More

    ಜನರನ್ನು ಶ್ರೀಮಂತರನ್ನಾಗಿಸಲು ಸರ್ಕಾರದಿಂದ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

    ಹಾವೇರಿ: ರಾಜ್ಯ ಸರ್ಕಾರ ಶ್ರೀಮಂತವಾಗಿರಬೇಕಾ ರಾಜ್ಯದ ಜನ ಶ್ರೀಮಂತವಾಗಬೇಕಾ. ಎಂಬುದು ನಮ್ಮ ಮುಂದಿದೆ. ರಾಜ್ಯ ಸರ್ಕಾರ ಶ್ರೀಮಂತವಾಗಿದ್ದು ಜನ ಬಡವರಾಗಿದ್ದರೆ ಅದು ಕೆಟ್ಟ ಆಡಳಿತ. ನಾನು ಜನರ ರಾಜಕಾರಣದಲ್ಲಿ ನಂಬಿಕೆ ಇಟ್ಟವನು. ಜನರನ್ನು ಶ್ರೀಮಂತವಾಗಿರಿಸಲು ಸರ್ಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

    ಜಿಲ್ಲಾಡಳಿತದಿಂದ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಧಾನಿ‌ ನರೇಂದ್ರ ಮೋದಿ ಗ್ಯಾಸ್‌ ಸಿಲಿಂಡರ್, ಶೌಚಗೃಹ, ಅಕ್ಕಿ ಎಲ್ಲವನ್ನೂ ಕೊಟ್ಟಿದ್ದಾರೆ. ರೈತರಿಗೆ ರೈತ ಸಮ್ಮಾನ್ ಯೋಜನೆ ಯಡಿ ೬೭ ಲಕ್ಷ ರೈತ ಕುಟುಂಬಕ್ಕೆ ತಲಾ ೧೦ ಸಾವಿರ ರೂ. ಸಹಾಯಧನ ನೀಡಲಾಗಿದೆ. 

    ಕಳೆದ ವರ್ಷ ಡೀಸೆಲ್ ಗೆ ೪೦೦ ಕೋಟಿ ರೂ. ಕೊಡಲಾಗಿದೆ. ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಸ್ತ್ರೀಶಕ್ತಿ ಸಂಘಗಳಿಗೆ ಸಹಾಯಧನ ನೀಡಲಾಗಿದೆ.

    ಈ ವರ್ಷ ರೈತಾಪಿ ಹೆಣ್ಣು ಮಕ್ಕಳಿಗೆ ಪ್ರತಿ ವರ್ಷ ೧ ಸಾವಿರ ರೂ. ಧನಸಹಾಯ. ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ಬಾಬು ಜಗಜೀವನ ರಾಮ್ ನಿಗಮದಿಂದ ದ್ವಿಚಕ್ರ ವಿತರಣೆ ಯೋಜನೆ, ಎಸ್ ಸಿ ಎಸ್ಟಿ ಯವರಿಗೆ ಮನೆ ನಿರ್ಮಿಸಲು ೨ ಲಕ್ಷ ರೂ. ಸಹಾಯಧನ, ೩೩ ಸಾವಿರ ಎಸ್ ಸಿ ಎಸ್ಟಿ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಮಾಡಿಕೊಟ್ಟಿದ್ದೇವೆ. ಇದು ನಮ್ಮ ಬದ್ಧತೆ. 

    ಕಾನೂನು ಬದ್ಧವಾಗಿ ಎಸ್ ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಕೆಲವರು ಕಾನೂನು ಬದ್ಧ ಆಗಿಲ್ಲ ಎಂದರು. ಮಾಡಬೇಡಿ ಜೇನುಗೂಡು ಅದು ಎಂದರು. ಆ ಸಮುದಾಯಕ್ಕೆ ಸೌಲಭ್ಯ ಕೊಡಲು ಜೇನುಗೂಡಿಗೆ ಮಾತ್ರವಲ್ಲ, ಹುತ್ತಕ್ಕೂ ಕೈಹಾಕಲು ಸಿದ್ಧ ಎಂದರು. 

    ಲಂಬಾಣಿ ಜನಾಂಗದವರಿಗೆ ಪಟ್ಟಾ ಕೊಡುವ ಕೆಲಸ ಮಾಡಿದ್ದು ನಿಮ್ಮ ಬಸವರಾಜ ಬೊಮ್ಮಾಯಿ. ದುಡಿಯುವ ವರ್ಗಕ್ಕೆ ಬೆಂಬಲ ಕೊಡುವ ಯೋಜನೆಗಳನ್ನು ಮಾಡಿದ್ದೇವೆ. ಕೇವಲ ಪೇಪರ್ ಗೆ ಸೀಮಿತವಾಗಿಲ್ಲ. 

    ಕಿಡ್ನಿ ಡಯಾಲಿಸಿಸ್ ಕೇವಲ ೩೦ ಸಾವಿರ ಜನರಿಗಡ ಇತ್ತು. ಈಗ ಒಂದು ಲಕ್ಷಕ್ಕೆ ಏರಿಸಲಾಗಿದೆ. 

    ಈ ವರ್ಷ ೫೦೦ ಕೋಟಿ ರೂ. ವೆಚ್ಚದಲ್ಲಿ ಹುಟ್ಟು ಕಿವುಡರಾದ ಬಡ ಮಕ್ಕಳಿಗೆ ಮಷಿನ್ ವಿತರಣೆ, ೬೦ ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕನ್ನಡಕ ವಿತರಿಸಿದ್ದೇವೆ. 

    ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಕೊಡುವ ಕೆಲಸ ಮಾಡುತ್ತಿದ್ದೇವೆ. ಕೈಗಾರಿಕೆ ಸ್ಥಾಪನೆಗೆ ಪ್ರೋತ್ಸಾಹ. ಎಸ್ ಸಿ ಎಸ್ಟಿ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

    ನನ್ನನ್ನು ಮುಖ್ಯಮಂತ್ರಿ ಮಾಡಲು ಮತ ಕೊಡಿ ಎನ್ನುತ್ತಾರೆ ಕೆಲವರು. ವ್ಯಕ್ತಿ ಮುಖ್ಯ ಅಲ್ಲ. ವ್ಯವಸ್ಥೆ ಆಧಾರಿತ ಆಡಳಿತ ಬರಬೇಕು. 

    ನಿಮಗೆ ಬಹಳ ದೊಡ್ಡ ಹೃದಯ ಇದೆ. ಎಲ್ಲರಿಗೂ ಅವಕಾಶ ಕೊಡುತ್ತೀರಿ. ನಾವು ಮಾಡಿರುವ ಕೆಲಸದ ರಿಪೋರ್ಟ್ ಕಾಡ್೯ ನೋಡಿ ಮತ್ತೊಮ್ಮ ಅವಕಾಶ ಕೊಡಿ ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts