More

    ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಿ

    ಹಾವೇರಿ: ನೌಕರಿ ಕಾಯಂಗೊಳಿಸುವುದು, ಪ್ರತಿ ತಿಂಗಳು ಸರಿಯಾಗಿ ಕೆಲಸಕ್ಕೆ ತಕ್ಕ ಸಂಬಳ ನಿಗದಿಪಡಿಸುವುದು, ನೇರ ವೇತನ ವ್ಯವಸ್ಥೆ ಜಾರಿಗೊಳಿಸುವುದು ಸೇರದಿಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾ ಹಾಸ್ಟೆಲ್‌ಗಳ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಬಸವರಾಜ ಕೊಂಗಿಯವರ ಆಗ್ರಹಿಸಿದರು.
    ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆದಾರರ ಪಾತ್ರ ಬಹಳ ಮುಖ್ಯವಾಗಿದೆ. ಹಗಲು- ರಾತ್ರಿ ಎನ್ನದೇ ದುಡಿಯುವ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಹಲವೆಡೆ ವಾರದ ರಜೆಯನ್ನೂ ಕೊಡುತ್ತಿಲ್ಲ. ಪಿಎಫ್, ಇಎಸ್‌ಐನಿಂದ ನೌಕರರು ವಂಚಿತರಾಗಿದ್ದಾರೆ. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಸಂಬಳ ನೀಡಬೇಕೆಂಬ ನಿಯಮವಿದ್ದರೂ ಸರಿಯಾಗಿ ವೇತನ ಪಾವತಿಸುತ್ತಿಲ್ಲ. ಇದರಿಂದ ಹಾಸ್ಟಲ್ ನೌಕರರು ಜೀವನ ಸಾಗಿಸುವುದೇ ದುಸ್ತರವಾಗಿ ಎಂದರು.
    ಈ ಕೂಡಲೇ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಯವರು ನೌಕರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಾರ್ಮಿಕ ಆಯುಕ್ತರ ಆದೇಶದಂತೆ ಪ್ರತಿ ನೌಕರನಿಗೆ ವಿಳಂಭ ವೇತನ 1,050 ರೂ. ಬಿಡುಗಡೆ ಮಾಡಿಸಬೇಕು. ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ಸ್ವಚ್ಛತಾ ಸಿಬ್ಬಂದಿ ಹಾಗೂ ಜವಾನರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಬೇಕು. ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು. ಪಿಎಫ್, ಇಎಸ್‌ಐ ಒದಗಿಸಬೇಕು. ನೇರ ವೇತನ ವ್ಯವಸ್ಥೆ ಮಾಡಬೇಕು. ಕಾಯಂ ನೌಕರರಿಂದಾಗುವ ದಬ್ಬಾಳಿಕೆ ತಡೆಗಟ್ಟಬೇಕು. ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ನೇಮಿಸಬೇಕು ಎಂದರು.
    ಸಂಘದ ಸಮಾಜ ಕಲ್ಯಾಣ ಇಲಾಖೆ ಪ್ರತಿನಿಧಿ ಸುಭಾಸ ಕ್ಯಾಲಕೊಂಡ, ಬಿಸಿಎಂ ಹಾಸ್ಟೆಲ್ ಪ್ರತಿನಿಧಿ ಶಿವಯ್ಯ ಗಡದೇವರಮಠ, ಗೀತಾ ಕಂಬಾಳಿ, ರೇಣುಕಾ ಕೊರವರ, ಇತರರಿದ್ದರು.
    11ರಂದು ಪ್ರತಿಭಟನೆ :
    ಈ ಎಲ್ಲ ಬೇಡಿಕೆಗಳನ್ನು ಡಿ.10ರೊಳಗಾಗಿ ಈಡೇರಿಸದಿದ್ದಲ್ಲಿ ಡಿ.11ರಂದು ಎಲ್ಲ ಹಾಸ್ಟೆಲ್‌ಗಳನ್ನು ಬಂದ್ ಮಾಡಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೊಂಗಿಯವರ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts