More

    ಮತದಾನ ಮಾಡಿ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಿರಿ; ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ

    ಹಾವೇರಿ: ಭಾರತ ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿದೆ. ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವುದರಿಂದ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಿದೆ. ಇಂತಹ ಪವಿತ್ರ ಕಾರ್ಯದಿಂದ ಯಾರೂ ವಿಮುಖರಾಗದೇ ಭವ್ಯ ಭಾರತದ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹೇಳಿದರು.
    ನಗರದ ಹುಕ್ಕೇರಿಮಠ ಶ್ರೀ ಶಿವಬಸವೇಶ್ವರ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಮತ್ತು ಜಿಲ್ಲಾ ಸ್ವೀಪ್ ಸಮಿತಿ , ಮತದಾರರ ಸಾಕ್ಷರತಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತುವ ಮತ್ತು ಸಮಾಜವಾಗಿ ಒಗ್ಗೂಡುವ ಶಕ್ತಿ ಜನರಿಗಿದೆ. ಅದೇ ರೀತಿ ಸರ್ಕಾರಗಳ ಸಾಧನೆಯಿಂದ ತೃಪ್ತರಾಗದಿದ್ದರೆ ಅದನ್ನು ಬದಲಾಯಿಸುವ ಶಕ್ತಿಯೂ ಸಾಮಾನ್ಯ ಜನರಿಗೆ ಇದೆ. ಆದರೆ, ಮತದಾನ ಮಾಡದೇ ಸರ್ಕಾರವನ್ನಾಗಲೀ ಹಾಗೂ ಸಮಾಜವನ್ನಾಗಲಿ ದೂಷಿಸುವ ಅಧಿಕಾರ ನಮಗಿರುವುದಿಲ್ಲ. ಮುಂದಿನ ಭಾವಿ ಮತದಾರರಾಗುವ ನೀವು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕೆಂದು ಹೇಳಿದರು.
    ಶಿಕ್ಷಣ ಸಂಯೋಜಕ ಎಸ್.ಆರ್.ಮಳವಳ್ಳಿ ಮಾತನಾಡಿ, ಪ್ರೌಢಶಾಲಾ ಹಂತದಿಂದಲೇ ಪ್ರಜಾಪ್ರಭುತ್ವ, ಮತದಾನದ ಮಹತ್ವವನ್ನು ತಿಳಿಸಲು ಹಲವಾರು ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಶಿಕ್ಷಕರು ಪ್ರೇರೆಪಿಸಬೇಕು. ಇದರಿಂದ ಮುಂಬರುವ ಚುನಾವಣೆಗಳಲ್ಲಿ ಹೆಚ್ಚಿನ ಮತದಾನವಾಗಲು ಸಹಾಯಕವಾಗುತ್ತದೆ ಎಂದು ಹೇಳಿದರು.
    ಮುಖ್ಯೋಪಾಧ್ಯಾಯೆ ಚನ್ನಮ್ಮ ಅಂತರವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೋಡಲ್ ಅಧಿಕಾರಿ ಸಿಕಂದರ್ ಮುಲ್ಲಾ ಮಾತನಾಡಿದರು. ಸಮಾರಂಭದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್.ಜೆ.ಮೇಟಿ, ಎಸ್.ಆರ್.ಹಿರೇಮಠ, ಸಿ.ಎಸ್.ಮರಳಿಹಳ್ಳಿ, ಜಿ.ಹನುಮಂತಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಸವಿತಾ ಕಲಕೇರಿ, ಎಸ್.ಸಿ.ಮರಳಿಹಳ್ಳಿ, ಮಾಲತೇಶ ಕರ್ಜಗಿ, ವಿ.ಬಿ.ಕುರ್ತಕೋಟಿ, ಗೋವಿಂದರಾಜ ಕಟಕೋಳ, ಮತ್ತಿತರರು ಉಪಸ್ಥಿತರಿದ್ದರು.
    ಸಹನಾ ಪ್ರಾರ್ಥಿಸಿದರು. ಎಚ್.ಕೆ.ಆಡಿನ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ನಿರೂಪಿಸಿದರು. ಎಸ್.ವಿ. ಕಪ್ಪರದ ವಂದಿಸಿದರು.
    ಸ್ಪರ್ಧಾ ವಿಜೇತರ ಪಟ್ಟಿ
    ತಾಲೂಕಿನ 70ಕ್ಕೂ ಹೆಚ್ಚು ಶಾಲೆಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ರಸಪ್ರಶ್ನೆ ವಿಭಾಗದಲ್ಲಿ ಗುತ್ತಲದ ಸೆಂಟ್ ಫಾಲ್ ಶಾಲೆಯ ಮಕ್ಕಳು ಪ್ರಥಮ, ಭಿತ್ತಿ ಚಿತ್ರದಲ್ಲಿ ಕನವಳ್ಳಿ ಉರ್ದು ಪ್ರೌಢಶಾಲೆಯ ಸಬ್ರಿನ್ ಕಬ್ಬೂರ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಆಲದಕಟ್ಟಿ ಬಸವೇಶ್ವರ ಪ್ರೌಢಶಾಲೆಯ ಐಶ್ವರ್ಯ ಯಡವಣ್ಣವರ, ಇಂಗ್ಲಿಷ್ ಪ್ರಬಂಧದಲ್ಲಿ ಯತ್ತಿನಹಳ್ಳಿಯ ಸಾಯಿಚಂದ್ರ ಗುರುಕುಲದ ಅನಿಕೇತ ಚಿಕ್ಕಮಠ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts