More

    ಅತಿಥಿ ಉಪನ್ಯಾಸಕರ ಖಾಯಂಮಾತಿಗೆ ಒತ್ತಾಯ; ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತರಗತಿ ಬಹಿಷ್ಕರಿಸಿ ಪ್ರತಿಭಟನೆ

    ಹಾವೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ರಾಜ್ಯ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲೆಯ ಗಾಂಧಿಪುರ ಸರ್ಕಾರಿ ಪದವಿ ಕಾಲೇಜು ಸೇರಿದಂತೆ ವಿವಿಧ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಗುರುವಾರ ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟಿಸಿದರು.
    ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಕನಿಷ್ಠ ಗೌರವಧನ ವೇತನ ಪಡೆದು ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ದುರಂತದ ಸಂಗತಿ ಎಂದರೆ ಬಾಳಿನ ಮುಸ್ಸಂಜೆಯಲ್ಲಿರುವ ವಯೋವೃದ್ಧ ತಂದೆ-ತಾಯಿಗಳು ಮತ್ತು ಹೆಂಡತಿ ಮಕ್ಕಳು ನಮ್ಮನ್ನ ಅವಲಂಭಿಸಿರುವ ಕುಟುಂಬಕ್ಕೆ ಸಾಮಾಜಿಕ ಸ್ವಾರ್ಥ್ಯದ ಬದುಕು ರೂಪಿಸಿ ಕೊಡುವಲ್ಲಿ ಸೋತಿದ್ದೇವೆ.
    ಆರ್ಥಿಕ ಸದೃಢತೆ ಇಲ್ಲದೇ ವೈದ್ಯಕೀಯ ಚಿಕಿತ್ಸೆ ಸಿಗದೇ, ಕರೊನಾ ಅವಧಿಯಲ್ಲಿ ಮತ್ತು ವಿವಿಧ ಕಾರಣಗಳಿಂದ 150ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಅಸುನಿಗಿದ್ದಾರೆ. ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನ.23ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಖಾಯಂಮಾತಿಗೆ ಆದೇಶ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ರಾಜ್ಯ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಡಾ.ಪ್ರಶಾಂತ ಬೆನ್ನೂರ, ಹಿರಿಯ ಉಪನ್ಯಾಸಕರಾದ ಸಿ.ಕೆ.ಪಾಟೀಲ, ದೊಡ್ಡ ರಾಮಣ್ಣ, ರಮೇಶ ನಾಯಕ, ವಸಂತಗೌಡ್ರ, ಆಶಾ ಗುಡಿ, ವಿಮಲಾ ಶೆಟ್ಟರ, ವಿರೇಶ ಕಾರ್ಗಿ, ಉಮಾ ತಿಪ್ಪನಗೌಡ್ರ, ಪ್ರಕಾಶ ಬಾರ್ಕಿ, ಮೃತ್ಯುಂಜಯ ಬಂಗಾರಿ, ದಾನಪ್ಪ ಗೌಡ್ರ, ಶೋಭಾ ತಪಸಿ, ಮಹೇಶ ಓಲೇಕಾರ, ಪುಷ್ಪಾ ಚಿಮ್ಮಲಗಿ, ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts