More

    ನಿವೃತ್ತ ಜೀವನ ಸುಖಮಯವಾಗಿ ಕಳೆಯಿರಿ

    ಬಾದಾಮಿ: ನಿವೃತ್ತ ನೌಕರರು ಸುಖಮಯವಾಗಿ ಜೀವನ ಕಳೆಯಬೇಕು ಎಂದು ಖ್ಯಾತ ವೈದ್ಯ, ಇತಿಹಾಸ ತಜ್ಞ ಡಾ. ಎಚ್.ಜಿ. ದಡ್ಡಿ ಸಲಹೆ ನೀಡಿದರು.
    ನಗರದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಬಾದಾಮಿ ತಾಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ, ಸನ್ಮಾನ, ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

    ನಿವೃತ್ತರಾದ ನಂತರ ಜೀವನ ಕಳೆಯುವುದು ಕಷ್ಟವಾಗುತ್ತದೆ. ನಿವೃತ್ತಿ ಬಳಿಕ ಯಾವುದಾದರೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಕಾರ್ಯ ಪ್ರವೃತ್ತರಾಗಬೇಕು. ಈ ವೇಳೆ ಹಲವಾರು ಕಾಯಿಲೆಗಳು ಕಾಡುತ್ತವೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಯೋಗ, ಪ್ರಾಣಾಯಾಮ, ಧ್ಯಾನ ಮಾಡಬೇಕು. ಸಾಮಾಜಿಕ ಬದ್ಧತೆ, ಪರಿವರ್ತನೆ, ದಿನನಿತ್ಯದ ಜೀವನದೊಂದಿಗೆ ಹಿರಿಯ ನಾಗರಿಕರು ಗ್ರಾಮೀಣರಿಗೆ ಪಿಂಚಣಿ, ವಿಮೆ ಹೀಗೆ ಅನೇಕ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನ ಮಾಡಬೇಕು ಎಂದರು.

    ಕೆರೂರ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಡಿ.ಎಸ್. ಸೂಳಿಕೇರಿ ಮಾತನಾಡಿ, ನಿವೃತ್ತ ನೌಕರರಿಗೆ ತಮ್ಮ ಬ್ಯಾಂಕಿನಿಂದ ಶಕ್ತಿ ಮೀರಿ ಸಹಾಯ ಮಾಡುವ ಭರವಸೆ ನೀಡಿದರು.

    ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಡಾ.ಡಿ.ಎಂ. ಪೈಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಡಾ.ಎಸ್.ಎಸ್. ಸಾಳಗುಂದಿ, ವಿ.ಎಸ್. ಮುರನಾಳ ಮಾತನಾಡಿದರು. ತಾಲೂಕು ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯರಾವ್ ಕುಲಕರ್ಣಿ, ನಿವೃತ್ತ ನೌಕರರಾದ ರಾಮಚಂದ್ರಪ್ಪ, ಮಾಡವಾಳ, ವಿ.ಜಿ. ಗೋವಿಂದಪ್ಪನ್ನವರ, ಡಿ.ಪಿ. ಅಮಲಝರಿ ಇತರರಿದ್ದರು.

    ವಿವಿಧ ಸರ್ಕಾರಿ ಇಲಾಖೆಯಲ್ಲಿ ಹೆಚ್ಚಿನ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಎಸ್.ಎ. ಭರಮಗೌಡರ ಸ್ವಾಗತಿಸಿದರು. ಎಂ.ಐ. ಬಾರಾವಲಿ ನಿರೂಪಿಸಿ, ವಂದಿಸಿದರು.

    ನಿವೃತ್ತ ಸರ್ಕಾರಿ ನೌಕರರು ಈ ಭಾಗದ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕು. ಹೃದಯ ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ. ಬಾದಾಮಿ ಅಗಸ್ತ್ಯ ತೀರ್ಥ ದಂಡೆಯ 96 ಮನೆಗಳ ಸ್ಥಳಾಂತರ, ಐಹೊಳೆ ಗ್ರಾಮದ ಸ್ಥಳಾಂತರ ಇವೆಲ್ಲ ನನೆಗುದಿಗೆ ಬಿದ್ದಿವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಭಾಗದ ಜನಪ್ರತಿನಿಧಿಗಳ, ಜನರ ಜಾಗೃತಿ ಅವಶ್ಯಕವಾಗಿದೆ. 
    ಡಾ. ಎಚ್.ಜಿ. ದಡ್ಡಿ, ಖ್ಯಾತ ವೈದ್ಯರು, ಇತಿಹಾಸ ತಜ್ಞ ಜಮಖಂಡಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts