More

    ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಸಲ್ಲ – ಹಟ್ಟಿಚಿನ್ನದಗಣಿಯಲ್ಲಿ ಸಿಐಟಿಯು ಪ್ರತಿಭಟನೆ

    ಹಟ್ಟಿಚಿನ್ನದಗಣಿ: ಕಾರ್ಮಿಕರ ದಿನದ ಕೆಲಸದ ಅವಧಿ ಹೆಚ್ಚಳ, ರಾತ್ರಿ ಪಾಳಯದಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಹಟ್ಟಿ ಕ್ಯಾಂಪ್‌ನಿಂದ ಹಟ್ಟಿ ಚಿನ್ನದ ಗಣಿಯ ಮುಖ್ಯದ್ವಾರದವರೆಗೆ ಸಿಐಟಿಯು ಶನಿವಾರ ಮೆರವಣಿಗೆ ನಡೆಸಿತು.

    ಸಿಐಟಿಯು ಜಿಲ್ಲಾ ಸಹ ಕಾರ್ಯದರ್ಶಿ ಮಹಮ್ಮದ್ ಹನೀಫ್, ಗೆಜ್ಜಲಗಟ್ಟಾ ಗ್ರಾಪಂ ಸದಸ್ಯ ರಮೇಶ ವೀರಾಪುರ ಗಣಿ ಕಾರ್ಮಿಕ ಬಾಬು ಸಾಗರ್ ಮಾತನಾಡಿ, ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023 ಅನ್ನು ವಾಪಸ್ ಪಡೆಯಬೇಕು. ವಾರಕ್ಕೆ 5 ದಿನ ಕೆಲಸ, ದಿನಕ್ಕೆ 7 ಗಂಟೆ, ವಾರಕ್ಕೆ 35 ಗಂಟೆ ಕೆಲಸದ ಅವಧಿ ನಿಗದಿಪಡಿಸಿ ಕಾಯ್ದೆಗೆ ತಿದ್ದುಪಡಿ ತರಬೇಕು. ರಾತ್ರಿ ಪಾಳಯದಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ಕಲ್ಪಿಸಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಬೇಡಿಕೆ ಪತ್ರವನ್ನು ಗಣಿ ಕಲ್ಯಾಣ ಅಧಿಕಾರಿ ಜಗನ್ ಮೋಹನ್‌ಗೆ ನೀಡಲಾಯಿತು. ಹಟ್ಟಿ ಘಟಕದ ಅಧ್ಯಕ್ಷ ಹಸನತ್ ಅಲಿ ಜಮೆದಾರ್, ಖಜಾಂಚಿ ಫಕ್ರುದ್ದೀನ್, ಪ್ರಮುಖರಾದ ವೆಂಕಟೇಶ ಮೇದಿನಾಪೂರು, ಅಲ್ಲಾಭಕ್ಷಿ, ನಿಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts