More

    ಕಳೆಗಟ್ಟಿದ ಸುಂಡಿ ದುರುಗಮ್ಮ ದೇವಿ ಉತ್ಸವ

    ಹಟ್ಟಿಚಿನ್ನದಗಣಿ: ಕರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಟ್ಟಿ ಪಟ್ಟಣದ ಸುಂಡಿ ದುರುಗಮ್ಮ ದೇವಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಕ್ತಿ ದೇವತೆಯನ್ನು ದುರುಗಮ್ಮ, ದ್ಯಾಮವ್ವ, ಯಲ್ಲಮ್ಮ, ಹುಲಿಗೆಮ್ಮ, ಚೌಡೇಶ್ವರಿ ಎಂಬ ನಾನಾ ಹೆಸರಿನಲ್ಲಿ ಪೂಜಿಸುವ ಪದ್ಧತಿ ಚಾಲ್ತಿಯಲ್ಲುಂಟು. ಈ ನಿಟ್ಟಿನಲ್ಲಿ ವಿವಿಧೆಡೆ ಸೀಮೆ ದೇವತೆಯ ಮೆರವಣಿಗೆ ಉತ್ಸವ ವಿಜೃಂಭಣೆಯಿಂದ ನೆರವೇರಿತು.

    ದೇವಿ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿಯನ್ನು ಅಲಂಕರಿಸಿ, ಪಟ್ಟಣದ ಸಂತೆ ಬಜಾರ್ ಪಕ್ಕದ ಹುಚ್ಚಬುಡ್ಡೇಶ್ವರ ವೃತ್ತದಿಂದ ಡಾ. ಬಿ.ಆರ್.ಅಂಬೇಡ್ಕರ್ ಕಾಲನಿಯ ಶಾಂತಿನಗರದವರೆಗೆ ಪ್ರಮುಖ ಬೀದಿಗಳಲ್ಲಿ ಕುಂಭ ಕಳಸ ಸಹಿತ ಬಾಜಾ-ಭಜಂತ್ರಿ, ಡೊಳ್ಳಿನ ಮೆರವಣಿಗೆ ಹಾಗೂ ಮಹಿಳೆಯರು ತಂಬಿಟ್ಟು ಆರತಿ ಸೇವೆ ಹಾಗೂ ಭಕ್ತರು ಹರಕೆ ಸೇವೆ ಸಲ್ಲಿಸಿದರು.

    ದೇವದುರ್ಗ ತಾಲೂಕಿನ ಊಟಿ ಚಿನ್ನದಗಣಿಯ ದುರ್ಗಾದೇವಿ ಜಾತ್ರೆ ನಿಮಿತ್ತ ಹಟ್ಟಿ ಪಟ್ಟಣದಲ್ಲಿ ದೇವಿ ಪೂಜೆಯನ್ನು ವೈಯಕ್ತಿಕವಾಗಿ ನೆರವೇರಿಸಲಾಯಿತು. ಸಮೀಪದ ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ನಿಲೋಗಲ್ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಸಂಪನ್ನಗೊಂಡಿತು. ಉತ್ಸವದಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿತ್ತು. ಅಹೀತಕರ ಘಟನೆ ನಡೆಯದಂತೆ ಹಟ್ಟಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts