More

    ಪಾರುಗಾಣಿಕಾ ಠಾಣೆ ಆರಂಭಕ್ಕೆ ಕ್ರಮ; ಹಟ್ಟಿಚಿನ್ನದಗಣಿ ಕಂಪನಿ ಇಡಿ ಪ್ರಕಾಶ್ ಹೇಳಿಕೆ

    ಹಟ್ಟಿಚಿನ್ನದಗಣಿ: ಸ್ಥಳೀಯ ಗಣಿ ವೃತ್ತಿ ತರಬೇತಿ ಕೇಂದ್ರದಲ್ಲಿರುವ ಪಾರುಗಾಣಿಕಾ ತಂಡದ ಕೊಠಡಿಯನ್ನು ಪಾರುಗಾಣಿಕಾ (ರೆಸ್ಕ್ಯೂ) ಠಾಣೆಯನ್ನಾಗಿ ಮೇಲ್ದರ್ಜೇಗೇರಿಸಲು ಕ್ರಮ ವಹಿಸುವದಾಗಿ ಹಟ್ಟಿಚಿನ್ನದಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಹೇಳಿದರು.

    ಹಟ್ಟಿಚಿನ್ನದಗಣಿ ಕಂಪನಿ ಕ್ರೀಡಾ ಸಂಸ್ಥೆ ಆವರಣದಲ್ಲಿ ಗಣಿ ಸುರಕ್ಷಾ ಸಂಸ್ಥೆ ಕರ್ನಾಟಕ ವಲಯ-2 ಸಹಯೋಗದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಗಣಿ ಸುರಕ್ಷಾ ಸಪ್ತಾಹ ಸಮಾರಂಭದಲ್ಲಿ ಮಾತನಾಡಿದರು. ಶೂನ್ಯ ಅಪಘಾತ ಸಾಧಿಸುವ ಉದ್ದೇಶದಿಂದ ಸುರಕ್ಷಾ ಸಪ್ತಾಹವನ್ನು ಆಯೋಜಿಸಲಾಗುತ್ತಿದೆ. 2022 ನೇ ಸಾಲಿನಲ್ಲಿ ಗಣಿ ವಿಭಾಗದಲ್ಲದೆ ತಾಂತ್ರಿಕ, ಲೋಹ ವಿಭಾಗದಲ್ಲಿ 20 ಸಣ್ಣ ಪ್ರಮಾಣದ ಅವಘಡಗಳು ನಡೆದಿವೆ ಎಂದರು.

    ಭೂ ಕೆಳಮೈ ವಿಭಾಗದಲ್ಲಿ ಡೀಸೆಲ್ ಚಾಲಿತ ಯಂತ್ರಗಳ ಹೊಗೆ ಮೇಲೆ ತರಲು ಔಟ್‌ಪುಟ್ ಫ್ಯಾನ್‌ಗಳ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, 1600 ಅಡಿವರೆಗೆ ಅಳವಡಿಕೆ ಮುಗಿದಿದೆ. ಇನ್ನೂ ಒಂದು ಸಾವಿರ ಅಡಿ ಅಳವಡಿಸಿದರೆ ಕಾರ್ಮಿಕರಿಗೆ ಗಾಳಿಯ ತೊಂದರೆಯಾಗುವದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts