More

    ಹುಕ್ಕೇರಿ ಮಠದ ಅದ್ದೂರಿ ಜಾತ್ರೆಗೆ ಚಾಲನೆ; ಧ್ವಜಾರೋಹಣ ನೆರವೇರಿಸಿದ ಶ್ರೀ ಶಿವಬಸವ ಸ್ವಾಮೀಜಿ

    ಹಾವೇರಿ: ಲಿಂ.ಶ್ರೀ ಶಿವಬಸವ ಸ್ವಾಮೀಜಿಯವರ 78ನೇ ಹಾಗೂ ಲಿಂ.ಶ್ರೀ ಶಿವಲಿಂಗ ಸ್ವಾಮೀಜಿಯವರ 15ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಗರದ ಪ್ರಸಿದ್ಧ ಹುಕ್ಕೇರಿ ಮಠದಲ್ಲಿ ಹಮ್ಮಿಕೊಂಡಿರುವ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

    ನಂತರ ಮಾತನಾಡಿದ ಶ್ರೀಗಳು, ರಾಷ್ಟ್ರಧ್ವಜ ದೇಶದ ಐಕ್ಯತೆಯ ಸಂಕೇತವಾದರೆ, ಧರ್ಮ ಧ್ವಜ ದೇಶದ ಭವ್ಯ ಪರಂಪರೆಯ ದ್ಯೋತಕವಾಗಿದೆ. ಷಟಸ್ಥಳ ಮಾರ್ಗಗಳು ಸಮಾಜಕ್ಕೆ ಸನ್ಮಾರ್ಗ ತೋರಿಸುವ ಗುರು ಶರಣ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೌಲ್ಯಗಳಾಗಿವೆ ಎಂದು ಹೇಳಿದರು.
    ಶರಣ ಸಂಸ್ಕೃತಿಯಲ್ಲಿ ಷಟಸ್ಥಳಗಳು, ಪಂಚಾಚಾರ ಹಾಗೂ ಅಷ್ಟಾವರಣಗಳು ಅವಿಭಾಜ್ಯ ಅಂಗಗಳಾಗಿವೆ. ಇವುಗಳ ಪಾಲನೆಯು ಆತ್ಮೋನ್ನತೆಗೆ ಮಾರ್ಗದರ್ಶನವಾಗಿದ್ದು, ಸಾಮಾನ್ಯ ಸಾಧಕನಿಂದ ಅಸಾಮಾನ್ಯ ಶಿವಯೋಗಿವರೆಗೆ ದಿವ್ಯ ಬೆಳಕನ್ನು ನೀಡುವ ಚಿಂತಾಮಣಿಯಾಗಿದೆ ಎಂದು ಹೇಳಿದರು.
    12ನೇ ಶತಮಾನದಲ್ಲಿ ಶಿವಶರಣರು ಲಿಂಗಾಂಗ ಸಾಮರಸ್ಯಕ್ಕೆ ಷಟಸ್ಥಳವೇ ಮಾರ್ಗ ಎಂದು ಪ್ರತಿಪಾದಿಸಿದ್ದು, ಸಾಮಾನ್ಯನು ಭಕ್ತನಾಗಿ, ಮಹೇಶನಾಗಿ, ಪ್ರಸಾದಿಯಾಗಿ, ಪ್ರಾಣಲಿಂಗಿಯಾಗಿ, ಶರಣನಾಗಿ ಐಕ್ಯನಾಗುತ್ತಾನೆ. ಇಂಥ ಕ್ರಮ ಸಮುಚ್ಛಯವನ್ನು ಎಲ್ಲ ಬಸವಾದಿ ಶರಣರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು
    ಸಮಾರಂಭದಲ್ಲಿ ಹುಕ್ಕೇರಿ ಮಠದ ಮಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಆನಂದ ಅಟವಾಳಗಿ, ಶಿವಯೋಗಿ ಹೂಲಿಕಂತಿಮಠ, ಮಾಜಿ ಶಾಸಕ ಶಿವರಾಜ ಸಜ್ಜನರ, ಕರಬಸಪ್ಪ ಹಲಗಣ್ಣನವರ, ಪಿ.ಡಿ.ಶಿರೂರ, ಎಸ್.ಎಸ್.ಮುಷ್ಠಿ, ಶಿವಯೋಗಿ ವಾಲಿಶೆಟ್ರ, ವೀರಣ್ಣ ಅಂಗಡಿ, ಎಂ.ಎಸ್.ಕೋರಿಶೆಟ್ಟರ್, ಜಗದೀಶ ತುಪ್ಪದ, ಸಿ.ಜಿ.ತೋಟಣ್ಣನವರ, ಶಿವಣ್ಣ ಶಿರೂರ, ರಾಚಪ್ಪ ಲಂಬಿ, ಎಸ್.ಆರ್.ಮಾಗನೂರ, ಗಣೇಶಪ್ಪ ಹೂಗಾರ, ನಿರಂಜನ ತಾಂಡೂರ, ಎಂ.ಸಿ.ಮಳಿಮಠ, ಡಾ.ಸವಿತಾ ಹಿರೇಮಠ, ಎಸ್.ವಿ.ಹಿರೇಮಠ, ಎಸ್.ಬಿ.ಅಣ್ಣಿಗೇರಿ, ಸಿ.ವೈ.ಅಂತರವಳ್ಳಿ, ರೇಣುಕಾ ಮಡಿವಾಳರ, ಚಂಪಾ ಹುಣಸಿಕಟ್ಟಿ, ಸೇರದಿಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
    ಅಕ್ಕಮಹಾದೇವಿ ಹಾನಗಲ್ಲ ಪ್ರಾರ್ಥಿಸಿದರು. ಬಿ. ಬಸವರಾಜ ಸ್ವಾಗತಿಸಿದರು. ಎಸ್.ಎನ್.ಮಳೆಪ್ಪನವರ ನಿರೂಪಿಸಿದರು.
    ಬೃಹತ್ ಜಾನುವಾರು ಜಾತ್ರೆ ಜ.17ರಂದು
    ಜಾತ್ರಾ ಮಹೋತ್ಸವ ಜ.16ರಿಂದ 20ರವರೆಗೆ ಜರುಗಲಿದೆ. ಜ.17ರಂದು ಬೆಳಗ್ಗೆ 10ಕ್ಕೆ ಶಿವಬಸವ ಜಾನುವಾರು ಜಾತ್ರೆ ಜರುಗಲಿದೆ. ಜ.18ರಂದು ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ, ಜಾನಪದ ವೈಭವ ಜರುಗಲಿದೆ. ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಜ.19ರಂದು ಸಂಜೆ 6.30ಕ್ಕೆ ವೇದಿಕೆ ಸಮಾರಂಭ ಜರುಗಲಿದೆ. ಜ.20ರಂದು ಸಂಜೆ 6.30ಕ್ಕೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಲಿದೆ. ಜ.21ರಂದು ಸಂಜೆ 4 ಗಂಟೆಗೆ ಉಭಯ ಶ್ರೀಗಳ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಲಿದೆ. ಜ.22ರಂದು ಸಂಜೆ 5.30ಕ್ಕೆ ಮಕ್ಕಳ ಜಾತ್ರೆ ಸಾಂಸ್ಕೃತಿಕ ಸಂಜೆ, ರಾತ್ರಿ 8.30ಕ್ಕೆ ಬಸವರಾಜ ಬೆಂಗೇರಿ ರಚನೆಯ ಕತೃ ಶ್ರೀ ಜಗದ್ಗುರು ಶಿರಹಟ್ಟಿ ಶ್ರೀ ಫಕ್ಕೀರೇಶ್ವರ ಮಹಾತ್ಮೆ ನಾಟಕ ಪ್ರದರ್ಶನವಾಗಲಿದೆ ಎಂದು ಶ್ರೀಮಠ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts