More

    ಹಾಸನ ಒಕ್ಕೂಟ ಶೃಂಗೇರಿ ಕ್ಷೇತ್ರದ ಹಾಲನ್ನೂ ಖರೀದಿಸಲಿ

    ಎನ್.ಆರ್.ಪುರ: ಹಾಸನ ಹಾಲು ಒಕ್ಕೂಟದವರು ಶೃಂಗೇರಿ ಕ್ಷೇತ್ರದ 3 ತಾಲೂಕುಗಳಲ್ಲೂ ಹಾಲು ಮಾರಾಟ ಮಾಡುತ್ತಾರೆ. ಹಾಗೆಯೇ ಇಲ್ಲಿನ ಹಾಲನ್ನು ಸಹ ಅವರು ಖರೀದಿ ಮಾಡಬೇಕು ಎಂದು ಬಿ.ಎಚ್.ಕೈಮರ ಹಾಲು ಒಕ್ಕೂಟದ ನೂತನ ಅಧ್ಯಕ್ಷ ಬಿ.ಟಿ.ನಾಗರಾಜ್ ಆಗ್ರಹಿಸಿದರು.

    ಬಿ.ಎಚ್.ಕೈಮರದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ ಸಂಘದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ಆಯ್ಕೆಯಾದ ನಂತರ ಮಾತನಾಡಿದರು.
    ಕಳೆದ 8-10 ವರ್ಷಗಳಿಂದ ಶೃಂಗೇರಿ ಕ್ಷೇತ್ರಕ್ಕೆ ಹಾಸನ ಹಾಲು ಒಕ್ಕೂಟದವರು ಹಾಲು ಸರಬರಾಜು ಮಾಡುತ್ತಿದ್ದಾರೆ. ಆದರೆ ಇಲ್ಲಿಯ ಹಾಲನ್ನು ಮಾತ್ರ ಖರೀದಿ ಮಾಡುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಗುಣಮಟ್ಟದ ಹಿಂಡಿ ನೀಡಬೇಕು ಎಂಬ ಬೇಡಿಕೆಯೂ ಈಡೇರಿಲ್ಲ. ಒಕ್ಕೂಟದಿಂದ ಯಾವ ಸೌಲಭ್ಯವನ್ನೂ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸಮಸ್ಯೆ ಬಗೆಹರಿಸಲು ಮುಂದಿನ ದಿನಗಳಲ್ಲಿ ತಾಲೂಕಿನ 8 ಹಾಲು ಉತ್ಪಾದಕರ ಸಹಕಾರ ಸಂಘಗಳ ಸಭೆಯನ್ನು ಕರೆಯಲು ತೀರ್ಮಾನಿಸಿದ್ದೇವೆ. ಬಿ.ಎಚ್.ಕೈಮರ ಹಾಲು ಉತ್ಪಾದಕರ ಸಂಘದಿಂದ ಪ್ರತಿದಿನ 450ರಿಂದ 500 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮಳೆಗಾಲದಲ್ಲಿ ಇನ್ನೂ ಹೆಚ್ಚು ಸಂಗ್ರಹವಾಗುತ್ತಿದೆ. 8 ಸಂಘಗಳ ಪೈಕಿ ಬಿ.ಎಚ್.ಕೈಮರದ ಸಂಘದ ಪಾಲು ಹೆಚ್ಚು ಎಂದರು.
    ಪದಾಧಿಕಾರಿಗಳು: ಬಿ.ಎಚ್.ಕೈಮರ ಹಾಲು ಉತ್ಪಾದಕರ ಸಂಘಕ್ಕೆ ಕೆ.ಜೆ.ಆಂತೋನಿ (ಉಪಾಧ್ಯಕ್ಷ), ಕೆ.ಪಿ.ಮನು (ಕಾರ್ಯದರ್ಶಿ), ಕೆ.ರವಿ, ಸ್ಟೀಫನ್, ಶಾಂತಮ್ಮ, ಬಿ.ಜಿ.ಸುಧೀರ್, ಕೆ.ಜೆ.ಡೇವಿಸ್, ಕೆ.ಸಿ.ಸದಾಶಿವ, ಕೆ.ಸಿ.ಚಂದ್ರಶೇಖರ್, ಕೆ.ಕೆ.ಬಾಬುನಾಯ್ಕ, ಉಮೇಶ್ (ನಿರ್ದೇಶಕರು) ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts