More

    ಹಟ್ಟಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

    ಅಳವಂಡಿ: ಸಮೀಪದ ಹಟ್ಟಿ ಗ್ರಾಪಂಗೆ ಎರಡನೇ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪರವೀನಬಾಬು ಆಲೂರ ಹಾಗೂ ಉಪಾಧ್ಯಕ್ಷರಾಗಿ ನಿಂಗನಗೌಡ ಪಾಟೀಲ ಆಯ್ಕೆಯಾಗಿದ್ದಾರೆ.


    ಅಧ್ಯಕ್ಷ ಸ್ಥಾನಕ್ಕೆ ಪರವೀನಬಾನು ಹಾಗೂ ಪುಷ್ಪಾ ಸಂಗರಡ್ಡಿ ನಾಮಪತ್ರ ಸಲ್ಲಿಸಿದ್ದರು. ಪರವೀನಬಾನು 13 ಮತ ಹಾಗೂ ಪುಷ್ಪಾ 6 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ನಿಂಗನಗೌಡ ಪಾಟೀಲ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎಡಿಎ ಜೀವನಸಾಬ ಕುಷ್ಟಗಿ ಕಾರ್ಯ ನಿರ್ವಹಿಸಿದರು, ಪಿಡಿಒ ರತ್ನಮ್ಮ, ಕಾರ್ಯದರ್ಶಿ ಮಂಜುನಾಥಯ್ಯ ಇತರರಿದ್ದರು.

    ಇದನ್ನೂ ಓದಿ: ಪುರಪಿತೃಗಳಿಗೆ ದೊರಕದ ಅಧಿಕಾರ
    ಪೋಟೊ 19ಅಳವಂಡಿ01
    ಚುನಾವಣಾಧಿಕಾರಿಯಾಗಿ ಎಡಿಎ ಜೀವನಸಾಬ ಕುಷ್ಟಗಿ, ಪಿಡಿಒ ರತ್ನಮ್ಮ, ಕಾರ್ಯದರ್ಶಿ ಮಂಜುನಾಥಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts