More

    ರಾಜ್ಯೋತ್ಸವ, ಕರ್ನಾಟಕ 50ರ ಸಂಭ್ರಮ; ಮನೆ ಎದುರು ದೀಪ, ರಂಗೋಲಿ ಬಿಡಿಸಲು ಡಿಸಿ ಮನವಿ

    ಹಾವೇರಿ: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಜತೆಗೆ ‘ಕರ್ನಾಟಕ ಸಂಭ್ರಮ-50’ರ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನ.1ರಂದು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಎಲ್ಲ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಬಿಡಿಸಿ. ‘ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯವನ್ನು ಪಡೆಯುವಂತೆ ನಾಗರಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
    ಬೆಳಗ್ಗೆ 9 ಗಂಟೆಗೆ ಎಲ್ಲ ಆಕಾಶವಾಣಿ ಕೇಂದ್ರಗಳಲ್ಲಿ ನಾಡಗೀತೆ ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ಎಲ್ಲರೂ ತಾವು ಇದ್ದಲ್ಲಿಯೇ ಎದ್ದು ನಿಂತು ಗೌರವ ಸಲ್ಲಿಸಬೇಕು. ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಿ. ಸಂಜೆ 7 ಗಂಟೆಗೆ ಮನೆ, ಅಂಗಡಿ-ಮಳಿಗೆಗಳ ಮುಂದೆ ದೀಪ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
    ಜಿಲ್ಲಾಡಳಿತದಿಂದ ಬೆಳಗ್ಗೆ 8 ಗಂಟೆಗೆ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಿಂದ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದೆ. ಜಾನಪದ ಕಲಾವಾಹಿನಿಯೊಂದಿಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಭುವನೇಶ್ವರಿ ರಥದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಲಿವೆ. ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
    ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 11 ಜನರನ್ನು ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಿಂದ ರಾಣೇಬೆನ್ನೂರಿನ ಪ್ರೊ.ಎನ್.ಕೆ.ರಾಮಚಂದ್ರಪ್ಪ, ಸಮಾಜ ಸೇವಾ ಕ್ಷೇತ್ರದಲ್ಲಿ ಬ್ಯಾಡಗಿ ಜೈತುನಬಿ ಸೌದಾಗರ ಹಾಗೂ ಹಾವೇರಿಯ ಅಬ್ದುಲ್‌ಖಾದರ್ ಧಾರವಾಡ, ಜಾನಪದ ಕಲಾ ವಿಭಾಗದಲ್ಲಿ ಹಾವೇರಿ ತಾಲೂಕು ನಾಗನೂರಿನ ಪುರವಂತಿಕೆ ಸಂಗಮೇಶ ಪರಿಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಶಿಗ್ಗಾಂವಿ ತಾಲೂಕು ತಡಸದ ಗ್ರಾಮದ ಗಾಯತ್ರಿ ಪತ್ತಾರ, ವಾದ್ಯ ವಿಭಾಗದಲ್ಲಿ ಾನಗಲ್ಲ ತಾಲೂಕು ಬಾಳಂಬೀಡ ಗ್ರಾಮದ ಬಸವರಾಜ ಕೋಳೂರ, ರಂಗಭೂಮಿಯಿಂದ ರಾಣೆಬೆನ್ನೂರ ತಾಲೂಕು ಬೆನಕೊಂಡದ ರೇವಣಪ್ಪ ಮೆಗಳಮನಿ, ನೃತ್ಯ ವಿಭಾಗದಲ್ಲಿ ಶಿಗ್ಗಾಂವಿಯ ಶರಣು ಬಡ್ಡಿ, ಚಿತ್ರಕಲಾ ವಿಭಾಗದಲ್ಲಿ ಹಾವೇರಿ ತಾಲೂಕು ಗುಡಿಸಲಕೊಪ್ಪದ ಪರಮೇಶ ಬಂಡಿ, ಕರಕುಶಲ ಕ್ಷೇತ್ರದಲ್ಲಿ ಹಾವೇರಿಯ ಅಲ್‌ಹಾಜ್ ಉಸ್ಮಾನ್‌ಸಾಹೇಬ ಪಠವೇಗಾರ ಹಾಗೂ ಸಂಘ-ಸಂಸ್ಥೆ ವಿಭಾಗದಲ್ಲಿ ರಾಣೆಬೆನ್ನೂರಿನ ಅಂಧರ ಜೀವ ಬೆಳಕು ಸಂಸ್ಥೆಗೆ 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts