More

    ಹಾವೇರಿಯಲ್ಲಿ ರಾಮ ತಾರಕ ಮಹಾಯಘ್ನ; ಜಿಲ್ಲೆಯಲ್ಲಿ 7.5 ಕೋಟಿ ರಾಮನಾಮ ಜಪ

    ಹಾವೇರಿ: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹಾವೇರಿಯ ಎಂಜಿ ರಸ್ತೆಯ ಶ್ರೀರಾಮ ಮಂದಿರದಲ್ಲಿ ಸೋಮವಾರ ರಾಮ ತಾರಕ ಮಹಾಯಘ್ನ ಜರುಗಿತು. ಸಹಸ್ರಾರು ಭಕ್ತರು ರಾಮನ ದರ್ಶನ ಪಡೆದು ಪುನೀತರಾದರು.
    ಬೆಳಗ್ಗೆ ಶ್ರೀರಾಮನಿಗೆ ಕಾಕಡಾರತಿಯಿಂದ ಯಘ್ನ ಪ್ರಾರಂಭವಾಯಿತು. ರಾಮದೇವರಿಗೆ ಅಭಿಷೇಕ ಮಾಡಲಾಯಿತು. ನಂತರ ಯಘ್ನದ ಪುಣ್ಯಾಹವಾಚನ, ದೇವತಾ ಸ್ಥಾಪನೆ, ರಾಮಜಪ ಯಘ್ನ ಜರುಗಿತು. ಪ್ರಭು ಶ್ರೀರಾಮ, ಸೀತಾಮಾತೆ, ಲಕ್ಷ್ಮಣ, ಹನುಮಂತ, ಮಹಾಗಣಪತಿ, ನವಗ್ರಹ ದೇವರನ್ನು ಆವಾಹಿಸಿಕೊಂಡು ರಾಮ ಜಪ ಮಾಡಲಾಯಿತು. 13 ಸಾವಿರ ಜೈರಾಮ್ ಶ್ರೀರಾಮ್ ಸ್ವಾಹಾಕಾರದೊಂದಿಗೆ ಯಘ್ನ ಮಾಡಲಾಯಿತು. ಪೂರ್ಣಾಹುತಿಯೊಂದಿಗೆ ಮಹಾಪ್ರಸಾದ ವಿತರಿಸಲಾಯಿತು.
    ರಾಮಜಪ ಯಘ್ನ ಮಾಡುವ ಸಂಕಲ್ಪವನ್ನು ನವರಾತ್ರಿಯ ದಿನ ಮಾಡಲಾಗಿತ್ತು. ರಾಮಭಕ್ತರು ಜಪಮಾಲೆಗಳಿಂದ ಒಂದು ತಿಂಗಳ ಕಾಲ ಜಪ ಮಾಡಿದ್ದಾರೆ. ಹಾವೇರಿ ನಗರದಲ್ಲಿ ಒಂದು ಕೋಟಿ ಜಪ ಮಾಡಲಾಗಿದೆ. ಜಿಲ್ಲೆಯಿಂದ ಒಟ್ಟು ಏಳೂವರೆ ಕೋಟಿ ಜಪ ಮಾಡಲಾಗಿದೆ ಎಂದು ದೇಗುಲದ ಪ್ರಧಾನ ಅರ್ಚಕ ದತ್ತಾತ್ರೇಯ ಕಳ್ಳಿಹಾಳ ತಿಳಿಸಿದರು.
    ಬೂದಗಟ್ಟಿಯ ವೇದಬ್ರಹ್ಮ ಶ್ರೀನಿವಾಸ ಶಿವಪೂಜಿ ನೇತೃತ್ವದ ತಂಡದಿಂದ ಯಘ್ನ ನಡೆಯಿತು. ಜಿಲ್ಲಾ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ವಸಂತ ಮೊಕ್ತಾಲಿ, ದೇಗುಲದ ಧರ್ಮದರ್ಶಿ ಹನುಮಂತ ನಾಯ್ಕ ಬದಾಮಿ, ನವದುರ್ಗೆ ದೇಗುಲ ಪುರೋಹಿತ ಗೌರಿಶಂಕರ ಭಟ್, ವಾಸುದೇವಾಚಾರ ರಾಜಪುರೋಹಿತ, ಶೇಷಗಿರಿ ಹರಿಕಾರ, ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts