More

    ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ನನ್ನ ಹೆಮ್ಮೆ; ರೋಚಕ ಘಟನೆ ನೆನೆದ ವೀರಯೋಧ ಮಹಮ್ಮದ್ ಖವಾಸ್

    ಹಾವೇರಿ: ಕಾರ್ಗಿಲ್ ಯುದ್ಧ ಕ್ಷಣ ಕ್ಷಣಕ್ಕೂ ಭಯಾನಕ ಮತ್ತು ರೋಚಕತೆಯಿಂದ ಕೂಡಿತ್ತು. ದೇಶದ ವಿಜಯದ ಸಂಕೇತವಾದ ಕಾರ್ಗಿಲ್ ಯುದ್ಧದಲ್ಲಿ ನಾನೂ ಕೂಡ ಭಾಗವಹಿಸಿದ್ದೆ ಎಂಬುದು ನನಗೆ ಹೆಮ್ಮೆಯ ವಿಷಯ ಎಂದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಹಾವೇರಿ ನಾಗೇಂದ್ರನಮಟ್ಟಿ ನಿವಾಸಿ, ಮಾಜಿ ಯೋಧ ಮಹಮ್ಮದ್ ಜಹಾಂಗೀರ್ ಖವಾಸ್ ಯುದ್ಧದ ರೋಚಕತೆಯನ್ನು ಬಿಚ್ಚಿಟ್ಟರು.
    ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ವಾರ್ತಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕಾರ್ಗಿಲ್ ವಿಜಯೋತ್ಸವ’ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
    ನಾನು 19 ವರ್ಷದವನಿದ್ದಾಗ ಭಾರತೀಯ ಸೈನ್ಯಕ್ಕೆ ಆಯ್ಕೆಯಾದೆ. ಮೊದಲು ಹೈದರಾಬಾದ್ ನಂತರ ಸಿಕ್ಕಿಂನ ಚಿಲಿಗುಡಿಯಲ್ಲಿ ಸೇವೆ ಸಲ್ಲಿಸಿದೆ. ಬಳಿಕ ಡೆಹ್ರಾಡೂನ್, ಪಂಜಾಬ್, ಅಸ್ಸಾಂನಲ್ಲಿ ಕೆಲಸ ಮಾಡಿದೆ. ಅಸ್ಸಾಂನಲ್ಲಿ ಭಜರಂಗ ಆಪರೇಷನ್‌ನಲ್ಲಿ ಪಾಲ್ಗೊಂಡಿದ್ದೆ. ಇದೆಲ್ಲಕ್ಕಿಂತ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದು ಅವಿಸ್ಮರಣೀಯ ಎಂದರು.
    ಪಾಕಿಸ್ತಾನಿ ಸೈನಿಕರು ನಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ನಮ್ಮ ಮೇಲೆಯೇ ದಾಳಿ ನಡೆಸಿದ್ದರು. ಬಂಕರ್‌ಗಳಿಗೂ ನುಗ್ಗಿ ದಾಳಿ ನಡೆಸಿದ್ದರು. ಇದನ್ನೆಲ್ಲ ಹಿಮ್ಮೆಟ್ಟಿಸಿ ನಮ್ಮ ತಂಡ ಕಾರ್ಗಿಲ್‌ನಲ್ಲಿ ವಿಜಯ ಸಾಧಿಸಿತು. ಆದರೆ, ಯುದ್ಧದಲ್ಲಿ ನಮ್ಮ 500ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡ ದುಃಖ ಇನ್ನೂ ಹಾಗೆಯೇ ಇದೆ. ನಾನು ಕೂಡ ಬದುಕಿ ಬಂದದ್ದು ಪವಾಡವೇ ಸರಿ ಎಂದು ಆ ದಿನಗಳನ್ನು ನೆನೆದರು.
    ಸಮಾರಂಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ರಂಗನಾಥ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಪತ್ರಕರ್ತ ಮಾಲತೇಶ ಅಂಗೂರ, ಎಚ್.ಎಂ. ನಾಯಕ, ಖವಾಸ್ ಅವರ ಕುಟುಂಬದವರು, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts