More

    ಆಕ್ಸಫರ್ಡ್ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ

    ಹಾವೇರಿ: ನಗರದ ಬಸ್ ನಿಲ್ದಾಣದ ಎದುರಿನ ಆಕ್ಸಫರ್ಡ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಮಂಗಳವಾರ ಜರುಗಿತು.
    ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸಮ್ಮೇಳನ ಉದ್ಘಾಟಿಸಿದರು. ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಅಗಡಿ ಆನಂದನವನ ಮಠದ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿ ಸಾನ್ನಿಧ್ಯ ವಹಿಸಿದ್ದರು. ಶಿಗ್ಗಾಂವಿ ರಂಭಾಪುರಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಎಸ್.ವಿ.ಕುಲಕರ್ಣಿ ವಿಶೇಷ ಉಪನ್ಯಾಸ ನೆರವೇರಿಸಿದರು.
    ಸಮಾರಂಭದಲ್ಲಿ ಡಿಡಿಪಿಐ ಡಾ.ಉಮೇಶಪ್ಪ ಎಚ್., ಮಹಾವಿದ್ಯಾಲಯದ ಅಧ್ಯಕ್ಷ ಡಾ.ಪ್ರಶಾಂತ ಬೆನ್ನೂರ, ಪ್ರಾಚಾರ್ಯ ವೀರೇಶ ಹಿತ್ತಲಮನಿ, ಮ್ಯಾನೇಜರ್ ಮೇಘರಾಜ, ಅಜ್ಜಪ್ಪ ಬೆನ್ನೂರ, ಚನ್ನಪ್ಪ ಕಲಾಲ, ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts