More

    ಸಾರಸ್ವತ ಲೋಕಕ್ಕೆ ಜಿಲ್ಲೆಯ ಕೊಡುಗೆ ಅಪಾರ; ಮಾಜಿ ಶಾಸಕ ನೆಹರು ಓಲೇಕಾರ ಹೇಳಿಕೆ; ಕಸಾಪ ನಾಡಹಬ್ಬ ಸಮಾರೋಪ ಸಮಾರಂಭ

    ಹಾವೇರಿ: ಹಾವೇರಿ ಜಿಲ್ಲೆ ಕನ್ನಡ ಸಾರಸ್ವತ ಲೋಕಕ್ಕೆ ಅದ್ಭುತ ಮತ್ತು ಅನುಪಮವಾದ ಕೊಡುಗೆಯನ್ನು ನೀಡಿದೆ. ಜಿಲ್ಲೆಯ ಸಾಹಿತ್ಯದ ಓದು ಇಡೀ ಕನ್ನಡ ಭಾಷಾ ಸಾಹಿತ್ಯಕ್ಕೆ ನಾಂದಿಯಾಗಿದೆ ಎಂದು ಮಾಜಿ ಶಾಸಕ ನೆಹರು ಓಲೇಕಾರ ಹೇಳಿದರು.
    ನಗರದ ಜಿಲ್ಲಾ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 26ನೇ ನಾಡಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
    ನಾಡಹಬ್ಬವು ನಾಡಿನ ಭವ್ಯ ಸಂಸ್ಕೃತಿ, ಸಂಸ್ಕಾರಗಳ ಅಭಿವ್ಯಕ್ತಿಯ ಆಶಯಗಳ ಹಬ್ಬವಾಗಿದೆ. ಅದಕ್ಕೆ ನಾವಿನ್ಯತೆಯ ಸ್ಪರ್ಶ ನೀಡಿ ಕನ್ನಡ ನಾಡು ನುಡಿಯ ಹಿರಿಮೆಯನ್ನು ಹೆಚ್ಚಿಸಬೇಕಾಗಿದೆ. ಅದರ ಮೂಲ ನೆಲೆಗಟ್ಟನ್ನು ಉಳಿಸಿ ಬೆಳೆಸಬೇಕಾಗಿದೆ. ಹಾವೇರಿಯಲ್ಲಿ ನಡೆದ 86 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುಂದಿನ ಸಮ್ಮೇಳನಗಳಿಗೆ ಮಾದರಿಯಾಗಿದೆ. ಇದಕ್ಕೆ ಜಿಲ್ಲೆಯ ಜನತೆಯ ಸಹಕಾರ ಕಾರಣ ಎಂದು ಹೇಳಿದರು.
    ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಇಂದು ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಅಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಾಗಬೇಕು. ಅಂತಹ ತಂತ್ರಾಂಶಗಳ ಸಂಶೋಧನೆಗೆ ಮುಂದಾಗಬೇಕು. ಕನ್ನಡದ ದೃಶ್ಯ ಮಾಧ್ಯಮಗಳಲ್ಲಿ ಸುಂದರವಾದ ಕನ್ನಡದ ಪದಗಳು ಇದ್ದರೂ, ಬದಲಾಗಿ ಇಂಗ್ಲಿಷ್ ಭಾಷೆ ಬಳಸಲಾಗುತ್ತಿದೆ. ಕನ್ನಡ ನಾಡು ನುಡಿಗಾಗಿ ಹಲವಾರು ಮಹಾಮಹಿಮರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಬೆಳೆಸಿದ್ದಾರೆ. ಅಂತಹ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸಬೇಕು. ಕನ್ನಡ ಭಾಷೆಗೆ ಕನ್ನಡಿಗರೇ ಶತ್ರುಗಳಾಗದೇ ಭಾಷೆ ಬದುಕಾಗಬೇಕು ಎಂದರು.
    ಗೌರಿಮಠದ ಶ್ರೀ ಶಿವಯೋಗಿ ಶಿಚಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಕೆಪಿಟಿಸಿಎಲ್ ಇಂಜನಿಯರ್ ವಿಜಯಕುಮಾರ ಮುದಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಎ.ಕೆ.ಯಮನೂರು, ನಾಗಪ್ಪ ಮಲಗುಂದ, ರಮೇಶ ಕರ್ಜಗಿ, ನಾಗರಾಜ ಮುರಡಿಮನಿ ಅವರನ್ನು ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಆಕ್ಸ್‌ಫರ್ಡ್ ಪಿಯು ಕಾಲೇಜ್ ಮತ್ತು ಅನನ್ಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪ ತಾಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಸಂಜಯ ಸುಣಗಾರ, ಅಮೃತಮ್ಮ ಶೀಲವಂತರ, ಅಕ್ಕಮಹಾದೇವಿ ನೀರಲಗಿ, ರಮೇಶ ಆನವಟ್ಟಿ, ಪ್ರಭು ಹಿಟ್ನಳ್ಳಿ, ಪೃಥ್ವೀರಾಜ ಬೆಟಗೇರಿ, ಎಸ್.ಎನ್. ದೊಡ್ಡಗೌಡರ, ಶಂಕರ ಸುತಾರ, ಎನ್.ಬಿ.ಕಾಳೆ, ರಾಜೇಂದ್ರ ಹೆಗಡೆ, ಶಂಕರ ಹಾರ‌್ನಳ್ಳಿ, ನಾರಾಯಣ ಬಾಂಡಗೆ, ರೇಣುಕಾ ಗುಡಿಮನಿ, ಮಮತಾ ನಂದಿಹಳ್ಳಿ, ದಾಕ್ಷಾಯಣಿ ಗಾಣಗೇರ, ಕೆ.ಆರ್.ಹಿರೇಮಠ, ಸಿ.ಎಸ್.ಮರಳಿಹಳ್ಳಿ, ಸತೀಶ ಕುಲಕರ್ಣಿ, ಸಿ.ಜಿ.ತೋಟಣ್ಣನವರ, ಪರಶುರಾಮ ಕರ್ಜಗಿ, ಜೆ.ಬಿ. ಸಾವಿರಮಠ, ರುದ್ರಪ್ಪ ಜಾಬೀನ, ಈರಣ್ಣ ಬೆಳವಡಿ, ಚಂಪಾ ಹುಣಸಿಕಟ್ಟಿ, ಎಂ.ಎಸ್.ಕೆಂಚನಗೌಡರ, ನಾರಾಯಣ ಬಾರಂಗಿ, ಎಸ್.ಎಲ್. ಕಾಡದೇವರಮಠ,ಅಶೋಕ ಎಣ್ಣಿ, ಮತ್ತಿತರರು ಉಪಸ್ಥಿತರಿದ್ದರು.
    ಸಮತಾ ಕಲಾ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ಶಿವಬಸವ ಮರಳಿಹಳ್ಳಿ ಸ್ವಾಗತಿಸಿದರು. ಭಾರತಿ ಯಾವಗಲ್ಲ ಹಾಗೂ ಶಶಿಕಲಾ ಅಕ್ಕಿ ನಿರೂಪಿಸಿದರು. ಶಂಕರ ಬಡಿಗೇರ ವಂದಿಸಿದರು.
    ಜನತೆಯ ಸಹಕಾರ ಮುಖ್ಯ
    ‘ರಜತ ಮಹೋತ್ಸವದ ಹಾದಿಯಲ್ಲಿ ಹಾವೇರಿ ಜಿಲ್ಲೆ’ ವಿಷಯದ ಕುರಿತು ಡಾ.ಗೀತಾ ಸುತ್ತಕೋಟಿ ಮಾತನಾಡಿದರು. ಹಾವೇರಿಯು ಕಳೆದ 25 ವರ್ಷಗಳಲ್ಲಿ ಗಮನಾರ್ಹ ಅಲ್ಲದಿದ್ದರೂ ಗಮನೀಯ ಬೆಳವಣೆಗೆ ಕಂಡಿದೆ. ಜಿಲ್ಲೆಯ ಅಭಿವೃದ್ಧಿಗೆ ಜನತೆಯ ಸಹಕಾರವೂ ಮುಖ್ಯವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts