More

    ಹಂಸಭಾವಿ ಕೊಬ್ಬರಿ ಹೋರಿ ಹಬ್ಬ ಆಯೋಜಕರ ಬಂಧನ

    ಹಂಸಬಾವಿ: ಇಲ್ಲಗೆ ಸಮೀಪದ ಕೊಳ್ಳೇರ ಕಟ್ಟೆಕೆರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸ್ಪರ್ಧೆ ಆಯೋಜಿಸಿದ್ದ ಪ್ರಮುಖರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
    ಸ್ಪರ್ಧೆ ಆಯೋಜಕರಾದ ಗ್ರಾಮದ ಹನುಮಂತ ಈಳಗೇರ, ಸೋಮಶೇಖರ ಹುಚಗೊಂಡರ, ಶ್ರೀಕಾಂತ ನಾಗಪ್ಪನವರ, ಆಸೀಫ್ ಅಲಿಯಾಸ್ ಶಫಿವುಲ್ಲಾ ಮುಲ್ಲಾ ಬಂಧಿತರು.
    ಆರೋಪಿತರು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯದೇ ಮಾ.4ರಂದು ರಾಜ್ಯಮಟ್ಟದ ಹೋರಿ ಹಬ್ಬ ಆಯೋಜನೆ ಮಾಡಿದ್ದರು. ಈ ಹಬ್ಬದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಹಾಗಾಗಿ, ಈ ಮೃತರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಆರೋಪಿತರನ್ನು ಬಂಧಿಸಲಾಗಿದೆ. ಇತರ ಆರೋಪಿಗಳ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಹಂಸಭಾವಿ ಠಾಣೆ ಪೊಲೀಸರು ತಿಳಿಸಿದ್ದಾರೆ.
    ಸಾರ್ವಜನಿಕರಲ್ಲಿ ಎಸ್‌ಪಿ ಮನವಿ :
    ಯಾವುದೇ ಮುಂಜಾಗ್ರತೆ ಕೈಗೊಳ್ಳದೇ ಹಾಗೂ ಯಾವುದೇ ಇಲಾಖೆಯ ಅನುಮತಿ ಪಡೆಯದೇ ನಿಯಮ ಬಾಹಿರವಾಗಿ ಹೋರಿ ಹಬ್ಬ ಆಚರಿಸುವ ಕಾರ್ಯಕ್ರಮಗಳಲ್ಲಿ ಸಾವು, ನೋವು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts