More

    ಕರಜಗಿ ಕಾಳಿಕಾದೇವಿ ದೇಗುಲ ಲೋಕಾರ್ಪಣೆ

    ಹಾವೇರಿ: ತಾಲೂಕಿನ ಕರಜಗಿ ಗ್ರಾಮದಲ್ಲಿ ಫೆ.21ರಿಂದ 24ರವರೆಗೆ ದಕ್ಷಿಣಮುಖಿ ಶ್ರೀ ಕಾಳಿಕಾದೇವಿ ದೇವಸ್ಥಾನದ ಲೋಕಾರ್ಪಣೆ, ಶ್ರೀ ಕಾಳಿಕಾದೇವಿ ಮೂರ್ತಿ ಪುನರ್‌ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ಶ್ರೀ ಜಗದ್ಗುರು ಮೌನೇಶ್ವರ ಸ್ವಾಮಿಯವರ ರಥೋತ್ಸವ ಜರುಗಲಿದೆ.
    ಫೆ.21ರಂದು ಕಾಳಿಕಾದೇವಿ ಮೂರ್ತಿಯ ಪುರಪ್ರವೇಶ, ಫೆ.22ರಂದು ದೇವಸ್ಥಾನದ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ, ವಿಶೇಷ ಹೋಮ, ಹವನ, ಪೂರ್ಣಾಹುತಿ, ಮಹಾಮಂಗಳಾರತಿ, ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ. ಫೆ.23ರಂದು ರುದ್ರಾಭಿಷೇಕ, ಬಿಲ್ವಾರ್ಚನೆ, ಉಡಿ ತುಂಬುವುದು, ಸಾಮೂಹಿಕ ಜವಳ, ಉಪನಯನ, ವಿವಾಹ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಇತರ ಕಾರ್ಯಕ್ರಮಗಳು ನಡೆಯಲಿವೆ. ಫೆ.24ರಂದು ಪಾಲಕಿ ಉತ್ಸವ, ಸಂಜೆ ರಥೋತ್ಸವ ಜರುಗಲಿದೆ ಎಂದು ಶ್ರೀ ಮೌನೇಶ್ವರ ಟ್ರಸ್ಟ್ ಕಮಿಟಿ ಪ್ರಕಟಣೆ ತಿಳಿಸಿದೆ.

    ಚಮನಶ್ಯಾವಲಿ ಉರುಸು :
    ಕರಜಗಿ ಗ್ರಾಮದ ಶ್ರೀ ಹಜರತ್ ಚಮನಶ್ಯಾವಲಿಯವರ ಉರುಸು ಮುಬಾರಕ ಕಾರ್ಯಕ್ರಮ ಫೆ.22ರಿಂದ 26ರವರೆಗೆ ನಡೆಯಲಿದೆ. ಫೆ.23ರಂದು ಗಣೇಶ ಇವೆಂಟ್ಸ್‌ನಿಂದ ಮನರಂಜನೆ ಕಾರ್ಯಕ್ರಮ, ಫೆ.24ರಿಂದ 26ರವರೆಗೆ ಜಂಗಿ ಬಯಲು ಕುಸ್ತಿ ಪಂದ್ಯ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts