕಾ ದಾಳಿ ಮಂಗಳವಾರ ಬೆಳಗ್ಗೆ ಮುಕ್ತಾಯಗೊಂಡಿದೆ. ಆದರೆ, ಇಬ್ಬರಿಗೆ ಸಂಬಂಧಿಸಿದ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳ ಪರಿಶೀಲನೆ ಕಾರ್ಯ ಮುಂದುವರೆಸಿದ್ದಾರೆ.
    ಪರಮೇಶ ಪೇಲನವರಗೆ ಸೇರಿದ 6 ಮನೆ, 8 ಎಕರೆ ಜಮೀನು, ಫಾರ್ಮ್ ಹೌಸ್, 2 ಸೈಟು, 400 ಗ್ರಾಂ ಚಿನ್ನ, ಪಿಸ್ತೂಲ್, ವಿದೇಶಿ ಮದ್ಯ, ಸೇರಿದಂತೆ ಒಟ್ಟು 2.6 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದನ್ನು ಹೊರತುಪಡಿಸಿ 6 ಪ್ರತ್ಯೇಕ ಜಮೀನು ಖರೀದಿ ಪತ್ರಗಳು ದೊರೆತಿವೆ. ಮಹಾಂತೇಶ ನ್ಯಾಮತಿಗೆ ಸೇರಿದ 2 ಮನೆ, 3 ಕಡೆಗಳಲ್ಲಿ 6 ಎಕರೆ ಜಮೀನು, 1 ಸೈಟು, ಮತ್ತಿತರ ದಾಖಲೆಗಳು ಸೇರಿದಂತೆ ಒಟ್ಟು 1.6 ಕೋಟಿ ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಇನ್ನೂ ಪರಿಶೀಲನೆ ಕಾರ್ಯ ಮುಂದುವರೆದಿದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಪಿಸ್ತೂಲ್ ಎಲ್ಲಿಂದ ಬಂತು ?
    ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಪರಮೇಶ ಪೇಲನವರಗೆ ಸೇರಿದ ಪಿಸ್ತೂಲ್ ಪತ್ತೆಯಾಗಿದೆ. ಈ ಪಿಸ್ತೂಲ್ ಎಲ್ಲಿ ಮತ್ತು ಯಾರು ಖರೀದಿಸಿದ್ದರು ? ಇದಕ್ಕೆ ಪರವಾನಗಿ ಇದೆಯೋ, ಇಲ್ಲವೋ ? ಎಂಬ ಕುರಿತು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts