More

    ಬೆಳೆವಿಮೆ ಮದ್ಯಂತರ ಪರಿಹಾರದಲ್ಲಿ ಹಾವೇರಿ ಮೊದಲು; ಹಾವೇರಿ 126, ಕೊಪ್ಪಳಕ್ಕೆ 26, ಶಿವಮೊಗ್ಗಕ್ಕೆ 6 ಕೋಟಿ ರೂ. ಜಮೆ; ಸಚಿವ ಶಿವಾನಂದ ಪಾಟೀಲ

    ಹಾವೇರಿ: ಇಲ್ಲಿನ ಜಿಲ್ಲಾಡಳಿತದ ಪರಿಶ್ರಮದ ಫಲವಾಗಿ ರಾಜ್ಯದಲ್ಲೇ ಅತಿಹೆಚ್ಚು ಅಂದರೆ 126 ಕೋಟಿ ರೂ. ಮಧ್ಯಂತರ ಬೆಳೆವಿಮೆ ಪರಿಹಾರ ಹಾವೇರಿ ಜಿಲ್ಲೆಗೆ ಜಮೆಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ತ್ರೈಮಾಸಿಕ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಗೆ 26 ಕೋಟಿ ರೂ., ಶಿವಮೊಗ್ಗಕ್ಕೆ 6.52 ಕೋಟಿ ರೂ., ಬಾಗಲಕೋಟೆಗೆ 2.72 ಕೋಟಿ ರೂ. ಮದ್ಯಂತರ ಬೆಳೆವಿಮೆ ಪರಿಹಾರ ದೊರೆತಿದ್ದರೆ, ಹಾವೇರಿ ಜಿಲ್ಲೆಗೆ 126.75 ಕೋಟಿ ರೂ. ದೊರೆತಿದೆ. ಜಿಲ್ಲೆಯ ರೈತರು, ಜಿಲ್ಲಾಡಳಿತದ ಸಹಕಾರದಿಂದ ಇದು ಸಾಧ್ಯವಾಗಿದೆ. ಈಗಾಗಲೇ 40 ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದ್ದು, ಉಳಿದ ಹಣ ಶೀಘ್ರದಲ್ಲೇ ಜಮೆಯಾಗಲಿದೆ. ಇದರಿಂದ ರೈತರಿಗೆ ಸ್ವಲ್ಪ ತೃಪ್ತಿ ದೊರೆತಿದೆ ಎಂದರು.
    ನಬಾರ್ಡ್‌ಗೆ 4,500 ಕೋಟಿ ಕೊಡಿ
    ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯ ಸೇರಿ ಬೇರೆ ರಾಜ್ಯಗಳಿಂದ ಬರ ಪರಿಹಾರದ ಕುರಿತು ಪ್ರಸ್ತಾವನೆ ಹೋಗಿದೆ. ಈ ಬಗ್ಗೆ ಕೇಂದ್ರದವರು ಪರಾಮರ್ಷೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ಕೂಡಲೇ ರಾಜ್ಯದ ಪಾಲು ಸೇರಿಸಿ ಕೊಡಲಾಗುವುದು. ಕೇಂದ್ರ ಸರ್ಕಾರ ನಬಾರ್ಡ್‌ಗೆ ಏಪ್ರಿಲ್‌ನಲ್ಲೇ 4,500 ಕೋಟಿ ರೂ. ಕೊಡಬೇಕಿತ್ತು. ಈವರೆಗೂ ಬಂದಿಲ್ಲ. ಇದರಿಂದ ನಬಾರ್ಡ್‌ನಿಂದ ಡಿಸಿಸಿ ಬ್ಯಾಂಕ್‌ಗೆ ಹಣ ಕೊಟ್ಟಿಲ್ಲ. ಹಾಗಾಗಿ, ರೈತರಿಗೆ ಬೆಳೆಸಾಲ ಸಿಗುತ್ತಿಲ್ಲ. ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲವಲ್ಲ ಎಂದು ಸಚಿವ ಶಿವಾನಂದ ಪಾಟೀಲ ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts